ಬೆಳಗಾವಿ
ದಕ್ಷಿಣ ಭಾರತದ ನಗರಗಳ ಪೈಕಿ ಬೆಳಗಾವಿ ಸ್ಮಾರ್ಟ ಸಿಟಿಗೆ ಸಮಗ್ರ ಪ್ರಶಸ್ತಿ ಲಭಿಸಿದ್ದಕ್ಕಾಗಿ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಸಿಹಿ ವಿತರಿಸಿ ಸಂಭ್ರಮಿಸಿದರು.
ವಾರ್ಡ ನಂಬರ 43 ರಲ್ಲಿ ಬರುವ ಬೂಡಾ ಕಾಲೊನಿಯಲ್ಲಿ ನಡೆದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಕ್ಕೆ ಚಾಲನೆ ನೀಡುವಾಗ ಎಲ್ಲರಿಗೂ ಸಿಹಿ ವಿತರಿಸಿ ಖುಷಿಪಟ್ಟರು.
ಬೆಳಗಾವಿಗೆ ಒಟ್ಟಾರೆ ಅಭಿವೃದ್ಧಿ ಗೆ ಸ್ಮಾರ್ಟ ಸಿಟಿ ಪ್ರಶಸ್ತಿ ಸಿಕ್ಕಿದೆ ರಾಷ್ಟ್ರಪತಿ ಗಳೇ ಪ್ರಶಸ್ತಿ ವಿತರಣೆ ಮಾಡಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು.
ಸ್ಮಾರ್ಟ ಪ್ರಶಸ್ತಿ- ಟೀಕಾಕಾರರಿಗೆ ರಾಷ್ಟ್ರಪತಿ ಉತ್ತರ
https://ebelagavi.com/index.php/2023/09/30/k-4/
ಈ ಪ್ರಶಸ್ತಿಗೆ ಕಾರಣಿಕರ್ತರಾದ ಅಭಿವೃದ್ಧಿ ಪರ ಚಿಙತಕ ಶಾಸಕ ಅಭಯ ಪಾಟೀಲ ಮತ್ತು ಅಧಿಕಾರಿಗಳು ಇದಕ್ಕೆ ಕಾರಣರು ಎಂದುವಾಣಿ ವಿಲಾಸ ಜೋಶಿ ಹೇಳಿದರು.
ಬೂಡಾ ಕಾಲೋನಿ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.