Headlines

ಲೋಕ ಸಮರಕ್ಕೆ ನಾನೂ ರೆಡಿ..!

BJP ಯಲ್ಲಿ ಹೆಚ್ಚಿದ ಪೈಪೋಟಿ., ಮೂವರು ಮಹಿಳೆಯರಿಂದ ಅರ್ಜಿ.

ಹಾಲಿ ಸಂಸದೆ ಮಂಗಲಾ ಅಂಗಡಿ, ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ನ್ಯಾಯವಾದಿ ವಿದ್ಯಾ ಪಾಟೀಲರಿಂದ ಅರ್ಜಿ.

ಬೆಳಗಾವಿ.

ಜಿಲ್ಲೆಯ ಬೆಳಗಾವಿ ಲೋಕಸಮರದಲ್ಲಿ ಆಖಾಡಕ್ಕಿಳಿಯಲು ಬಿಜೆಪಿ ಯಲ್ಲಿ ಭಾರೀ ಪೈಪೋಟಿ ಶುರುಚಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಳಗಾವಿಗೆ ಆಗಮಿಸುವ ಮುನ್ನಾ ದಿನವೇ ಆಕಾಂಕ್ಷಿಗಳು ತಮ್ಮ ಅರ್ಜಿಯನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ಇಂದು ಸಲ್ಲಿಸಿದ್ದಾರೆ.

ನಗರದ ಖಾಸಗಿ ಹೊಟೇಲ ನಲ್ಲಿ‌ ಜಿಲ್ಲೆಯ ಘಟಾನುಘಟಿ ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಿದರು.

ಮೂಲಗಳ ಪ್ರಕಾರ, ಹಾಲಿ ಸಂಸದೆ ಮಂಗಲಾ ಅಂಗಡಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಸೊಸೆ ಶೃದ್ಧಾ ಶೆಟ್ಟರ್, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ ಮತ್ತು ನ್ಯಾಯವಾದಿಯೂ ಆಗಿರುವ ಪಂಚಮಸಾಲಿ ಪಂಚಸೈನ್ಯದ ರಾಜ್ಯ‌ಮಹಿಳಾ ಘಟಕದ ಉಪಾಧ್ಯಕ್ಷೆ ವಿದ್ಯಾ ಪಾಟೀಲ ಅವರು ಅರ್ಜಿ ನೀಡಿದ್ದಾರೆ.

ಈ ವಾರಿ ಹೊಸ ಮುಖಕ್ಕೆ ಅವಕಾಶ ಕೊಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ.‌ನಾಳೆ ನಡ್ಡಾ ಅವರೊಂದಿಗೂ‌ ಈ‌ ನಿಟ್ಡಿನಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

Leave a Reply

Your email address will not be published. Required fields are marked *

error: Content is protected !!