Headlines

ಬೆಳಗಾವಿ ದಕ್ಷಿಣದಲ್ಲಿ ಜಂಗೀ ಕುಸ್ತಿ…!

ಬೆಳಗಾವಿ:


ಗಡಿನಾಡ ಬೆಳಗಾವಿಯಲ್ಲಿ ರಾಜಕೀಯ ವ್ಯಕ್ಯಿಗಳ ನಡುವೆ ಸ್ಮಾರ್ಟ್ ಕುಸ್ತಿಗಳು ಜೋರಾಗಿ ನಡೆದಿವೆ, ಅದೂ ದೊಡ್ಡವರೇ ಈಗ ಅಖಾಡಾಕ್ಕೆ ಇಳಿದಿದ್ದು ಕಣ ರಣ ರೋಚಕವಾಗಿದೆ.ಹೀಗಾಗಿ ಈ ಕುಸ್ತಿ ಕೆಲವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಲೋಕಸಭೆ ಚುನಾವಣೆ

.ಲೋಕಸಭೆ ಚುನಾವಣೆ ಸನ್ನಿಹಿತವಾಗುವ ಸಂದರ್ಭದಲ್ಲಿ ಆಡೆಳಿತಾರೂಢ ಕಾಂಗ್ರೆಸ್ ಪಕ್ಷದವರು ಬಿಜೆಪಿಯನ್ನು ಹಣಿಯಲು ಹರಸಾಹಸ ಮಾಡುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದ ಕುಸ್ತಿ ಹೇಗಿತ್ತು ಎನ್ನುವುದು ಜಗಜ್ಜಾಹೀರ, ಫಲಿತಾಂಶಕ್ಕೂ ಮೊದಲೇ ಕೆಲವರು ಗೆದ್ದೇಬಿಟ್ಟೇವು ಎಂದು ಬೀಗಿದ್ದರು, ಅದು ಈಗ ಮುಗಿದ ಅಧ್ಯಾಯ.

ಈಗ ಮತ್ತೇ ಬಿಜೆಪಿ ವಿರೋಧಿಗಳೆಲ್ಲರೂ ಒಂದಾಗುತ್ತಿದ್ದಾರೆ, ಅದರಲ್ಲೂ ಪಕ್ಷ ಬೇಧ ಮರೆತು ಒಂದಾಗುತ್ತಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಬಿಜೆಪಿಯು ಎಲ್ಲ ವಿರೋಧಿಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.ಆದರೆ ಅದಕ್ಕಿಂತ ಮೊದಲು ಅಂತರಿಕವಾಗಿರುವ ವಿರೋಧಿಗಳನ್ನು ಹಣೆಯುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಬೇಕಾಗಿದೆ ಅದರಲ್ಲೂ ಪಾಲಿಕೆಯಲ್ಲಿ ಬಿಜೆಪಿಯಲ್ಲಿದ್ದುಕೊಂಡೇ ಗುಂಪುಗಾರಿಕೆ ನಡೆಸಿ ಪಕ್ಷದ ವರ್ಚಸ್ದಿಗೆ ಧಕ್ಕೆ ತರುವವರನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಬಿಜೆಪಿಯವರೇ ಮಾಡಬೇಕಿದೆ

,
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಾಡವಿರೋಧಿ ಎಂಇಎಸ್ ಜೊತೆ ಸೇರಿ ಸ್ಮಾರ್ಟ ಸಿಟಿ ವಿರುದ್ಧ ಪ್ರತಿಭಟನೆ ನಡೆಸಿತು. ಶಾಸಕ ಅಭಯ ಪಾಟೀಲರ ಭಾವಚಿತ್ರ ಹಿಡಿದುಕೊಂಡು ಧಿಕ್ಕಾರ ಕೂಡ ಹಾಕಿದರು.
ಇಲ್ಲಿ ಪ್ರತಿಭಟನಾಕಾರರು ನೇರವಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದರು,


ರಾಷ್ಟ್ರಪತಿಗಳು ಬೆಳಗಾವಿ ಸ್ಮಾರ್ಟ ಸಿಟಿಗೆ ಸಮಗ್ರ ಪ್ರಶಸ್ತಿ ನೀಡಿ ಅಭಿನಂದಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಶಹಾಪುರ ಪ್ರದೇಶದಲ್ಲಿಯೇ ಪ್ರತಿಭಟನೆ ನಡೆಸಿದ್ದು ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಆರೋಪವನ್ನು ಪ್ರತಿಭಟನಾಕಾರರು ಮಾಡಿದ್ದಾರೆ, ಇದು ಮೊದಲ ಸಲ ಏನಲ್ಲ.
ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರು ಮೊದಲ ಬಾರಿಗೆ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಸಭೆಯನ್ನು ನಡೆಸಿದಾಗಲೂ ಕೂಡ ಇವತ್ತು ಪ್ರತಿಭಟನೆಯ ಮುಖಂಡತ್ವ ವಹಿಸಿದ್ದ ಕೆಲವರು ಇದೇ ರೀತಿಯ ಆರೋಪವನ್ನು ಅಂದೂ ಮಾಡಿದ್ದರು, ಆಗ ಸತೀಶ ಜಾರಕಿಹೊಳಿಯವರು ತನಿಖೆ ಮಾಡಿಸುವುದಾಗಿ ಹೇಳಿದ್ದರು,
ಈಗ ಮತ್ತದೇ ಆರೋಪ ಬಂದಿದೆ, ಅಷ್ಟೇ ಅಲ್ಲ ಸಚಿವರು ಮತ್ತದೇ ಉತ್ತರವನ್ನು ಕೊಟ್ಟಿದ್ದಾರೆ,


ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಬುಟ್ಟಿಯಲ್ಲಿ ಮಣ್ಣು ಹಾಗೂ ಜೆಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಿಜೆಪಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಮಗಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ ಅಧಿಕಾರಿಗಳಿಂದಲೇ ನಷ್ಟದ ಪರಿಹಾರವನ್ನು ಕೂಡಿಸಬೇಕು ಎಂದು ಸುಜಿತ್ ಮುಳಗುಂದ ಆಗ್ರಹಿಸಿದರು,


ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಮಾತನಾಡಿ, ಕಾಂಗ್ರೆಸ್ ರಸ್ತೆ ಸೇರಿದಂತೆ ಕೆಲವು ಕಡೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸ್ಮಾರ್ಟ್ ಸಿಟಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಮೊದಲಿಗೆ ರಾಜ ಕಾಲುವೆ ಮತ್ತು ಪ್ರಾಥಮಿಕ ಕಾಲುವೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಕಾಲುವೆಗಳ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಮಳೆಯಾಗಿ ರಸ್ತೆ ಮೇಲೆ ನೀರು ಹರಿದು ಹೋಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ಪ್ರದೀಪ್ ಎಂ.ಜೆ., ಅಜೀಂ ಪಟೇಗಾರ್, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಮಾಕಾಂತ ಕೊಂಡೂಸ್ಕರ್, ಪ್ರತಿಭಾ ಪಾಟೀಲ್, ಆಯಿಶಾ ಸನದಿ, ಎನ್.ಆರ್.ಲಾತೂರ್, ಪರಶುರಾಮ ಡಗೆ, ರಾಜನ್ ಹುಲಬತ್ತೆ, ರಾಘವೇಂದ್ರ ಲೋಕರಿ, ರಮೇಶ ಸೋಂಟಕ್ಕಿ, ಸರಳಾ ಸಾತ್ಪುತೆ, ಶುಭಂ ಸೆಳಕೆ, ದೀಪಕ ಜಮಖಂಡಿ, ಸರೀತಾ ಪಾಟೀಲ, ರೇಣು ಕಿಲ್ಲೇಕರ, ಕಿರಣ ಗಾವಡೆ, ಸಂಜಯ ಶಿಂಧೆ, ಸಂತೋಷ ಕಾಂಬಳೆ, ಫೈಯಾಜ್ ಸೌಧಾಗರ, ಮಜಹರ ಮುಲ್ಲಾ, ರಾಕೇಶ ತಳವಾರ, ವಿಠ್ಠಲ್ ಯಳ್ಳೂರಕರ, ಸಲೀಂ ಕಾಶಿಂನವರ, ಬಸವರಾಜ ಶಿಗಾವಿ, ರವಿ ಸಾಳುಂಕೆ, ಕುಷರ್ಿದ ಮುಲ್ಲಾ, ಕಸ್ತೂರಿ ಕೋಲ್ಕಾರ, ಕುಶಪ್ಪ ತಳವಾರ, ಶ್ರೀನಿವಾಸ ತಾಳೂಕರ ಸೇರಿದಂತೆ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರ

Leave a Reply

Your email address will not be published. Required fields are marked *

error: Content is protected !!