ಪಿಡಬ್ಲುಡಿ ಕಮಿಟಿಯಲ್ಲಿ ಮಹತ್ತರ ತೀರ್ಮಾನ
ರಾಜ್ಯದಲ್ಲಿಯೇ ಮೊದಲ ಪ್ಲ್ಯಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಾಣ.
ಪರಿಸರ ಸ್ನೇಹಿ ರಸ್ತೆ ನಿರ್ಮಾಣಕ್ಕೆ ಚಾಲನೆ
ಬೆಳಗಾವಿ.
ಗಡಿನಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕೆಲವು ಟೀಕೆಗಳ ನಡುವೆಯೇ ಬೆಳಗಾವಿಗರು `ಹೌದು‘ ಎನ್ನುವಂತಹ ಕೆಲಸಗಳು ನಡೆದಿವೆ.
ಗಮನಿಸಬೇಕಾದ ಸಂಗತಿ ಎಂದರೆ, ಮಹಾರಾಷ್ಟ್ರ ಹೊರತುಪಡಿಸಿ ಇಡೀ ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟ ಮೊದಲು ಎನ್ನುವಂತೆ ಪ್ಲ್ಯಾಸ್ಟಿಕ್ ಬಳಸಿ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ.

ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಅವರ ಅಧ್ಯಕ್ಷತೆಯ ಕಮಿಟಿಯಲ್ಲಿ ಇಂತಹುದೊಂದು ಮಹತ್ತದ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆಗೆ ಅನುಮತಿ ಸಿಕ್ಕಿದೆ.
ನಾಳೆ ದಿ. 2 ರಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಇಂತಹುದೊಂದು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಹ ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.
ಪರಿಸರ ಮಾಲಿನ್ಯ ತಡೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಒಂದೆಡೆಯಾದರೆ ಬೆಳಗಾವಿ ಮಹಾನಗರ ಪಾಲಿಕೆ ಇದೇ ಪ್ಲಾಸ್ಟಿಕ್ನ ಪೌಡರ್ ಬಳಸಿ ರಸ್ತೆ ನಿರ್ಮಿಸಲು ಮುಂದಾಗಿದ್ದು ವಿಶೇಷವಾಗಿದೆ,

ಪ್ಲಾಸ್ಟಿಕ್ಗೆ ಸಂಪೂರ್ಣವಾಗಿ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಇಂಥ ಪ್ಲಾಸ್ಟಿಕ್ಗೆ ಸಂಪೂರ್ಣ ನಿಷೇಧ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಶತಗತಾಯ ಪ್ರಯತ್ನ ನಡೆಸಿದ್ದಾರೆ, ಇದೆಲ್ಲದರ ಮಧ್ಯೆ ಅದೇ ಪ್ಲಾಸ್ಟಿಕ್ದಿಂದಲೇ ಪೌಡರ್ ಮಾಡಿ ರಸ್ತೆ ಡಾಂಬರೀಕರಣ ಮಾಡುವ ಬಗ್ಗೆ ಚಿಂತನೆ ಪಾಲಿಕೆ ನಡೆಸಿತ್ತು.

ಶಾಸಕ ಅಭಯ ಪಾಟೀಲರು ಸಹ ಈ ನಿಟ್ಟಿನಲ್ಲಿ ಸ್ಥಾಯಿ ಸಮಿತಿ ಆಧ್ಯಕ್ಷರೊಂದಿಗೆ ಚರ್ಚೆ ಕೂಡ ನಡೆಸಿದ್ದರು, ಗಮನಿಸಬೇಕಾದ ಸಂಗತಿ ಎಂದರೆ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪರಿಸರ ಅಧಿಕಾರಿ ಹನುಮಂತ ಕಲಾದಗಿ ಸೇರಿದಂತೆ ಉಪ ಆಯುಕ್ತ ಉದಯಕುಮಾರ ತಳವಾರ ಮುಂತಾದವರು ಸೇರಿದಂತೆ ಅಭಿಯಂತರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರು, ಅದೆಲ್ಲದರ ಪರಿಣಾಮ ನಾಳೆ ಪ್ಲ್ಯಾಸ್ಟಿಕ್ ಪೌಡರ ಬಳಸಿ ರಸ್ತೆ ನಿರ್ಮಾಣಕ್ಕೆ ಪ್ರಾಯೋಗಿಕವಾಗಿ ಚಾಲನೆ ಸಿಗಲಿದೆ.
ನಿತ್ಯ 6 ಟನ್ ಪ್ಲ್ಯಾಸ್ಟಿಕ್..!

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ 5 ರಿಂದ 6 ಟನ್ನಷ್ಟು ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯವು ಉತ್ಪತ್ತಿಯಾಗುತ್ತಿದೆ. ಈಗಾಗಲೇ ಸರ್ಕಾರದನಿರ್ದೇಶನದಂತೆ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಸದರಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧಗೊಳ್ಳದೇ ಇರುವುದು ವಾಸ್ತವ. ಈ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಸಂಗತಿ ಗೊತ್ತಾದ ಕೂಡಲೇ ಸಕರ್ಾರ ಮತ್ತು ಕೋರ್ಟ ಆದೇಶವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿತ್ತು,

ಈ ನಿಟ್ಟಿನಲ್ಲಿ ಸ್ಥಾಯಿ ಸಮಿತಿ ಸಭೆಯಲ್ಲಿ ಕೂಡ ಅಧಿಕಾರಿಗಳೊಂದಿಗೆ ಹಲವು ಬಾರಿ ಚಚರ್ೆ ಕೂಡ ಆಗಿತ್ತು ಎಂದು ಪಿಡಬ್ಲುಡಿ ಕಮಿಟ ಅಧ್ಯಕ್ಷೆ ವಾಣಿ ಜೋಶಿ ಹೇಳುತ್ತಾರೆ.

ಮರು ಬಳಕೆಗೆ ಯೋಜನೆ
ಬೆಳಗಾವಿ ಮಹಾನಗರ ಪಾಲಿಕೆಯಿಂದ ಸದರಿ ತ್ಯಾಜ್ಯವನ್ನು ಬೇರೆ-ಬೇರೆ ವಿಧಾನಗಳ ಮೂಲಕ ಮರುಬಳಕೆ ಮಾಡಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಪರಿಸರ ಸ್ನೇಹಿ ವಿನೂತನ ಯೋಜನೆಯನ್ನು ರೂಪಿಸಲಾಗಿದ್ದು, ಅದರ ತ್ಯಾಜ್ಯವನ್ನು ಬಳಸಿ ನಿರ್ಮುಸುವ ರಸ್ತೆಯು ಡಾಂಬರೀಕರಣ ರಸ್ತೆಗಳಿಗಿಂತ ನಿರ್ಮಾಣ ವೆಚ್ಚ, ಬಾಳಿಕೆ ಹಾಗೂ ಗುಣಮಟ್ಟದಲ್ಲಿ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಇಂತಹ ವಿನೂತನಯೋಜನೆಗೆ ಮುಂದಾಗಿದೆ.

ಗುತ್ತಿಗೆದಾರರಿಗೆ ಸೂಚನೆ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಸ್ತೆ ನಿರ್ಮಿಸುವ ಗುತ್ತಿಗೆದಾರರು ಕಡ್ಡಾಯವಾಗಿ ಪ್ಲಾಸ್ಟಿಕ್ ಪೌಡರ್ ಬಳಸಬೇಕೆಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಬೇರ್ಪಡಿಸಿ ಯಂತ್ರದ ಸಹಾಯದಿಂದ ಪ್ಲಾಸ್ಟಿಕ್ ಪೌಡರ್ ಮಾಡಿ ರಸ್ತೆಗೆ ಬಳಸಿಕೊಳ್ಳುವ ಪ್ಲಾನ್ ಮಾಡಿಕೊಳ್ಳಲಾಗಿದೆ.
ಈಗಾಗಲೇ ನಗರದ ವಿವಿಧ ಕಡೆಗೆ ದಾಳಿ ನಡೆಸಿರುವ ಮಹಾನಗರ ಪಾಲಿಕೆಯವರು ಒಮ್ಮೆ ಬಳಕೆಯ ಪ್ಲಾಸ್ಟಿಕ್ ಅನ್ನು ಟನ್ಗಟ್ಟಲೇ ವಶಕ್ಕೆ ಪಡೆದುಕೊಂಡಿದೆ. ಇದೆಲ್ಲವನ್ನೂ ಪೌಡರ್ ತಯಾರಿಕೆಗೆ ಬಳಸಲಿದೆ.
ಬೆಳಗಾವಿಯ ಆಟೋ ನಗರದ ಕಾರ್ಖಾನೆಯೊಂದರಲ್ಕಿ ಪ್ಲಾಸ್ಟಿಕ್ ಪೌಡರ್ ತಯಾರಿಸಲಾಗುತ್ತಿದೆ. ಇಲ್ಲಿಂದ ರಸ್ತೆಗೆ ಅವಶ್ಯಕತೆ ಇರುವ ಪೌಡರ್ ನೀಡಲಾಗುತ್ತಿದೆ. ಈಗ ಸದ್ಯ 500 ಕೆ.ಜಿ. ಪೌಡರ್ ನಿರ್ಮಿಸ ಸಲಾಗಿದೆ.
ಬೆಳಗಾವಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಇನ್ನು ಮುಂದೆ ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆ ಹೊಂದಲಾಗಿದೆ.
ಪೌಡರ್ ತಯಾರಿಕೆ ಯಂತ್ರ ಖರೀದಿ: ಮಹಾನಗರ ಪಾಲಿಕೆ ಇನ್ನು ಮುಂದೆ ಸ್ವಂತ ಖರ್ಚಿನಿಂದಲೇ ಪ್ಲಾಸ್ಟಿಕನಿಂದ ಪೌಡರ್ ನಿರ್ಮಾಣದ ಯಂತ್ರ ಖರೀದಿಸಲಿದೆ. ಇಲ್ಲಿ ತಯಾರಾಗುವ ಪೌಡರ್ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಮಾರಾಟ ಮಾಡಲಿದೆ. ಇದರಿಂದ ತಮ್ಮ ಯೋಜನೆಯೂ ಕಾರ್ಯಗತವಾಗುವುದರ ಜತೆಗೆ ಪೌಡರ್ ಮಾರಾಟದಿಂದ ಪಾಲಿಕೆಗೂ ಆದಾಯ ಹೆಚ್ಚಲಿದೆ ಎಂದು ಪರಿಸರ ಅಧಿಕಾರಿ ಹನುಮಂತ ಕಲಾದಗಿ ಹೇಳುತ್ತಾರೆ.
ಪ್ರಾಯೋಗಿಕವಾಗಿ ಚಾಲನೆ

ಬೆಳಗಾವಿ ಪಾಲಿಕೆ ವತಿಯಿಂದ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಸಲಕರಣೆಗಳು, ರಸ್ತೆ ನಿರ್ಮಾಣಕ್ಕೆ ಬೇಕಾಗುವ ಪ್ಲಾಸ್ಟಿಕ್ ಪೌಡರ್ ತಯಾರಾಗಿದೆ. ಈಗ ಪಾಲಿಕೆ ಎದುರಿನ ರಸ್ತೆಯನ್ನು ಪ್ರಾಯೋಗಿಕವಾಗಿ ಮಾಡಲಾಗುವುದು.
ಅಶೋಕ ದುಡಗುಂಟಿ, ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ

