Headlines

138 ಪಿಕೆ ನೇಮಕ ರದ್ದು?

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ತೀವೃ ಚರ್ಚೆಯ ವಸ್ತುವಾಗಿರುವ 138 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ರದ್ದುಗೊಳಿಸಿದ್ದಾರೆ.

ಈ 138 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪ್ರಕ್ರಿಯೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆದಿತ್ತು. ಅಷ್ಟೇ ಅಲ್ಲ ಹಲವು ದೂರುಗಳೂ ಸಹ ಕೇಳಿ ಬಂದಿದ್ದವು.

ಇಲ್ಲಿ ಪಾಲಿಕೆ ಸಭೆಯ ಅನುಮತಿ ಮುನ್ನವೇ ಅವರನ್ಬು ಯಾವುದೇ ಆದೇಶವಿಲ್ಲದೇ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಎನ್ನುವ ದೂರು ಆಯುಕ್ತರ ಬಾಗಿಲು ತಟ್ಟಿತ್ತು.

ಈ ಹಿನ್ನೆಲೆಯಲ್ಲಿ ಆಯುಕ್ತರು ಈ ಸಂಬಂಧ ಮಧ್ಯಂತರ ವರದಿ ಕೊಡಬೇಕು ಎಂದು ಸಂಬಂಧಿಸಿದ ಹನುಮಂತ ಕಲಾದಗಿ ಅವರಿಗೆ ಸೂಚನೆ ನೀಡಿದ್ದರು.‌ಆದರೆ ಅವರು ವರದಿ‌ ನೀಡಲಿಲ್ಲ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ ಆರೋಗ್ಯ‌ ಶಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ‌‌ ಕೂಡ ಆಯುಕ್ತರ ಪ್ರಶ್ನೆಗಳಿಗೆ ಸ್ಷಷ್ಟ ಉತ್ತರ ಸಹ ಬರಲಿಲ್ಲ. ಹೀಗಾಗಿ‌‌ ಹೊಸದಾಗಿ‌ ನಿಯಮಾನುಸಾರ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಒಂದುವರೆ ತಿಂಗಳಿಂದ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸಂಬಳ‌ ಪಾವತಿ ಈಗ ಕಗ್ಗಂಟಾಗುವ ಸಾಧ್ಯತೆ ಇದೆ.

ಪಾಲಿಕೆಯ ಆಡಳಿತ ಪಕ್ಷದ ಬಹುತೇಕ ನಗರಸೇವಕರು ಪೌರ ಕಾರ್ಮಿಕರ ನೇಮಕ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಅಭಯ ಪಾಟೀಲ ಕೂಡ ನೇಮಕ ಪಾರದರ್ಶಕವಾಗಿರಲಿ ಎಂದು ಸೂಚನೆ ನೀಡಿದ್ದರು.

ಬೆಳಗಾವಿಯಲ್ಲಿ ಕುರ್ಚಿ ಕುಸ್ತಿ

https://ebelagavi.com/index.php/2023/09/06/hi-47/

Leave a Reply

Your email address will not be published. Required fields are marked *

error: Content is protected !!