ಗ್ರಹಣ ಬಂದಾಗ ಪೂಜೆ ಮಾಡ್ತೀವಿ, ಆದರೆ ಕಣಕ್ಕಿಳಿಯದೇ ಇರೋದು ನಮಗೆ ಸರಿಯಲ್ಲ!’ — ಲಕ್ಷ್ಮಣ ಸವದಿ
ಗುಂಪು ರಾಜಕಾರಣ ಇಲ್ಲ, ಸಹಕಾರ ಕ್ಷೇತ್ರಕ್ಕೆ ಹೊಸ ಉಸಿರು ಕೊಡೋಣ’ — ರಾಜು ಕಾಗೆ
ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಯ ರಣಭೇರಿಯಲ್ಲಿ, ಅಥಣಿ–ಕಾಗವಾಡದ ರಾಜಕೀಯ ಜೋಡೆತ್ತು ಮತ್ತೆ ವೇದಿಕೆ ಹಂಚಿಕೊಂಡಿದೆ. ಅಥಣಿಯಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಾಗೂ ಕಾಗವಾಡದಿಂದ ಶಾಸಕ ರಾಜು ಕಾಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು, ಮಾಧ್ಯಮ ಎದುರು ಇಬ್ಬರೂ ತಮ್ಮದೇ ಶೈಲಿಯಲ್ಲಿ ರಾಜಕೀಯ ಸಂದೇಶ ನೀಡಿದ್ದಾರೆ.
ಸೂರ್ಯ, ಚಂದ್ರನಿಗೆ ಗ್ರಹಣ ಬಂದರೂ ಕಣಕ್ಕಿಳಿಯುತ್ತೇವೆ” ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಸವದಿ, ಹೇಳಿದ್ದು ಹೀಗೆ
1995ರಲ್ಲಿ ನನ್ನನ್ನು ಡಿಸಿಸಿ ಬ್ಯಾಂಕ್‌ಗೆ ಕಳಿಸೋಲ್ಲಿ ರಾಜು ಕಾಗೆ ಪ್ರಮುಖ ಪಾತ್ರ ವಹಿಸಿದ್ದರು. ನಮ್ಮಿಬ್ಬರನ್ನೂ ಆ ಭಾಗದ ಜನ ‘ಜೋಡೆತ್ತು’ ಅಂತ ಕರೀತಾರೆ. ಜನ ಆಶೆಪಟ್ಟಿದ್ದಾರೆ, ಹಾಗಾಗಿ ನಾಮಿನೇಷನ್ ಮಾಡಿದ್ದೀವಿ.”
“ಸೂರ್ಯ, ಚಂದ್ರನಿಗೆ ಪ್ರತಿದಿನ ಗ್ರಹಣ ಬರುವುದಿಲ್ಲ. ಬಂದಾಗ ಪೂಜೆ ಪುನಸ್ಕಾರ ಮಾಡ್ತೀವಿ. ಹಾಗೆ ನಮ್ಮಿಗೂ ಗ್ರಹಣ ಬಂದರೂ ಆಟ ಆಡಿಸೋ ಮೇಲೊಬ್ಬ ಇದ್ದಾನೆ — ನಾವು ಗೊಂಬೆಗಳು, ಆಟ ಆಡಬೇಕು!”
ನಾನು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ.
“ನಾನು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ. ಉಪಮುಖ್ಯಮಂತ್ರಿಯೂ ಆಗಿದ್ದೆನೆ, ಅನೇಕ ಇಲಾಖೆಯನ್ನೂ ನೋಡಿದ್ದೆನೆ. ಆದರೆ ಜನರ ಆಸೆ ನನ್ನ ಬಲ.”
ಅಥಣಿ ಕ್ಷೇತ್ರದ 125 ಮತದಾರರಲ್ಲಿ 122 ಜನ ತಮ್ಮ ಬೆಂಬಲದಲ್ಲಿದ್ದಾರೆ ಎಂದು ಸವದಿ ಹೇಳಿದರು.
“ಯಾರಿಗೂ ಹಣ ಕೊಟ್ಟಿಲ್ಲ, ಊಟ ಮಾತ್ರ ಮಾಡಿಸ್ತಿದ್ದೀವಿ!” ಎಂದೂ ಹಾಸ್ಯಭರಿತ ಶೈಲಿಯಲ್ಲಿ ಹೇಳಿದರು
ಸಹಕಾರ ಕ್ಷೇತ್ರ ಬಲವಾಗಲಿ” ಕಾಗವಾಡದಿಂದ ನಾಮಪತ್ರ ಸಲ್ಲಿಸಿದ ಶಾಸಕ ರಾಜು ಕಾಗೆ, ಸಹಕಾರ ಕ್ಷೇತ್ರಕ್ಕೆ ಮೊದಲ ಬಾರಿಗೆ ಪ್ರವೇಶಿಸುತ್ತಿರುವುದಾಗಿ ಹೇಳಿದರು.
“ಪಂಚಾಯಿತಿ ಸದಸ್ಯನಿಂದ ಹಿಡಿದು ಐದು ಬಾರಿ ಶಾಸಕನಾಗಿದ್ದೇನೆ. ಈಗ ಸಹಕಾರ ಕ್ಷೇತ್ರಕ್ಕೂ ಹೊಸ ಉಸಿರು ಕೊಡಬೇಕೆಂದು ನಾಮಪತ್ರ ಸಲ್ಲಿಸಿದ್ದೇನೆ.”
“ನಾವು ಯಾವುದೇ ಗುಂಪಿನಲ್ಲೂ ಇಲ್ಲ. ಇದು ರಾಜಕಾರಣ, ಇವತ್ತಿನ ದಿನ ನಾಳೆ ಬದಲಾಗುತ್ತದೆ. ನಾಮಿನೇಷನ್ ಮಾಡಿದ್ದೇವೆ, ಜನ ತೀರ್ಪು ಕೊಡಲಿ.”
ಸವದಿ–ಕಾಗೆ ಜೋಡಿ ಮತ್ತೆ ರಾಜಕೀಯ ಚರ್ಚೆಗೆ* ಒಂದೇ ವೇದಿಕೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಸವದಿ–ಕಾಗೆ ಜೋಡಿ, ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. ‘ಜೋಡೆತ್ತು’ ಸಹಕಾರ ಕ್ಷೇತ್ರದತ್ತ ಚಲಿಸಿದರೆ, ಬೆಳಗಾವಿ ಜಿಲ್ಲೆ ಡಿಸಿಸಿ ಬ್ಯಾಂಕ್ ಚುನಾವಣೆಯು ಕೇವಲ ಸಹಕಾರದ ಲೆಕ್ಕಾಚಾರವಲ್ಲ — ಅದು ರಾಜಕೀಯ ತೂಕಮಾಪನದ ವೇದಿಕೆಯೂ ಆಗಲಿದೆ.