Headlines

ಕಾರು ವಂಚಕನ‌ ಬಂಧನ

ನಂಬಿಕೆ ದ್ರೋಹವೆಸಗಿದ ಕಾರು ವಂಚಕನ ಬಂಧನ

ಬೆಳಗಾವಿ, : ನಂಬಿಕೆ ದ್ರೋಹವೆಸಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮಹೇಶ ಜಗದೀಶ ಪಾಟೀಲ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ್ಯೋತಿನಗರ, ಕಂಗ್ರಾಳಿ ಕೆ.ಎಚ್. ಬೆಳಗಾವಿಯ ನಿವಾಸಿಯಾಗಿದ್ದಾನೆ.
ಮಹೇಶ ಪಾಟೀಲ ಕಾರು ಮಾಲೀಕರ ವಿಶ್ವಾಸ ಗಳಿಸಿ, ವಾಹನವನ್ನು ಬಳಸುವ ನೆಪದಲ್ಲಿ ಪಡೆದು, ನಂತರ ಅದನ್ನು ಹಿಂದಿರುಗಿಸದೆ ಮೊಬೈಲ್ ಸ್ವಿಚ್‌ಆಫ್ ಮಾಡಿದ್ದನು. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಪೊಲೀಸರ ಕಾರ್ಯಾಚರಣೆ: ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಮಾರ್ಕೆಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಧಾಮಣ್ಣವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ಪಿಎಸ್‌ಐ ಶಶಿಕುಮಾರ ಎಸ್. ಕುರಳೆ, ಎಎಸ್‌ಐ ಶಂಕರ ಶಿಂಧೆ ಮತ್ತು ಅವರ ತಂಡ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಒಟ್ಟು 21 ಲಕ್ಷ 50 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ಜಪ್ತಿ‌ಮಾಡಿಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!