Headlines

Case ಗೆ Counter case? ನ್ಯಾಯ ಮಾಯ..!

ಇದೆಂತಹ‌ ಬೆಳಗಾವಿ ಖಾಕಿ ನ್ಯಾಯ,? ಇಲ್ಲಿ ಪೊಲೀಸ್ ಸ್ಟೇಷನ್ ಕಟ್ಟೆ ಹತ್ತಿದವರೇ ತಪ್ಪಿತಸ್ಥರು. ನೋಂದವರು ಠಾಣೆ ಮೆಟ್ಟಿಲು ಹತ್ತಲು ಹೆದರುವ ಸ್ಥಿತಿ. ಹಾಗಿದ್ದರೆ ಪೊಲೀಸ್ ವಿಚಾರಣೆ ಎಲ್ಲಾ ನಾಮಕಾವಾಸ್ತೆನಾ? ಜವಳಕರ ಹಲ್ಲೆ ಪ್ರಕರಣದಲ್ಲಿ ಆಗಿದ್ದೂ ಅದೇನಾ? ರಾಜಕೀಯ ಒತ್ತಡಕ್ಕೆ‌ಮಣಿದರಾ ಪೊಲೀಸರು.

ಬೆಳಗಾವಿ.

ದುಷ್ಟರಿಗೆ ಕಾನೂನು ಮತ್ತು ಪೊಲೀಸ್ ಭಯ ಇರದೇ ಇದ್ದರೆ ಏನೆಲ್ಲಾ ಅನಾಹುತಗಳು ನಡೆಯುತ್ತವೆ ಎನ್ನುವುದಕ್ಕೆ ಬೆಳಗಾವಿ ತಾಲೂಕಿನ ಹೊಸವಂಟಮೂರಿ ಘಟನೆಯೇ ಸಾಕ್ಷಿ.

ಇಲ್ಲಿ ಘಟಪ್ರಭಾ ದಲ್ಲಿ ದಲಿತ ಮಹಿಳೆಯನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದಾಗಲೇ ಪೊಲೀಸರು ಬೆಂಡೆತ್ತುವ ಕೆಲಸ ಮಾಡಿದ್ದರೆ ಯಾರೂ ಹೀನ‌ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ.

ಆದರೆ ಏನಾಗಿದೆ ಅಂದರೆ, ಗಡಿನಾಡಲ್ಲಿ ಕೇಸ್ ಗೆ ಕೌಂಟರ್ ಕೇಸ್ ಮಾಡುತ್ತ ನೊಂದವರಿಗೆ ನ್ಯಾಯ ಸಿಗದ ವ್ಯವಸ್ಥೆ ತರುವ ಕೆಲಸವನ್ಬು ಪೊಲೀಸರು ಮಾಡುತ್ತಿರುವುದು ಇಂತಹ ಘಟನೆಗಳು ನಡೆಯಲು ಕಾರಣ ಎನ್ನುವ ಮಾತಿದೆ.

ಸಿಂಪಲ್ ಆಗಿ ಹೇಳಬೇಕೆಂದರೆ ಬೆಳಗಾವಿಯಲ್ಲಿ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಇಲ್ಲಿ ಪೊಲೀಸರು ನ್ಯಾಯಯುತವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ‌ ತೆಗೆದುಕೊಳ್ಳಬೇಕಿತ್ತು. ಆದರೆ ಅದನ್ನು ಪೊಲೀಸರು ಮಾಡಲೇ ಇಲ್ಲ. ಇಲ್ಲಿ‌ ಹಲ್ಲೆಗೊಳಗಾದ ಜವಳಕರ ನೀಡಿದ ದೂರಿನ ಮೇರೆಗೆ ರಮೇಶ ಪಾಟೀಲನನ್ನು ಅರೆಸ್ಟ್ ಮಾಡಿದರು.

ನಂತರ ಅವರ ಕಡೆಯಿಂದಲೂ ಕೌಂಟರ್ ಕೇಸ್ ಪಡೆದು ಹಲ್ಲೆಗೊಳಗಾದವರನ್ನೇ ಜೈಲಿಗಟ್ಟುವ ಕೆಲಸವನ್ನು ಪೊಲೀಸರು ಮಾಡಿದರು.

ಅಂದರೆ ಇಲ್ಲಿ ಅನ್ಯಾಯಕ್ಕೊಳಗಾದವರಿಗೆ ಮತ್ತಷ್ಟು ಅನ್ಯಾಯ ಮಾಡಿದಂತೆಯೇ ಸರಿ

ಇಲ್ಲಿ ಜವಳಕರ ಪ್ರಕರಣವನ್ನು ಸೂಕ್ಷ್ಮವಾಗಿ‌ ಗಮನಿಸಿದಾಗ ಹತ್ತು ಹಲವು ಲೋಪ ದೋಷಗಳು ಕಂಡು ಬರುತ್ತವೆ. ಇಲ್ಲಿ ಹಲ್ಲೆಗೊಳಗಾದ ಜವಳಕರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಆದರೆ ಹಲ್ಲೆ ಮಾಡಿದ ವ್ಯಕ್ತಿ ಯಾವುದೇ ಆಸ್ಪತ್ರೆಗೆ ದಾಖಲಾಗಲಿಲ್ಲ. ಬದಲಾಗಿ ಎರಡು ದಿನಗಳ ನಂತರ ಪ್ರತಿ ದೂರು ಪಡೆದು ಜವಳಕರ ಅವರನ್ಬು ಚಿಕಿತ್ಸೆ ಪಡೆಯುತ್ತಿರುವಾಗಲೇ ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದರು.

ಈ ಪ್ರಕರಣವನ್ನು ಅರ್ಧಕ್ಕೆ ಕೈಬಿಡುವ ಪ್ರಶ್ನೆಯೇ ಇಲ್ಲ. ನಮ್ಮ ನಿಲುವು ಇದರಲ್ಲಿ ಸ್ಪಷ್ಟವಿದೆ ಗೃಹ ಮಂತ್ರಿಗಳು ಕೊಟ್ಟ ಭರವಸೆಯನ್ನು ನಂಬಿದ್ದೇವೆ. ಏಕೆಂದರೆ ಅವರು ಉತ್ತಮರು. ಅಂತಹವರ ಅಧಿಕಾರಾವಧಿಯಲ್ಲಿ ಇಂತಹ ತಪ್ಪುಗಳು ನಡೆಯಬಾರದು.‌ಹೀಗಾಗಿ ಸರ್ಕಾರಕ್ಕೆ ಕಪ್ಪು ಚುಕ್ಕೆ ಇದು. ಇಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ‌ ಆಗೊವರೆಗೆ ವಿಶ್ರಮಿಸಲ್ಲ.

ಅಭಯ ಪಾಟೀಲ. ಶಾಸಕರು. ಬೆಳಗಾವಿ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಭಯ ಪಾಟೀಲರು ಸದನದಲ್ಲಿ ಇದನ್ನು‌ ಪ್ರಸ್ತಾಪಿಸಿದರು. ಗೃಹ ಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಅದೆಲ್ಲಾ ಬಿಡಿ. ಸಧ್ಯ ಪೊಲೀಸ್ ರ ಕೇಸ್ ಕೌಂಟರ್ ಕೇಸ್ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ.

ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಮತ್ತು ಕಾನೂನು ಪರಿಣಿತರ ಪ್ರಕಾರ ಮೊದಲು ಹಲ್ಲೆಗೆ ಒಳಗಾದವರ ದೂರು ಪಡೆಯಬೇಕು. ಒಂದು ವೇಳೆ ಪ್ರತಿ ದೂರು ಕೊಟ್ಟರೂ ಸಹ ಅಚನ್ನು ತೆಗೆದುಕೊಂಡು ವಿಚಾರಣೆ ಮಾಡಿ ನಂತರ ತಪ್ಪು ಕಂಡು ಬಂದರೆ ಅರೆಸ್ಟ್ ಮಾಡಬಹುದು. ಆದರೆ ದೂರಿಗೆ ಪ್ರತಿ ದೂರು ಪಡೆದು ಅರೆಸ್ಟ್ ಮಾಡಿ ಜೈಲಿಗೆ ಕಳಿಸುವುದು ಸರಿಯಲ್ಲ.

ಆದರೆ ಅಭಿಜಿತ್ ಜವಳಕರ ಪ್ರಕರಣದಲ್ಲಿ ಟಿಳಿಕವಾಡಿ ಪೊಲೀಸರು ಎರಡು ದಿನ‌ಬಿಟ್ಟು ಪ್ರತಿ ದೂರು ಪಡೆದು ಅರೆಸ್ಟ ಮಾಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಸಲಾಯಿನ್ ಹಚ್ಚಿದ್ದನ್ನು‌ ಕಿತ್ತುಹಾಕಿ ತಾವೇ ಡಿಸ್ಚಾರ್ಜಸಮರಿ ಪಡೆದುಕೊಂಡು ಅವರನ್ನು ಹನುಮಾನ‌ ನಗರದಲ್ಲಿ ಸುತ್ತಾಡಿಸಿ ಕೊನೆಗೆ ಜೈಲಿಗೆ ಕಳಿಸಿ ಬಂದರು.

ಇಲ್ಲಿ ಪೊಲೀಸರು ಡಿಸ್ಚಾರ್ಜ ಆದ ನಂತರ ಜವಳಕರ ಅವರನ್ನು ಬಂಧಿಸಿದ್ದರೆ ಯಾರೂ ಪೊಲೀಸ್ ಕ್ರಮವನ್ನು ಪ್ರಶ್ನೆ ಮಾಡುತ್ತಿರಲಿಲ್ಲ ಆದರೆ ಈಗ ಅವಸರಕ್ಕೆಭಿದ್ದು ಒತ್ತಡಕ್ಕೆ ಒಳಗಾಗಿ ಏನೊ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುವ ಕೆಲಸವನ್ನು ಟಿಳಕವಾಡಿ ಪೊಲೀಸರು ಮಾಡಿದ್ದಾರೆ.

.

Leave a Reply

Your email address will not be published. Required fields are marked *

error: Content is protected !!