“ರಾಜಕಾರಣಕ್ಕೆ ಬಾಲ್ಯದ ನಗು ಸೇರಿಸಿದ ಕ್ಷಣ: ಖಾದರ್ ಆಟಾಟೋಪಕ್ಕೆ ಜನ ಆರಾಧನೆ”
“ಅಭಯ ಪಾಟೀಲ ಹಮ್ಮಿಕೊಂಡ ಆಟೋತ್ಸವಕ್ಕೆ ಖಾದರ್ ಚಾಲನೆ — ಬೆಳಗಾವಿಯಲ್ಲಿ ಬಾಲ್ಯ ಸ್ಫೂರ್ತಿ”
“ಮಕ್ಕಳ ಆಟಕ್ಕೆ ನಾಯಕರು ಮೈದಾನಕ್ಕಿಳಿದ ದಿನ: ಬೆಳಗಾವಿಯಲ್ಲೇ ಅಪರೂಪದ ಆಟ

ಬೆಳಗಾವಿ:
ಬಾಲ್ಯದ ನೆನಪುಗಳಲ್ಲಿ ಉಳಿದುಕೊಂಡಿರುವ ಗಿಲ್ಲಿ ಡಂಡಾ, ಲಗ್ಗೋರಿ, ಚೀಲದ ಓಟ, ಬಡಿಗೆಯಿಂದ ಹೊಡೆಯುತ್ತ ಟೈಯರ್ ಓಡಿಸುವುದು, ಗೋಟಿ ಆಟ, ಇವು ಇಂದಿನ ಪೀಳಿಗೆಯಲ್ಲಿ ಕೇವಲ ಕಥೆಗಳಷ್ಟೇ.
ಆದರೆ ಬೆಳಗಾವಿಯಲ್ಲಿ ದಕ್ಷಿಣ ಶಾಸಕ ಅಭಯ ಪಾಟೀಲ ಆಯೋಜನೆ ಮಾಡಿದವಿಶೇಷ ಕಾರ್ಯಕ್ರಮವು ಆ ಮರೆಯಾಗುತ್ತಿರುವ ಬಾಲ್ಯದ ಮಧುರ ಕ್ಷಣಗಳಿಗೆ ಮರಳಿ ಜೀವ ತುಂಬಿತು.
ಈ ಜನಮಾನಸಕ್ಕೆ ಹತ್ತಿರವಾದ ಬಾಲ್ಯದ ಆಟಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ವತಃ ಬಾಲ್ಯಕ್ಕೆ ಮರುಹೊಂದಿದಂತೆ ಆಟವನ್ನು ಆಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಗಂಭೀರತೆಯಿಂದ ಕೂಡಿದ್ದರೂ, ಖಾದರ್ ಅವರು ಆಟ ಹಿಡಿದ ಕ್ಷಣದಲ್ಲಿ ಅಂಗಳವೇ ನಗೆಗಡಲಲ್ಲಿ ತೇಲಿತು. . ಜನಸಾಮಾನ್ಯರು, ಮಕ್ಕಳು, ಹಿರಿಯರು ಎಲ್ಲರೂ ಸಮಾನವಾಗಿ ಆ ಕ್ಷಣವನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದರು.
ಯುವ ಪೀಳಿಗೆಯಲ್ಲಿ ಮೊಬೈಲ್ ಆಟ ಮತ್ತು ಡಿಜಿಟಲ್ ಪರದೆಗಳೇ ಪ್ರಧಾನವಾಗುತ್ತಿರುವ ಸಮಯದಲ್ಲಿ, ಈ ಕಾರ್ಯಕ್ರಮವು ಮರೆಯಾಗುತ್ತಿರುವ ನಮ್ಮ ಮೂಲ ಆಟಗಳ ಸಂಸ್ಕೃತಿ ಅನ್ನು ಮರುಪರಿಚಯ ಮಾಡಿಸುವ ಉದ್ದೇಶ ಹೊಂದಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಯ ಪಾಟೀಲರು ಇದು ಕೇವಲ ಆಟದ ಕಾರ್ಯಕ್ರಮವಲ್ಲ; ನಮ್ಮ ಸಂಸ್ಕೃತಿಯ ಗುರುತಾದ ಮನೆಮೈದಾನದ ಆಟಗಳಿಗೆ ಗೌರವ ಸೂಚನೆ ಎಂದು ಹೇಳಿದರು.
ಸ್ಪಧರ್ಾಥರ್ಿಗಳಲ್ಲಿ ಮಕ್ಕಳಷ್ಟೇ ಅಲ್ಲ, ಪೋಷಕರು, ಸ್ಥಳೀಯ ಕ್ರೀಡಾಪಟುಗಳು, ಮಹಿಳಾ ಗುಂಪುಗಳೂ ಭಾಗವಹಿಸಿದ್ದು, ಒಂದು ರೀತಿಯಲ್ಲಿ ಕುಟುಂಬ ಸಮಾಗಮದ ವಾತಾವರಣ ನಿಮರ್ಾಣವಾಯಿತು.
ವಿಧಾನಸಭಾದ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಬಾಲ್ಯದಲ್ಲಿ ನಾವು ಸಾಂಪ್ರದಾಯಿಕ ಮತ್ತು ಜಾನಪದ ಶೈಲಿಯ ಆಟ ಆಡುತ್ತಿದ್ದೆವು. ಅವು ದೈಹಿಕವಾಗಿ ನಮ್ಮನ್ನು ಸದೃಢವಾಗಿ ಇರಿಸುತ್ತಿದ್ದವು. ಅವುಗಳನ್ನು ಗುಂಪುಗಳಲ್ಲಿ ಆಡುವುದರಿಂದ ಜನರೊಂದಿಗಿನ ಬಾಂಧವ್ಯ ಬಲಗೊಳ್ಳುತ್ತಿತ್ತು.
ಇಂದು ಮಕ್ಕಳು ಮೊಬೈಲ್, ಕಂಪ್ಯೂಟರ್ ಆಟಗಳ ಗೀಳು ಬೆಳೆಸಿಕೊಂಡಿ ದ್ದಾರೆ. ಇದರಿಂದ ದೈಹಿಕವಾಗಿ ಸದೃಢರಾಗುವುದಿಲ್ಲ. ಹೀಗಾಗಿ ಉಲ್ಲಾಸದಿಂದ ಇರಲು ಸಾಂಪ್ರದಾಯಿಕ ಆಟಗಳನ್ನು ಆಡಬೇಕು ಎಂದು ಹೇಳಿದರು.
ಸಿದ್ದು ಸವದಿ ಮಾತನಾಡಿ, ಜನರು ತಮ್ಮ ಮಕ್ಕಳನ್ನು ಮೈದಾನಕ್ಕೆ ಕರೆತಂದು ಸಾಂಪ್ರದಾಯಿಕ ಆಟಗಳನ್ನು ಆಡಲು ಪ್ರೋತ್ಸಾಹಿಸಬೇಕು. ಯುವಪೀಳಿಗೆಗೆ ಬಾಲ್ಯ ಮತ್ತು ಸಾಂಪ್ರದಾಯಿಕ ಆಟಗಳ ಬಗ್ಗೆ ತಿಳಿಸಲು ಸತತ 10 ವರ್ಷಗಳಿಂದ ಈ ಕ್ರೀಡಾಕೂಟ ಆಯೋಜಿಸುತ್ತಿದ್ದೇವೆ. ಈ ಆಟಗಳು ನಮ್ಮ ಏಕಾಗ್ರತೆ ಸುಧಾರಿಸಲು ಸಹಾಯ ಮಾಡುತ್ತವೆ ಎಂದರು.
ರಣವಾಗಿ ಕಾರ್ಯಕ್ರಮಗಳಿಗೆ ರಿಬ್ಬನ್ ಕತ್ತರಿಸಿ ತೆರಳುವ ಪದ್ಧತಿಯನ್ನು ಮೀರಿ, ಸ್ವತಃ ಆಟ ಆಡುವ ಮೂಲಕ ಸಂದೇಶ ನೀಡಿದ ಖಾದರ್ ಅವರ ಈ ನಡೆ ಜನಮನದಲ್ಲಿ ವಿಶಿಷ್ಟ ಪ್ರತಿಧ್ವನಿ ಮೂಡಿಸಿತು.
ನಗರದ ವಿವಿಧ ಮೈದಾನಗಳಲ್ಲಿ ಈಗಾಗಲೇ ಶಾರೀರಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹಲವು ಕಾರ್ಯಕ್ರಮಗಳು ನಡೆದಿದ್ದರೂ, ಇಂತಹ ಅಪರೂಪದ ಬಾಲ್ಯದ ಆಟಗಳ ಮೇಳ ನಡೆದದ್ದು ಅಪರೂಪದಲ್ಲಿ ಅಪರೂಪ.
ಸ್ಥಳೀಯರು ಈ ಕಾರ್ಯಕ್ರಮವನ್ನು ನಮ್ಮ ಬಾಲ್ಯದ ನೆನಪುಗಳನ್ನು ಜೀವಂತ ಮಾಡಿಸಿದ ದಿನ ಎಂದು ವಣರ್ಿಸಿದರು.
ಈ ಸಂದರ್ಭದಲ್ಲಿ ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು

