Headlines

ಈ ಸಲ ಕರಾಳ ದಿನ ಇಲ್ಲ. ಏನಿದ್ದರೂ ಕನ್ನಡ, ಕನ್ನಡ..!


ಬೆಳಗಾವಿ.

ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಕನ್ನಡದ ಹಬ್ಬ ಕ್ನಡ ರಾಜ್ಯೋತ್ಸವ ಎಲ್ಲೆಡೆ ಈಗಿನಿಂದಲೇ ಸದ್ದು ಮಾಡತೊಡಗಿದೆ.

ಕನ್ನಡ ಪರ ಸಂಘಟನೆಗಳು ಕನ್ನಡ ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿವೆ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಈ ಸಲವೂ ನಾಡದ್ರೋಹಿಗಳು ಅಂದು ಮನೆಬಿಟ್ಟು ಹೊರಗೆಭಾರದಂತೆ ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಕಳೆದ ಬಾರಿ ಅಂದರೆ ಬೆಳಗಾವಿ ಇತಿಹಾಸದಲ್ಲಿ ಮೊಟ್ಟ ಮೊದಲ‌ ಬಾರಿಗೆ ಎಂಇಎಸ್ ಕರಾಳ ದಿನಕ್ಕೆ ಹಿರಿಯ ಐಪಿಎಸ್ ಅಲೋಕಕುಮಾರ್ ಬ್ರೆಕ್ ಹಾಕಿದ್ದರು. ನಾಡದ್ರೋಹಿಗಳು ಹಾಕಿದ್ದ ಪೆಂಡಾಲನ್ನು ಖುದ್ದು ಅಲೋಕಕುಮಾರ್ ಅವರೇ ಮುಂದೆ‌ನಿಂತು ಕಿತ್ತು ಹಸಕಿಸಿದ್ದರು. ಈಗ ಅದೇ ಸಂಪ್ರದಾಯವನ್ನು ಬೆಳಗಾವಿ ಪೊಲೀಸರು ಮುಂದುವರೆಸಬೇಕಾಗಿದೆ

ಕನ್ನಡಿಗರ ಕೂಗು…

ಪ್ರತಿ ಸಲ ರಾಜ್ಯೋತ್ಸವ ಬಂದಾಗ ಕರಾಳ ದಿನಕ್ಕೆ ಯಾವುದೇ ಸಂದರ್ಭದಲ್ಲಿ ಅನುಮತಿ ನೀಡಬಾರದು ಎನ್ನುವ ಕೂಗನ್ನು ಕನ್ನಡಿಗರು ಮಾಡುತ್ತಲೇ ಇರುತ್ತಾರೆ, ಈ ಬಾರಿಯೂ ಕೂಡ ಅಂತಹ ಕೂಡು ಕನ್ನಡಿಗರಿಂದ ಕೇಳಿ ಬಂದಿದೆ,’
ಗಮನಿಸಬೇಕಾದ ಸಂಗತಿ ಎಂದರೆ ಟಿಳಕವಾಡಿ ಮುಖ್ಯ ರಸ್ತೆಯಲ್ಲಿ ಹೈಡ್ರಾಮಾ ನಡೆಸಲು ನಾಡದ್ರೋಹಿಗಳು ಆಗಮಿಸಿದ್ದರು, ಆಗ ಅಲ್ಲಿದ್ದ ಅಲೊಖಕುಮಾರ, ಎಸಿಪಿ ನಾರಾಯಣ ಬರಮನಿ ಮುಂತಾದವರು ಲಾಠಿ ರುಚಿ ತೋರಿಸಿದ ಮೇಲೆ ಅವರು ಅಲ್ಲಿಂದ ಕಾಲ್ಕಿತ್ತರು. ಹೀಗಾಗಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಾಡದ್ರೋಹಿಗಳ ಕರಾಳ ದಿನಕ್ಕೆ ಪೊಲೀಸರು ತಡೆವೊಡ್ಡಿದರು,
ಈ ಬಾರಿಯೂ ಕೂಡ ಅದೇ ರೀತಿ ಮಾಡಬೇಕು ಎನ್ನುವ ಹಕ್ಕೊತ್ತಾಯವನ್ನು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ ಗುಡುಗನಟ್ಟಿ ಆಗ್ರಹಿಸಿದ್ದಾರೆ,.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅವರು ಕನ್ನಡ ನಾಡು, ನುಡಿ ವಿಷಯದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!