Ebelagavi ವಿಶೇಷ ಬೆಳಗಾವಿ. ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರು ಮತ್ತು ಹಿರಿಯ ಅಧಿಕಾರಿಗಳ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡು ಅದನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣಗಳು ಜೊಸದೇನಲ್ಲ…! ಅಂತಹ ಪ್ರಕರಣಗಳು ಅಧಿಕಾರಿಗಳು ಅಷ್ಟೇ ಏಕೆ ಪ್ರಧಾನಿ, ಮುಖ್ಯ ಮಂತ್ರಿಗಳನ್ನೂ ಸಹ ಬಿಟ್ಟಿಲ್ಲ. ಆದರೆ ಅಂತಹ ಫೋಟೊಗಳಿಂದ ಪ್ರಭಾವಿ ರಾಜಕಾರಣಿಯೊಬ್ಬರು ಮುಜುಗುಕ್ಕೀಡಾಗಬೇಕಾದ ಪ್ರಸಂಗ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಿಶೇಷವಾಗಿ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಭಾವಿ ಎನಿಸಿಕೊಂಡ ಜನಪ್ರತಿನಿಧಿಗಳಿದ್ದಾರೆ, ಬಹುತೇಕರು ಅಂತಹ ಪ್ರಭಾವಿ ರಾಜಕಾರಣಿಗಳನ್ನು ಕಂಡ ತಕ್ಷಣ ಕಾಲಿಗೆ ಬಿದ್ದು ನಮ್ರತೆಯಿಂದ ನಮಸ್ಕಾರ ಮಾಡುತ್ತಾರೆ, ಇನ್ನೂ ಕೆಲವರು ಪಕ್ಕಕ್ಕೆ ನಿಂತು ಫೊಟೊ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತನದಲ್ಲಿ ಹಡಿಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಯಾರು ಬಂದು ನಿಂತು, ಕೈಕುಲುಕಿ ಫೊಟೊ ತೆಗೆಸಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಲು ಆಗುವುದೇ ಇಲ್ಲ. ಆದರೆ ಪಕ್ಕಕ್ಕೆ ನಿಂತು ಫೊಟೊ ತೆಗೆಸಿಕೊಂಡವರು ಅಪರಾಧ ಪ್ರಕರಣದಲ್ಲಿ ಸಿಕ್ಕಿ ಬಿದ್ದಾಗ ಅವರು ತೆಗೆಸಿಕೊಂಡ ಹಳೆಯ ಫೊಟೊಗಳನ್ನು ವೈರಲ್ ಮಾಡಿ ದೊಡ್ಡವರದ್ದೇ ತಪ್ಪು ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ವಿಪರ್ಯಾಸವೇ ಸರಿ. ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಗಡಿನಾಡ ಬೆಳಗಾವಿಯಲ್ಲಿ ಫೊಟೊಗಳದ್ದೇ ಕಿರಿಕಿರಿ ಹೆಚ್ಚಾಗುತ್ತಿದೆ. ಯಾರು ಪೊಟೊ ತೆಗೆಸಿಕೊಂಡು ಏನುಬೇಕಾದ್ದು ಮಾಡಿದರೆ ಸುಮ್ಮನಿರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ,.
ಆದರೆ ಇಂತಹ ಘಟನೆಗಳು ನಡೆದಾಗ ಎಲ್ಲರೂ ತೆಲೆಕೆಳಗೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎನ್ನುವುದು ಸುಳ್ಳಲ್ಲ.
ಮೂಡಲಗಿ ಅಪಹರಣ ಪ್ರಕರಣ ಮೂಡಲಗಿಯ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣದಲ್ಲೂ ಆರೋಪಿ ತೆಗೆಸಿಕೊಂಡ ಕೂಡ ಆ ಫೊಟೊಗಳು ಪ್ರಭಾವಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಗತ್ತು ಗೈರತ್ತು ಇದೆ, ಅಷ್ಟೇ ಅಲ್ಲ ರಾಜಕಾರಣದಲ್ಲಿ ಪ್ರಭಾವಿ ಕುಟುಂಬ ಎನ್ನುವ ಖ್ಯಾತಿ ಇದೆ. ಈಗ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿ ಫೊಟೊ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ಇವೆ.
ಆದರೆ ಇಲ್ಲಿ ಕೆಲವರು ಗಣ್ಯರದ್ದೇ ತಪ್ಪು ಎನ್ನುವ ರೀತಿಯಲ್ಲಿ ಬಿಂಬಿಸುವ ಕೆಲಸ ನಡೆಸಿದ್ದಾರೆ, ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಇದರ ಹಿಂದೆ ಕೂಡ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಗಂಭೀರವಾಗಿ ಪರಿಗಣನೆಗೆ ಸೂಚಿಸಿದ್ದರು…! ಇಲ್ಲಿ ಗಣ್ಯರ ಜೊತೆ ಕ್ಲಿಕ್ಕಿಸಿಕೊಂಡ ಪೊಟೊಗಳನ್ನು ಮುಂದಿಟ್ಟುಕೊಂಡು ಪಾರಾಗಲು ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಹೆಡಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತೊಂದು ಕಡೆಗೆ, ಅಪಹರಣದ ಸುದ್ದಿ ಗೊತ್ತಾದ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರೆಸ್ಟ್ ಮಾಡುವಂತೆ ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿಯವರೇ ಪೊಲೀಸರಿಗೆ ಸೂಚಿಸಿದ್ದರು ಎನ್ನುವ ಸಂಗತಿ ಕೂಡ ಬೆಳಕಿಗೆ ಬಂದಿದೆ.
ಆದರೆ ಇಷ್ಟೆಲ್ಲ ಆದ ಮೇಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಜಾರಕಿಹೊಳಿಯವರೊಂದಿಗೆ ಆರೋಪಿ ಹಿಂದೆ ತೆಗೆಸಿಕೊಂಡಿರುವ ಫೊಟೊಗಳನ್ನು ಕೆಲವರು ವೈರಲ್ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ಸತೀಶ್ ಜಾರಕಿಹೊಳಿ ಏನಂದ್ರು? ಉದ್ಯಮಿಯನ್ನು ಅಪಹರಿಸಿ ಐದು ಕೋಟಿ ರೂ. ಗೆ ಬೇಡಿಕೆ ಇಟ್ಟಿಟ್ಟ ಆರೋಪದ ಮೇಲೆ ಮಂಜುಳಾ ರಾಮಗನಟ್ಟಿ ಎಂಬ ಮಹಿಳೆ ಅರೆಸ್ಟ್ ಆಗಿದ್ದಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ ಜಾರಕಿಹೊಳಿ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಅರೆಸ್ಟ್ ಆದವರು ನಮ್ಮ ಆಪ್ತರು ಇದ್ದರೆ ಇರಬಹುದು. ಇಲ್ಲ ಎಂದು ಹೇಳಲಾಗಲ್ಲ. ಆದರೆ ನಾವೇನು ಅವರಿಗೆ ಕಿಡ್ನ್ಯಾಪ್ ಮಾಡಲು ಹೇಳಿರುವುದಿಲ್ಲ ಎಂದು ಅವರು ಹೇಳಿದ್ದಾರೆ, ಅದು ಆವರ ವೈಯಕ್ತಿಕ. ಈ ರೀತಿಯ ಸಮಸ್ಯೆ ಬಂದಾಗ ನಮ್ಮ ಪೋಟೋ ಹರಿದಾಡುತ್ತವೆ ಎಂದರು.
ಪ್ರತಿದಿನ ನೂರು ಜನ ಬಂದು ಪೋಟೋ ತೆಗೆದುಕೊಳ್ಳುತ್ತಾರೆ, ಯಾರು ಏನು ಎಂದು ನೋಡಲು ಆಗುವುದಿಲ್ಲ. ಈಗಾಗಲೇ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದರು.
ಸತೀಶ್ಗೆ ಯಾವುದೇ ಸಂಬಂಧವಿಲ್ಲ…! ನನ್ನ ಅಪಹರಣಕ್ಕೂ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಯಾವುದೇ ರೀತಿಯಾದಂತಹ ಸಂಬಂಧ ಇಲ್ಲ ಎಂದು ಅಪಹರಣಕ್ಕೊಳಗಾಗಿದ್ದ ಬಸವರಾಜ ಅಂಬಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂದು ಕಾರು ರಿಪೇರಿ ಮಾಡಿಸಲು ಸಾಂಗಲಿಗೆ ತೆರಳಿದ್ದೆ. ಚಿಕ್ಕೋಡಿಗೆ ಬರುತ್ತಿದ್ದಂತೆ ಕಾರು ಅಡ್ಡಗಟ್ಟಿ ನನ್ನನ್ನು ಅಪಹರಿಸಿದರು. ಗೋವಾ ಘಾಟ್ ನಲ್ಲಿ ಕಾರನ್ನು ಪ್ರಪಾತಕ್ಕೆ ತಳ್ಳುವ ಬೆದರಿಕೆ ಹಾಕಿದರು. ಬಳಿಕ ಮನೆಗೆ ಕರೆ ಮಾಡಿ 5 ಕೋಟಿ ಹಣ ಕೇಳುವಂತೆ ಹೇಳಿದರು.
ದಿನಕ್ಕೆ ಮೂರರಿಂದ ನಾಲ್ಕು ಕಾರುಗಳನ್ನು ಬದಲಾಯಿಸಿ ಸುತ್ತಿಸಿದರು. ಕನರ್ಾಟಕ ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ನನ್ನನ್ನು ಸುತ್ತಾಡಿಸಿದರು. ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಣ ಕೂಡ ರೆಡಿ ಮಾಡಿಕೊಳ್ಳಲು ಪತ್ನಿಗೆ ನಾನು ಹೇಳಿದ್ದೆ ಪೊಲೀಸರು ಲೊಕೇಶನ್ ಆಧರಿಸಿ ಪತ್ತೆ ಹಚ್ಚಿ ನನ್ನನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ಗೆ ಸಂಬಂಧವಿಲ್ಲ…! ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಮಂಜುಳಾ ರಾಮಗನಟ್ಟಿ ಎಂಬ ಮಹಿಳೆ ಗೋಕಾಕ ತಾಲೂಕಿನ ರಾಜಾಪುರ ಗ್ರಾಮದ ಉದ್ಯಮಿ ಬಸವರಾಜ ಅಂಬಿ ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾಗಿದ್ದಾಳೆ. ಈ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲ್ಪನಾ ಜೋಶಿ ಸ್ಪಷ್ಟಪಡಿಸಿದ್ದಾರೆ.
ಈ ಕಿಡ್ನಾಪ್ ಪ್ರಕರಣದಲ್ಲಿ ಕೆಲವು ಮಾಧ್ಯಮಗಳಲ್ಲಿ ಕಾಂಗ್ರೆಸ್ ಕಾರ್ಯಕತರ್ೆ ಎಂದು ಬಿಂಬಿಸಲಾಗುತ್ತಿದೆ. ನಾನು ಜಿಲ್ಲಾ ಮಹಿಳಾ ಅಧ್ಯಕ್ಷೆಯಾಗಿ 2 ವರ್ಷಗಳಾಗಿದ್ದು, ಇಲ್ಲಿವರೆಗೆ ಮಂಜುಳಾ ರಾಮಗನಟ್ಟಿ ಎಂಬ ಮಹಿಳೆಗೆ ಪಕ್ಷದ ಯಾವುದೇ ಹುದ್ದೆ ಅಥವಾ ಪಕ್ಷದ ಸದಸ್ಯತ್ವ ಕೊಟ್ಟಿಲ್ಲ. ಅಲ್ಲದೇ ಆಕೆಗೂ ಕಾಂಗ್ರೆಸ್ ಪಕ್ಕಕ್ಕೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕರ್ತೆನೂ ಅಲ್ಲ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಮಂಜುಳಾ ರಾಮಗನಟ್ಟಿ ಎಂಬ ಮಹಿಳೆ ನಮ್ಮಪಕ್ಷದ ಕಾರ್ಯಕರ್ತೆ ಸಹ ಅಲ್ಲ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಸ್ಪಷ್ಟಪಡಿಸಿದ್ದಾರೆ.
ಸಚಿವರೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಾವಿರಾರು ಜನ ಕಾರ್ಯಕ್ರಮ ಗಳಲ್ಲಿ ಭೇಟಿಯಾಗುತ್ತಾರೆ, ಹಲವಾರು ಸಂಘಟನೆಯವರು ಫೋಟೋ ತೆಗೆಸಿಕೊಂಡಿರುತ್ತಾರೆ. ಅದನ್ನೇ ಅವರ ಆಪ್ತರು ಅನ್ನುವದಕ್ಕೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಹಾಗೂ ಸಚಿವರೊಂದಿಗೆ ಈ ಘಟನೆಯಲ್ಲಿ ಪಾಲ್ಗೊಂಡ ಯಾರೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ