Headlines

ನ್ಯಾಯಯುತ ಪರಿಹಾರ ಕೊಡದಿದ್ದರೆ ಭೂಸ್ವಾಧೀನವೇ ಇಲ್ಲ…!’

ಹಿರೇಬಾಗೇವಾಡಿ, ಹುಲಿಕಟ್ಟಿ ರೈತರಿಂದ ಎಚ್ಚರಿಕೆ:

ಬೆಳಗಾವಿ ಡಿಸಿಗೆ ಮನವಿ ಪತ್ರ ಅರ್ಪಣೆ
`

ಬೆಳಗಾವಿ,
ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಯೋಜನೆಯ ಭಾಗವಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯು ಈಗ ತೀವ್ರ ಗಂಭೀರ ತಿರುವು ಪಡೆದಿದೆ.
ಹಿರೇಬಾಗೇವಾಡಿ ಮತ್ತು ಹುಲಿಕಟ್ಟೆ ಗ್ರಾಮಗಳ ರೈತರು, “.ನ್ಯಾಯಯುತ ಪರಿಹಾರ ಸಿಕ್ಕಿಲ್ಲ ಅಂದರೆ ನಮ್ಮ ಭೂಮಿಯನ್ನು ಯಾವ ರೀತಿಯಲ್ಲೂ ಸ್ವಾಧೀನಪಡಿಸಿಕೊಳ್ಳಲು ಬಿಡಲ್ಲ ಎಂದು ಸಕರ್ಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ಈ ಬಗ್ಗೆ ಎರಡೂ ಗ್ರಾಮದ ರೈತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು
.
ನಾವು ಬಡ ರೈತರು. ಆದರೆ ನಮ್ಮ ಹಕ್ಕುಗಳ ಕುರಿತು ಬಡತನವಿಲ್ಲ. ಸಕರ್ಾರ ನಮ್ಮ ಭೂಮಿಗೆ ನ್ಯಾಯಯುತ ಬೆಲೆ ನಿಗದಿ ಮಾಡದೇ, ಮೂಲಭೂತ ಸೌಲಭ್ಯಗಳ ಯೋಜನೆಯೇ ಇಲ್ಲದ ಸ್ಥಿತಿಯಲ್ಲಿ ಮುಂದುವರಿದರೆ ನಾವು ಎಲ್ಲರೂ ಸೇರಿ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ .

ನಮ್ಮ ಜಮೀನುಗಳನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಮಾಡಿಕೊಳ್ಳಲು ಬಿಡಲ್ಲ ಎಂದು ಹೇಳಿದರು.
ಬೇಡಿಕೆ ಈಡೇರದಿದ್ದರೆ ಹೋರಾಟ..!
ಭೂ ಬೆಲೆ ಹೆಚ್ಚಳ, ಸವರ್ೀಸ್ ರಸ್ತೆ, ಕಾಲುವೆಗಳು, ಮತ್ತು ಕಾನೂನು ಡಾಕ್ಯುಮೆಂಟ್ ಮೇಲಿನ ವಿನಾಯಿತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸಕರ್ಾರ ಗಮನಿಸದಿದ್ದರೆ ರೈತರು ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಮನವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಿ.ಜಿ. ವಾಲಿಇಟಗಿ, ಸುರೇಶ ಗೊರವನ್ನವರ ನಿವೃತ್ತ ಶಿಕ್ಷಕ ರೊಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!