ಪಾಲಿಕೆ ಸಭೆ- ಜಂಗಿ ಕುಸ್ತಿ
ಬೆಳಗಾವಿ.ಗಡಿನಾಡ ಬೆಳಗಾವಿ ಮಹಾ ನಗರ ಪಾಲಿಕೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೂ ಕೂಡ ಸಕಾರಣವಿಲ್ಲದ ನೋಟೀಸ್ ಕೊಟ್ಟ ಸರ್ಕಾರ ಮಹಾನಗರ ಪಾಲಿಕೆ ಬಗ್ಗೆನೇ ಜನ ಸಂಶಯದಿಂದ ನೋಡುವ ಹಾಗೆ ಮಾಡಿದೆ.ಆಡಳಿತಾಧಿಕಾರಿಯ ಅವಧಿಯಲ್ಲಿ ಆದ ಲೋಪಕ್ಕೆ ಈಗ ಪಾಲಿಕೆಯ ಎಲ್ಲ 58 ಜನ ನಗರಸೇವಕರು ಅನಗತ್ಯವಾಗಿ ತಮ್ಮ ತೆಲೆ ಬಿಸಿವಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.ಮೂಲಗಳ ಪ್ರಕಾರ ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಪಾಲಿಕೆಗೆ ನೋಟೀಸ್ ಕೊಟ್ಟಿದ್ದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಲ್ಲಿ ಪಾಲಿಕೆಯ ಪರಿಷತ್ ಸಭೆಯ…