ನವೆಂಬರ್ 5ಕ್ಕೆ ಶಕ್ತಿ ಸಂಚಯ ಮಹಿಳಾ ಸಮಾವೇಶ
ಬೆಳಗಾವಿ: ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಆದ್ದರಿಂದ ಮಹಿಳೆಯರ ಸಾಮಾಜಿಕ ಸಂಘಟನೆ ಮತ್ತು ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ಶಕ್ತಿ ಸಂಚಯ ಮಹಿಳಾ ಸಮಾವೇಶ ಇದೇ ನವೆಂಬರ್ 5 ರಂದು ಬೆಳಗಾವಿ ನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ ಹೇಳಿದರು. ನಗರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಮಹಿಳೆಯನ್ನು ಅಬಲೆ ಎಂದು ಬಿಂಬಿಸಲಾಗಿದೆ. ಆದರೆ ಭಾರತದಲ್ಲಿ ಮಹಿಳೆಯನ್ನು ಶಕ್ತಿಯ ಪ್ರತೀಕ…