ಭಗವಾ ಹಿಡಿದರೆ ಮರಾಠಿ ಮತಗಳು ತನ್ನಿಂದ ತಾನೇ ಬರುತ್ತವೆಯೇ?
ಬಿಜೆಪಿ ಸರ್ಕಾರದಲ್ಲಿ ಉಗ್ರ ಹೋರಾಟ. ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಮೌನ.ಸಚಿವರ ಮಗನಿಗೇಕೆ ಓಟಿಲ್ಲ ಎಂದು ಕೇಳಿದ ಪೊಲೀಸರು.
ತೆರೆಗೆ ಸರಿದ ಪಂಚಮಸಾಲಿ ಮತ್ತು ಹೊರಗಿನವರು ಎನ್ನುವ ಮಾತು.
ಬೆಳಗಾವಿ.
ಗಡಿನಾಡ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಒಂದು ರೀತಿಯ ಭ್ರಮೆಯಲ್ಲಿ ರಾಜಕಾರಣ ನಡೆಸಿದ್ದಾರೆ,
ಅಂದರೆ ಇಲ್ಲಿನ ಪ್ರಭುದ್ಧ ಮತದಾರರು ಈ ರಾಜಕಾರಣಿಗಳ ನಾನಾ ವೇಷಕ್ಕೆ ಮಾರು ಹೋಗಿ ತಮಗೆ ಮತ ಹಾಕುತ್ತಾರೆ ಎನ್ನುವ ಹಗಲು ಕನಸಿನಲ್ಲಿ ತೇಲುತ್ತಿದ್ದಾರೆ.
ಅಂದರೆ ಕೈಯ್ಯಲ್ಲಿ ಭಗವಾ ಧ್ವಜಹಿಡಿದು ಕೇಸರಿ ಪೇಟಾ ಸುತ್ತಿ ಶಿವಾಜಿ ಮಹಾರಾಜಕೀ ಜೈ ಅಂದರೆ ಲಕ್ಷ ಲಕ್ಷ ಮರಾಠಿ ಮತಗಳು ಹರಿದು ಬರುತ್ತವೆ ಎನ್ನುವ ಹಾಗೆ ನಟಿಸುತ್ತಿದ್ದಾರೆ.
ಇವರ ನಡೆ ನುಡಿಯನ್ನು ಗಮನಿಸಿದರೆ ನಾಡದ್ರೋಹಿ ಎಂಇಎಸ್ ಬೆಳಗಾವಿ ಮಹಾನಗರ ಪಾಲಿಕೆ ಅಷ್ಟೇ ಅಲ್ಲ ಬೆಳಗಾವಿ ತಾಲೂಕಿನ ಮೂರು ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಬೇಕಿತ್ತು
ಏಕೆಂದರೆ ಎಂಇಎಸ್ ನ ಸ್ವಯಂ ಘೋಷಿತ ನಾಯಕರು ಪ್ರತಿಯೊಂದು ಹಂತದಲ್ಲಿ ಮುಗ್ಧ ಮರಾಠಿಗರನ್ನು ಓಲೈಸಿಕೊಳ್ಳಲು ಗಡಿ ಕ್ಯಾತೆ ತೆಗೆಯುತ್ತಾರೆ, ಅಷ್ಟೇ ಅಲ್ಲ ಯಾವಾಗಲೂ ಭಗವಾ ಹಿಡಿದುಕೊಂಡೇ ಕ್ಷುಲ್ಲಕ ರಾಜಕಾರಣ ಮಾಡುತ್ತಾರೆ,
ಆದರೆ ಈಗ ಅದೇ ಎಂಇಎಸ್ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಾಗಿದೆ, ಆದರೂ ನಮ್ಮ ರಾಜಕಾರಣಿಗಳು ಅದೇ ಎಂಇಎಸ್ನ ಸ್ವಯಂ ನಾಯಕರ ಓಲೈಕೆ ಬಿಟ್ಟಿಲ್ಲ ಎನ್ನುವುದು ದುರ್ದೈವದ ಸಂಗತಿ.
ಇಲ್ಲಿ ಬರೀ ಮರಾಠಿಗರು ಮತ್ತು ಎಂಇಎಸ್ ಓಲೈಕೆಯಲ್ಲಿ ತೊಡಗಿದರೆ ಇನ್ನುಳಿದ ಭಾಷಿಕರು ಮತ್ತು ಸಮಾಜದವರು ತಮಗೆ ಕೈ ಕೊಡಬಹುದು ಎನ್ನುವ ಕಲ್ಪನೆ ಕೂಡ ಇವರಿಗಿದ್ದಂತಿಲ್ಲ.ಅಥವಾ ಅದು ಗೊತ್ತಿದ್ದರೂ ತೋರಿಸಿಕೊಡುತ್ತಿಲ್ಲ.
ಜಾತಿ ಜಾತಿ ಜಾತಿ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬರೀ ಜಾತಿ ಅದರಲ್ಲೂ ಪಂಚಮಸಾಲಿ ಮಾತುಗಳೇ ಸದ್ದು ಮಾಡುತ್ತಿವೆ.
ಪಂಚಮಸಾಲಿ ಹೋರಾಟದ ಮುಖಂಡತ್ವವಹಿಸಿದ್ದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿಯವರಿಗೆ ಒಂದು ಗತ್ತು ಗೈರತ್ತು ಇದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ವಾಮಿಜಿಯವರು ಮಾಡಿದ ಉಗ್ರ ಹೋರಾಟಗಳು ಲೆಕ್ಕಕ್ಕಿಲ್ಲ.ಆಗ ಬಿಜೆಪಿ ಮುಖ್ಯಮಂತ್ರಿ ಗಳು ಶ್ರೀಗಳ ಜೊತೆ ಹಲವು ಬಾರಿ ಮಾತಾಡಿದ್ದರು. ಆದರೆ ಶ್ರೀಗಳು 2;A ಮೀಸಲಾತಿಗೆ ಹಿಡಿದ ಪಟ್ಟನ್ನು ಸಡಿಲಗೊಳಿಸಲಿಲ್ಲ. 2D ಕೊಟ್ಟರೂ ಡೋಂಟಕೇರ್ ಅಂದರು.
ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಹೋರಾಟ ತೆರೆಗೆ ಸರಿದಂತಾಯಿತು. ಅದು ಬಿಡಿ. ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶ್ರೀಗಳನ್ನು ಕರೆದು ಮಾತನಾಡಿಸುತ್ತಿಲ್ಲ.
ಈ ಅಸಮಾಧಾನದ ಮಾತನ್ನು ಖುದ್ದು ಸ್ವಾಮಿಜಿಯವರೇ ಬಹಿರಂಗಪಡಿಸಿದ್ದಾರೆ. ಆದರೂ ಸ್ವಾಮಿಜಿಗಳು ಇನ್ನೂ ಮೌನ ಮುರಿದು ಮಾತನಾಡುತ್ತಿಲ್ಲ. ಇದು ಈಗ ಪ್ರತಿಯೊಬ್ಬರು ಪ್ರಶ್ನೆ ಮಾಡುವಂತಾಗಿದೆ.
ಆದರೆ ಸಚಿವೆ ಹೆಬ್ಬಾಳಕರ ಮಾತ್ರ ಇನ್ನೂ ಪಂಚಮಸಾಲಿ ಟ್ರಂಪ್ ಕಾರ್ಡ ಉಪಯೋಗ ಮಾಡುವುದನ್ಬು ಬಿಟ್ಟಿಲ್ಲ. ಈ ಬಗ್ಗೆ ಬಿಜೆಪಿಗರು ಹಲವು ಬಾರಿ ಟಕ್ಕರ್ ಕೊಟ್ಟರೂ ಅವರು ಕೇರ್ ಮಾಡಿಲ್ಲ.
ಪೊಲೀಸರಿಗೇನು ಕೆಲಸ?
ಚುನಾವಣೆ ಸಂದರ್ಭದಲ್ಲಿ ಪೊಲೀಸರು ನ್ಯಾಯ ಸಮ್ನತವಾಗಿ ಕೆಲಸ ಮಾಡಬೇಕು. ಆದರೆ ಮಾರಿಹಾಳ ಪೊಲೀಸರು ಮಾತ್ರ ನೀತಿ ಸಂಹಿತೆ ಉಲ್ಲಂಘಿಸಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾರಿಹಾಳ ಠಾಣೆಯವರೆನ್ನಲಾದ ಇಬ್ಬರು ಪೊಲೀಸರು ದಾರಿಯಲ್ಲಿ ಹೋಗಿ ಬರುವವರಿಗೆ ಯಾರಿಗೆ ಮತ ಎಂದು ಪ್ರಶ್ನೆ ಮಾಡುತ್ತಿದ್ದರಂತೆ. ಆಗ ಜನ ಬಿಜೆಪಿಗೆ ಅಂದರೆ ಸಚಿವರ ಮಗನಿಂತಿದ್ದಾನೆ. ಅವನಿಗೆ ಏಕಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದರಂತೆ.
ಅಚ್ಚರಿಯ ಸಂಗತಿ ಎಂದರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರ ಕಾರು ಚಾಲಕನಿಗೆ ಪೊಲೀಸರು ಈ ರೀತಿಯ ಪ್ರಶ್ನೆ ಮಾಡಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ