ಬ್ರಾಹ್ಮಣ ಸಮಾವೇಶಕ್ಕೆ ಜೋಶಿಗೆ ಆಹ್ವಾನ ಕೊಟ್ಟ ಹಾರನಹಳ್ಳಿ
ನವದೆಹಲಿ. ಅಖಿಲ ಕರ್ನಾಟಕ ಮಹಾಸಭಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನೇವರಿ 18 ಮತ್ತು 19 ರಂದು ಆಯೋಜಿಸಲಾಗಿರುವ 50 ನೇ ಬ್ರಾಹ್ಮಣ ಸಮಾವೇಶಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಆಹ್ವಾನ ನೀಡಲಾಯಿತು. ಬ್ರಾಹ್ಮಣ ಮಹಾಸಭಾ ಅದ್ಯಕ್ಷ ಅಶೋಕ ಹಾರನಹಳ್ಳಿ ಅವರು ದೆಹಲಿಗೆ ತೆರಳಿ ಸಚಿವರಿಗೆ ಆಹ್ವಾನ ನೀಡಿದರು.