Headlines

ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ

ಬ್ರಾಹ್ಮಣರು ಮತದಾನದ ಕಡೆ ತಿರುಗಬೇಕು. ಮೌನ ಮುರಿಯಬೇಕು. ವಿರೋಧವಿದ್ದರೆ ಮತದಾನದಿಂದ ತಿರಸ್ಕಾರ ತೋರಿಸಬೇಕು. ಬೆಂಬಲವಿದ್ದರೆ ಮತದಿಂದ ಸಮರ್ಥನೆ ನೀಡಬೇಕು. ಆದರೆ ಮೌನವೇ ಕೊನೆಗಾಲ.
ಇದು ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯದ ಪ್ರಶ್ನೆ.

ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ

ರಾಜಕೀಯ ಚುನಾವಣೆ ಮತಭರದಲ್ಲಿ ಶುದ್ಧತೆ ತೋರಿಸಿ – ಮಾತಿನಲ್ಲಿ ಅಲ್ಲ, ಮತದಲ್ಲಿ ಶುದ್ಧ ಬ್ರಾಹ್ಮಣತನ ಮೂಡಲಿ.

ಅಂತಹ‌ ಮನಸ್ಥಿತಿ ಬೇಡ..!
ಗಡಿನಾಡ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಾತು ಹೇಳುವುದು ಅನಿವಾರ್ಯ.
ಇಲ್ಲಿ ಎಕೆಬಿಎಂಎಸ್ ನಮಗೇನು ಕೊಟ್ಟಿದೆ ಎನ್ನಯವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಡಿದ್ದೇವೆ ಎನ್ನುವುದರ ಬಗ್ಗೆ ಪ್ರತಿಯೊಬ್ಬ ಬ್ರಾಹ್ಮಣರು ಆಲೋಚನೆ ಮಾಡಬೇಕಾಗಿದೆ.
ಅಶೋಕ ಹಾರನಹಳ್ಳಿ ಎಕೆಬಿಎಂಎಸ್ ಅಧ್ಯಕ್ಷರಾದ ನಂತರ ಇಡೀ ರಾಜ್ಯ ಅಷ್ಟೇ ಅಲ್ಲ ದೇಶವು ಕರ್ನಾಟಕದ ಬ್ರಾಹ್ಮಣರತ್ತ ತಿರುಗಿ ನೋಡುವಂತಾಯಿತು.
ಅಂತಹ ಬ್ರಾಹ್ಮಣ ಮಹಾಸಭಾ ಚುನಾವಣೆ ಬಂದಾಗ ಮತದಾನದ ಹಕ್ಜು ಹೊಂದಿದವರು ಮತಗಟ್ಟೆಯತ್ತ ಬರಬೇರಕಿತ್ತು.
ವಿಷಾದನೀಯ ಸಂಗತಿ ಎಂದರೆ, ಬಹುತೇಕರು, ನಮ್ಮನ್ನು ಯಾರೂ ಮಾತನಾಡಿಸಿಲ್ಲ, ಅಧ್ಯಕ್ಷರು ಕಾಲ್ ಮಾಡಿಲ್ಲ. ಹೀಗಾಗಿ ಓಟ್ ಹಾಕಿಲ್ಲ ಎನ್ನುವ ಹೇಳಿಕೆ ಕೊಟ್ಟು ಸಮಾಜದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಿದರು.
ಈ ರೀತಿ ಮಾತನಾಡುವವರು ಖುದ್ದು ಮತಗಟ್ಟೆಗೆ ಬಂದು ಉಳಿದವರನ್ನು ಕರೆದುಕೊಂಡು ಬರುವಂತೆ ಮಾಡಿದ್ದರೆ ಅವರ ಮಾತಿಗೂ ಒಂದು ರೀತಿಯ ಗೌರವ ಬರುತ್ತಿತ್ತು. ಆದರೆ ಆ ರೀತಿ ಮಾಡಲೇ ಇಲ್ಲ.
ಅದನ್ನು ಬಿಟ್ಟರೆ, ಇನ್ನೂ ಕೆಲವರು ನಾನು ಆ ಸಂಘಟನೆಯಲ್ಲಿದ್ದೇನೆ, ಹಾಗೆ ಮಾಡಿದ್ದೇನೆ, ಹೀಗೆ ಮಾಡಿದ್ದೇನೆ ಎಂದು ಬಡಾಯಿ ಕೊಚ್ವಿ ಹೇಳಿಕೊಳ್ಳುವವರೂ ಸಹ ಮತಗಟ್ಟೆಗೆ ಬರಲಿಲ್ಲ.

ಕರ್ನಾಟಕದ ರಾಜಕೀಯ ಲೋಕದಲ್ಲಿ ಪ್ರತೀ ಸಮುದಾಯದ ಮತ ಒಂದು ಎದೆಗಟ್ಟಿದ ಘೋಷಣೆಯಂತೆ ಕೇಳಿಸುತ್ತಿದೆ.

ದಲಿತರು, ಒಕ್ಕಲಿಗರು, ಲಿಂಗಾಯತರು — ಎಲ್ಲರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಮತದಾನದ ಮೂಲಕ ತೋರಿಸುತ್ತಿದ್ದಾರೆ. ಜಾಗೃತಿಯನ್ನು ಉಂಟು ಮಾಡುತ್ತಿದ್ದಾರೆ .

ಆದರೆ, ಪೌರಾಣಿಕವಾಗಿ ಶ್ರದ್ಧೆಯ, ಶಿಸ್ತು ಹಾಗೂ ಬೌದ್ಧಿಕ ಶಕ್ತಿಯ ಸಂಕೇತವಾಗಿರುವ ಬ್ರಾಹ್ಮಣ ಸಮುದಾಯ ಮಾತ್ರ, ಮತದಾನದಲ್ಲಿ ತೋರಿಸುತ್ತಿರುವ ನಿರಾಸಕ್ತಿ ಈಗ ವಿಭಿನ್ನ ಚರ್ಚೆಗೆ ಅವಕಾಶ ಮಾಡಿಕೊಡುತ್ತಿದೆ.

ಮತದಾನ ಒಂದು ಧರ್ಮ’ ಎಂಬ ನುಡಿಯನ್ನು ಹೇಳಿದವರೇ ಇಂದು ಮತಪೇಟಿಯತ್ತ ನೋಡುವ ದೃಷ್ಟಿ ಕಳೆದುಕೊಂಡಂತಿದೆ.

ರಾಜ್ಯದ ವಿವಿಧ ಪ್ರತಿಯೊಂದು ಜಿಲ್ಲೆಗಳಲ್ಲಿ ಬ್ರಾಹ್ಮಣರ ಶ್ರೇಣೀಬದ್ಧ ಜನಸಂಖ್ಯೆ ಇರುವುದೂ ನಿಜ. ಆದರೆ, ಈ ಜನಸಂಖ್ಯೆಯು ಪ್ರಜಾಪ್ರಭುತ್ವದ ಪಟದ ಮೇಲೆ ಪರಿಣಾಮ ಬೀರುತ್ತಿಲ್ಲ.

oplus_18

ಕಾರಣ ಮತದಾನದ ವಿರಳತೆ.
ಇಲ್ಲಿ ವಿಧಾನಸಭೆ ಚುನಾವಣೆ ಬಿಡಿ. ಸ್ವತಃ ತಮ್ಮ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಕೂಡ ಲೀಡರ್ ಎನಿಸಿಕೊಂಡವರು ಮತದಾನಕ್ಕೆ ಆಸಕ್ತಿ ತೋರದೇ ಇರುವುದು ಕಂಡು ಬಂದಿತು.
– ನಗರದ ಬ್ರಾಹ್ಮಣ ಪ್ರದೇಶಗಳಲ್ಲಿ ಎಲ್ಲೆಡೆ ಮತದಾನದ ಶೇಕಡಾವಾರು ಅಂಕಿ ಅಂಶವನ್ನು ಗಮನಿಸಿದರೆ ಸಮಾಜ ಮತದಾರರ ನಿಲುವು ಸ್ಪಷ್ಟವಾಗಿ ಗೋಚರವಾಗುತ್ತದೆ.

ಪ್ರಜ್ಞೆ ಇಲ್ಲದ ಕಾರಣವಲ್ಲ – ನಿರ್ಲಕ್ಷ್ಯ, ನಿರಾಸೆ ಮತ್ತು ‘ನಾವಿಲ್ಲದರೂ ರಾಜಕೀಯ ನಡೆಯುತ್ತದೆ’ ಎಂಬ ಮನೋಭಾವ.

ಈ ಶುದ್ಧತಾದರ್ಶ ಮನೋಭಾವವನ್ನೇ ಕೆಲವರು ‘ಧರ್ಮ’ ಎಂದು ಮರೆಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಧರ್ಮವಲ್ಲ – ಇದು ಪ್ರಜಾಪ್ರಭುತ್ವದಿಂದ ದೂರ ಉಳಿಯುವ ಅಪರೂಪದ ದುರಂತ. ರಾಜ್ಯದ ಎಲ್ಲಾ ದೊಡ್ಡ ಪಕ್ಷಗಳಿಗೂ ಬ್ರಾಹ್ಮಣ ಸಮುದಾಯದ ಮತ ಕಳೆಗಟ್ಟಿದರೆ ಮಾತ್ರ ಅವರು ಬ್ರಾಹ್ಮಣ ಅಭ್ಯರ್ಥಿಗಳ ಬಗ್ಗೆ ಚಿಂತಿಸುವುದು. ಇಲ್ಲವಾದರೆ, ಈ ಸಮುದಾಯ ‘ಹಿತಪತ್ರ’ದ ಹೆಸರಿನಲ್ಲಿ ಅಲಕ್ಷ್ಯಗೊಳ್ಳುವುದು ಖಚಿತ.

ಮತ ಹಾಕದವರು ಆಳ್ವಿಕೆ ಬಗ್ಗೆ ಮಾತಾಡಲಾರದವನು ಎಂಬ ತತ್ವ ರಾಜ್ಯದ ಎಲ್ಲ ಸಮುದಾಯಗಳಿಗೆ ಅನ್ವಯಿಸಬೇಕು. ಆದರೆ ಬ್ರಾಹ್ಮಣರು ಹೆಚ್ಚು ಹೊಣೆಗಾರಿಕೆ ವಹಿಸಬೇಕು. ಕಾರಣ ಅವರು ಮಾತಿನಲ್ಲಿ ನಾಯಕರಂತೆ, ಆದರೆ ಕೃತಿಯಲ್ಲಿ ವೀಕ್ಷಕರಂತೆ ಉಳಿಯುತ್ತಿದ್ದಾರೆ.
, ಈ ಬಾರಿಯ ಚುನಾವಣೆ – ಕೇವಲ ರಾಜಕೀಯ ರಾಜಕಾರಣಿಗಳ ಆಯ್ಕೆವಲ್ಲ, ಇದು ಒಂದು ಸಮುದಾಯದ ಆತ್ಮಾವಲೋಕನದ ಕ್ಷಣ.

Leave a Reply

Your email address will not be published. Required fields are marked *

error: Content is protected !!