
– ಡಿಜೆ, , ಡ್ಯಾನ್ಸ್ — ಎಲ್ಲವೂ ಇರಲಿ. ಆದರೆ ಅಂಬೇಡ್ಕರ್ ಕಲ್ಪಿಸಿದ ಸಾಮಾಜಿಕ ನ್ಯಾಯದ ಸಾರ ನಿನ್ನ ಬದುಕಲ್ಲಿ ಇರಬೇಕು. ಹಕ್ಕು ಬಯಸುವುದಷ್ಟೆ ಸರಿ ಅಲ್ಲ; ಹೊಣೆಗಾರಿಕೆಯಾಗಲಿ.”

“ಇದು ಕೇವಲ ಮೆರವಣಿಗೆ ಅಲ್ಲ – ಇದು ಸಂವಿಧಾನದ ಹತ್ತಿರ ಸಾಗುವ ನಡಿಗೆ!”
ಬಡವರ ಹಕ್ಕಿಗೆ ಭಾಷೆ ನೀಡಿದ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಬೆಳಗಾವಿ ನಗರ ಇಂದು ಚರಿತ್ರೆಯ ಪುಟವೊಂದು ನವೀಕರಿಸಿದಂತಾಯಿತು.

ಬೆಳಿಗ್ಗೆ ಶಾಂತತೆಯ ಮಿಂಚಿನಲ್ಲಿ ಆರಂಭವಾದ ಜ್ಯೋತಿ ನಡಿಗೆ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಸಾಸಕ ರಾಜು ಸೇಠ , ಡಿಸಿ ಮೋಹಮ್ಮದ ರೋಷನ್, ಜಿ.ಪಂ ಸಿಇಓ ಪಾಲಿಕೆ ಆಯುಕ್ತೆ ಶುಭ ಬಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡರು.

“ಜ್ಯೋತಿಯ ಕಿರಣವೂ ಆಶಯಗಳ ಸಾರ”
ಸಚಿವರು, ಮೇಯರ್ ಉಪಮೇಯರ್, ವಿಧಾನ ಪರಿಷತ್ ಸದಸ್ಯರು, ಶಾಸಕರು ಶ್ರದ್ಧಾಭಾವದಿಂದ ಜ್ಯೋತಿ ಹೊತ್ತು ಸಾಗಿದರು
“ಬಾಬಾಸಾಹೇಬರು ತೋರಿಸಿದ ದಾರಿ ಕೇವಲ ಐತಿಹಾಸಿಕವಲ್ಲ, ಅದು ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರ ಹಕ್ಕಿಗೆ, ನವ ಭಾರತ ನಿರ್ಮಾಣಕ್ಕೆ ಜವಾಬ್ದಾರಿಯ ಬೆಳಕು ಬೇಕು. ಎಂದರು. ಪಾಲಿಕೆ ಆಡಳಿತ ಪಕ್ದಷದ ನಾಯಕ ಗಿರೀಶ ಧೋಂಗಡಿ, ಲಿತ ಮುಖಂಡ ಮಲ್ಲೇಶ ಚೌಗಲೆ ಮುಂತಾದವರು ಹಾಜರಿದ್ದರು.

“
“
“