Headlines

ಮೂಡಾದಿಂದ ಸಿದ್ದು ಹೆಸರು ಹಾಳು- ಯತ್ನಾಳ

ಬೆಳಗಾವಿ

ಸಿದ್ಧರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಗಳಿಸಿದ್ದ ಹೆಸರು, ಕೀರ್ತಿಯನ್ನು ಮುಡಾ ಹಗರಣದಲ್ಲಿ ಕಳೆದುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳುದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮೂರು ಎಕರೆ ಜಮೀನಿಗಾಗಿ ಇಷ್ಟೊಂದು ಅವ್ಯವಹಾರ ನಡೆಸುವುದು ಅಗತ್ಯವಿರಲಿಲ್ಲ. ಈ ಬಗ್ಗೆಯೂ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಡೆಸುತ್ತೇವೆ. ಚರ್ಚೆ ನಡೆಸುತ್ತೇವೆ ಎಂದರು.


ಬಿಜೆಪಿ ಸರ್ಕಾರ ಇದ್ದಾಗ ಇವರೇ 40 ಪರ್ಸೆಂಟ್ ಎಂದು ಆರೋಪಿಸಿದ್ದರು. ಚನಾವಣಾ ಪ್ರಚಾರ ಸಂದರ್ಭದಲ್ಲಿಯೂ ಈ ಬಗ್ಗೆ ಅಪಪ್ರಚಾರ ನಡೆಸಿದ್ದರು. ಆದರೆ, ಈಗ ಇವರ ಸರ್ಕಾರ 100 ಪರ್ಸೆಂಟ್ ಸರ್ಕಾರ ಆಗಿದ್ದು, ಪ್ರತಿಯೊಂದು ನಿಗಮದಲ್ಲಿಯೂ ಹಗರಣಗಳು ಈಗ ಬೆಳಕಿಗೆ ಬರುತ್ತಿವೆ ಎಂದು ಟೀಕಿಸಿದರು.


ತಮ್ಮ ಹಗರಣಗಳನ್ನೆಲ್ಲಾ ಬದಿಗಿಟ್ಟು, ಈಗ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ, ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಬೇಕಿತ್ತು. ಹದಿನೈದು ತಿಂಗಳುಗಳ ಕಾಲ ಕೆ ಸುಮ್ಮನೆ ಕುಳಿತುಕೊಳ್ಳಬೇಕಿತ್ತು ಹರಿಹಾಯ್ದ ಯತ್ನಾಳ ಅವರು, ನಮ್ಮ ಹಗರಣಗಳಿದ್ದರೂ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರಲಿ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *

error: Content is protected !!