..
1.3ಕಿಮಿ/1300 ಮೀ ಸೇತುವೆ ಒಟ್ಟು ಉದ್ದ).
359 ಮೀಟರ್ ಸೇತುವೆಯ ಒಟ್ಟು ಎತ್ತರ.
133.7 ಮೀಟರ್ ಪಿಲ್ಲರನ ಗರಿಷ್ಟ ಎತ್ತರ.
485 ಮೀಟರ್. ಮುಖ್ಯ ಕಮಾನಿನ ಉದ್ದ.
326 ಕಿಮೀ- ಬಾರಾಮುಲ್ಲಾ ಮತ್ತು ಜಮ್ಮು ನಡುವಿನ ರೈಲು ಮಾರ್ಗದ ಉದ್ದ.
30000 ಟನ್ – ಸೇತುವೆ ನಿಮರ್ಾಣಕ್ಕೆ ಬಳಸಿದ ಉಕ್ಕು.
220 ಕಿಮೀ- ಸೇತುವೆಯ ಮೇಲೆ ಪ್ರತಿ ಗಂಟೆಗೆ ಗಾಳಿ ಬೀಸುವ ವೇಗದ ಪ್ರಮಾಣ.
100 ಕಿಮೀ.- ಸೇತುವೆ ಮೇಲೆ ಪ್ರತಿ ಗಂಟೆಗೆ ರೈಲು ಸಂಚರಿಸುವ ಗರಿಷ್ಠ ವೇಗ.
1450 ಕೋಟಿ ರೂ,- ಸೇತುವೆ ನಿಮರ್ಾಣಕ್ಕೆ ತಗುಲಿದ ಒಟ್ಟು ವೆಚ್ಚ
ನಡೆದು ಬಂದ ಹಿನ್ನೆಲೆ
ಡಿಸೆಂಬರ್ 2003: ಯೋಜನೆಗೆ ಅನುಮೋದನೆ.
ಫೆಬ್ರುವರಿ 2008: ನಿರ್ಮಾಣಕ್ಕಾಗಿ ಗುತ್ತಿಗೆ.
ಸೆಪ್ಟೆಂಬರ್ 2008: ಸುರಕ್ಷತೆಯ ಕಾರಣದಿಂದ ಯೋಜನೆಯು ಸ್ಥಗಿತ.
ಆಗಸ್ಟ್ 2010: ನಿರ್ಮಾಣ ಕಾರ್ಯ ಮರುಪ್ರಾರಂಭ.
ಜುಲೈ 2017: ಸೇತುವೆಯ ನಿರ್ಮಾಣ ಕಾರ್ಯ ಪುನರಾರಂಭ.
ನವೆಂಬರ್ 2017: ಸೇತುವೆಯ ಕಮಾನು
ಮೇ 2019 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ .
ಆಗಸ್ಟ್ 2019: ಸೇತುವೆಯ ಶೇ 80 ನಿರ್ಮಾಣ ಕಾರ್ಯ ಪೂರ್ಣ
ಎಪ್ರಿಲ್ 2021: ಸೇತುವೆಯ ಕಮಾನಿನ ಎರಡೂ ತುದಿಗಳ ಕೆಲಸವು ಅಂತಿಮವಾಗಿ ಪೂರ್ಣ.
ಜೂನ್ 2022: ಶೇ. 90 ನಿರ್ಮಾಣ ಕಾರ್ಯ ಪೂರ್ಣ.
ಡಿಸೆಂಬರ್ 2022 ರ ವೇಳೆಗೆ ಸೇತುವೆಯನ್ನು ಕಾರ್ಯಗತಗೊಳಿಸಲು ಈಗ ದೃಢೀಕರಿಸಲಾಗಿದೆ.
ಆಗಸ್ಟ್ 2022: ಅಂತಿಮ ಜಾಯಿಂಟ್ನಲ್ಲಿ ಸೇತುವೆಯ ಉಳಿದ ಕೆಲಸ ಪೂರ್ಣ.
ಫೆಬ್ರವರಿ 2023: ಸೇತುವೆಯ ಮೇಲೆ ಟ್ರ್ಯಾಕ್ ಹಾಕುವುದು ಪ್ರಾರಂಭ.
ಮಾರ್ಚ 2023: ಟ್ರ್ಯಾಕ್ ಹಾಕುವಿಕೆಯು ಪೂರ್ಣ.
ವಿಶ್ವದ ಅತ್ಯಂತ ಎತ್ತರದ ಸೇತುವೆಚೆನಾಬ್ ಸೇತುವೆ ನಮ್ಮ ಹೆಮ್ಮೆ
'
ebelagavi ವಿಶೇಷ
ಜಮ್ಮು ಕಾಶ್ಮೀರ.
ಭಾರತದ ಇಂಜನೀಯರುಗಳೇ ಜಮ್ಮು ಕಾಶ್ಮೀರದ ಗಡಿಯಂಚಿನ ಚೆನಾಬ್ ನದಿಯ ಮೇಲೆ ನಿರ್ಮಿಸಿದ ಸೇತುವೆಯನ್ನು ನೋಡಿದರೆ ವಾ
ಹ್’ ಎನ್ನುವ ಉದ್ಘಾರ ಬಾರದೇ ಇರದು,..!
ಅತ್ಯಾಧುನಿಕತೆ ವಿಷಯ ಬಂದಾದ ಚೀನಾ, ಜಪಾನ್ದತ್ತ ತಿರುಗಿ ನೋಡುವ ಈಗಿನ ಕಾಲದಲ್ಲಿ ಅದೇ ವಿದೇಶಿಗರು ಭಾರತದತ್ತ ತಿರುಗಿನೋಡುವಂತೆ ಮಾಡಿದ್ದು ಈ ಚೆನಾಬ್ ಸೇತುವೆ.!
ಆರಂಭದ ದಿನಗಳಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ಉತ್ತರ ರೇಲ್ವೆ ವಲಯ ಸೇತುವೆ ನಿರ್ಮಾಣದ ಚಿಂತನೆ ಮಾಡಿದಾಗ ಹಲವರು ಹಲವು ರೀತಿಯ ಮಾತುಗಳನ್ನು ಆಡಿದ್ದರು.

ಆದರೆ ಈಗ ಅದು ಚೆನಾಬ್ ಸೇತುವೆ ಪೂರ್ಣಗೊಂಡ ನಂತರ ಅದರ ಮೇಲೆ ರೇಲ್ವೆ ಸಂಚರಿಸುತ್ತಿರುವುದನ್ನು ನೋಡಿದಾಗ ಕನಸು ಸಾರ್ಥಕವಾಯಿತು. ಅಷ್ಟೇ ಅಲ್ಲ ಭಾರತದ ಇಂಜನೀಯರಗಳ ಕಾರ್ಯದ ಬಗ್ಗೆ ಹೆಮ್ಮೆ ಎನಿಸುವುದರಲ್ಲಿ ಎರಡು ಮಾತಿಲ್ಲ.
ಸಂಕಲ್ಪವೊಂದಿದ್ದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎನ್ನುವುದಕ್ಕೆ ಚೆನಾಬ್ ಸೇತುವೆ ಇದೊಂದು ಅತ್ಯುತ್ತಮ ಉದಾಹರಣೆ ಕೂಡ ಹೌದು,
ಇತ್ತೀಚೆಗೆ ಉತ್ತರ ರೇಲ್ವೆ ವಲಯ ನಿರ್ಮಿಸಿದ ಈ ಸೇತುವೆಯನ್ನು ತೋರಿಸಲು ನೈರುತ್ಯ ರೇಲ್ವೆ ವಲಯದವರು ಆಯ್ದ ಪತ್ರಕರ್ತರಿಗೆ ಪ್ರವಾಸವನ್ನು ಆಯೋಜಿಸಿತ್ತು,

ನಿಜವಾಗಿಯೂ ಈ ಸೇತುವೆ ನಿರ್ಮಾಣ ಭಾರತ ಅಷ್ಟೇ ಅಲ್ಲ ವಿಶ್ವಕ್ಕೆ ಹೆಮ್ಮೆ,.
ಜಮ್ಮು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ಪ್ರಪಂಚದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಕಮಾನು ನಿಮರ್ಿಸುವ ಮೂಲಕ ಇತಿಹಾಸ ನಿಮರ್ಿಸಿದ್ದು, ಭಾರತದ ಖ್ಯಾತಿ ಪ್ರಪಂಚದಾದ್ಯಂತ ಹರಡಿಸಿದಂತಾಗಿದೆ,.
ಈ ಚೆನಾಬ್ ಸೇತುವೆ ಫ್ರಾನ್ಸ್ನಲ್ಲಿರುವ ಐಫೆಲ್ ಟವರ್ಗಿಂತ ಬರೊಬ್ಬರಿ 35 ಮೀಟರ್ ಎತ್ತರವಾಗಿದೆ. ಆರಂಭದ ದಿನಗಳಲ್ಲಿ ಈ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಇಂಜನಿಯರ್ಗಳಿಗೆ ಇದೊಂದು ಸವಾಲಿನ ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು, .

ಸೇತುವೆಗೆ ನಿರ್ಮಿಸಿದ ಕಮಾನು ಸ್ಫೋಟ ನಿರೋಧಕವಾಗಿದ್ದಲ್ಲದೇ ಭಾರತದಿಂದ ಜಮ್ಮು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ.
1.3ಕಿ.ಮಿ ಉದ್ದವಿರುವ ಈ ಸೇತುವೆ ನಿರ್ಮಾಣದ ಉದ್ದೇಶ ಜಮ್ಮು ಕಾಶ್ಮೀರದ ಸಂಪರ್ಕ ವ್ಯವಸ್ಥೆಯು ಮತ್ತಷ್ಟು ಸುಲಭಗೊಳಿಸುವುದಾಗಿತ್ತು. ಈ ಯೋಜನೆ ಸೇರಿದಂತೆ ಒಟ್ಟು 1,486 ಕೋಟಿ ವೆಚ್ಚ ತಗುಲಿದೆ.
ಕಮಾನಿನ ಸಾಮಥ್ರ್ಯವನ್ನು ಹೆಚ್ಚಿಸುವ ಸಲುವಾಗಿ ಕಾಂಕ್ರೀಟನ್ನು ಹೆಚ್ಚು ಬಳಸಲಾಗಿದೆ. ಈ ಕಮಾನಿನ ಭಾರ 10,619 ಮೆಟ್ರಿಕ್ ಟನ್ ಹೊಂದಿದೆ. ಕಮಾನನ್ನು ಮೊದಲ ಬಾರಿಗೆ ಓವರ್ಹೆಡ್ ಕೇಬಲ್ ಕ್ರೇನ್ ಬಳಸಿ ಪೂರ್ಣಗೊಳಿಸಲಾಗಿದೆ. ಇದು ಭಾರತದ ರೈಲ್ವೆ ಇಲಾಖೆಯಲ್ಲಿ ಮೊದಲ ಪ್ರಯತ್ನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಶಸ್ವಿ ರೈಲು ಸಂಚಾರ..!
ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ಮೇಲೆ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿದೆ. ಜಮ್ಮುವಿನ ರಿಯಾಸಿ ಜಿಲ್ಲೆಯಿಂದ ಕಾಶ್ಮೀರಕ್ಕೆ ರೈಲು ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಸಂಗಲ್ದನ್ನಿಂದ ರಿಯಾಸಿ ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ, ಚೆನಾಬ್ ಸೇತುವೆಯನ್ನು ದಾಟುವುದರೊಂದಿಗೆ ಯಶಸ್ವಿಯಾಗಿ ಸಂಚರಿಸಿದೆ.
ಸಂಗಲ್ದನ್ನಿಂದ ರಿಯಾಸಿ ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ ಚೆನಾಬ್ ಸೇತುವೆಯನ್ನು ದಾಟುವುದರೊಂದಿಗೆ ಯಶಸ್ವಿಯಾಗಿ ಸಂಚರಿಸಿದೆ. ಎಲ್ಲಾ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ.

ಚಿನಾಬ್ ರೈಲ್ವೆ ಸೇತುವೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕಾಲ್ ಮತ್ತು ಕೌರಿ ಎಂಬಲ್ಲಿ, ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ.
ಜಮ್ಮುವಿನಉಧಾಂಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿಮರ್ಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್ ಅಡಿಯಲ್ಲಿ ಈ ಕಮಾನು ಸೇತುವೆ ನಿಮರ್ಾಣದ ಕಾರ್ಯ ನಡೆಯುತ್ತಿದೆ. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದಾಗ್ಯೂ ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತ್ತು.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಶನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತ್ತು.

ಅಂಜಿ ಸೇತುವೆ…!
ಚೆನಾಬ್ ಸೇತುವೆಯ ಆಗ್ನೇಯಕ್ಕೆ ರಿಯಾಸಿ ಬಳಿ ಈ ಅಂಜಿ ಕೇಬಲ್ ಸೇತುವೆ ಇದೆ. ಅದರೊಂದಿಗೆ ರೈಲ್ವೆ ಮಾರ್ಗದ ಜೋಡಣೆಯು ಅಂಜಿ ಖಾಡ್ ಅಥವಾ ಕಂದರದ ಆಳವಾದ ಕಮರಿಯನ್ನು ದಾಟುತ್ತದೆ.
ಇದು ಭಾರತದ ಮೊದಲ ಕೇಬಲ್ ತಂಗುವ ರೈಲು ಸೇತುವೆಯಾಗಿದೆ. ಇದನ್ನು ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ ನಿರ್ಮಿಸಿದೆ.
ಅಕ್ಟೋಬರ್ 2016 ರಲ್ಲಿ, ಭಾರತೀಯ ರೈಲ್ವೇ ಅಂಜಿ ಖಾಡ್ನಲ್ಲಿ ಕೇಬಲ್ ತಂಗುವ ಸೇತುವೆಯನ್ನು ನಿರ್ಮಿಸಲು ನಿರ್ಧರಿಸಿತು. ಈ ಸೇತುವೆಯು ಕ್ರಮವಾಗಿ ಕತ್ರಾ ಮತ್ತು ರಿಯಾಸಿ ಬದಿಗಳಲ್ಲಿ ಟಿ2 ಮತ್ತು ಟಿ3 ಸುರಂಗಗಳನ್ನು ಸಂಪರ್ಕಿಸುತ್ತದೆ. ಇದು 196 ಮೀಟರ್ ಎತ್ತರದಲ್ಲಿ 290 ಮೀಟರ್ ಮುಖ್ಯ ವ್ಯಾಪ್ತಿಯನ್ನು ಹೊಂದಿದೆ.
ಸೇತುವೆಯ ಮುಖ್ಯ ವಿಭಾಗದ ಉದ್ದವು 473.25 ಮೀಟರ್ಗಳಾಗಿದ್ದು, ಒಟ್ಟು 1,300 ಮೀಟರ್ಗಳಿಗಿಂತ ಹೆಚ್ಚು ಉದ್ದವಿದ್ದು, 120 ಮೀಟರ್ ಉದ್ದದ ವಯಡಕ್ಟ್ ಇದೆ. ಇದಕ್ಕೆ 458 ಕೋಟಿ ರೂ ವೆಚ್ಚ ಮಾಡಲಾಗಿದೆ