ಪತ್ರಕರ್ತನ‌ ಮಗ ಹಿರೋ ಆದ ಕಥೆ ಇದು..!

ಬೆಳಗಾವಿ.

ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗಬೇಕು. ಡಾಕ್ಟರ್ ಮಕ್ಕಳು ಡಾಕ್ಟರ್ರೇ ಆಗಬೇಕು. ರಾಜಕಾರಣಿಗಳ ಮಜ್ಕಳು ರಾಜಕಾರಣಿಗಳೇ ಆಗಬೇಕು..!

ಇಂತಹುದೊಂದು ರೂಢಿ ಮಾತು ಸಹಜವಾಗಿ ಎಲ್ಲೆಡೆ ಕೇಳಿಬರುತ್ತಿದೆ. ಅಷ್ಟೆ ಅಲ್ಲ ಅದೇ ರೀತಿ‌ ಆಗುತ್ತಿದೆ

ಆದರೆ ಇದೆಲ್ಲಕ್ಕಿಂತ ಭಿನ್ನ ಎನ್ನುವುದನ್ನು ತೋರಿಸಿ ಕೊಟ್ಟ ಹುಡುಗ ಅಂದ್ರೆ ಕಿರಣ ರವಿ ಉಪ್ಪಾರ.!

ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ ಟೈಮ್ಸ್‌ಆಫ್ ಇಂಡಿಯಾದ ಬೆಳಗಾವಿಯ ಹಿರಿಯ ಪತ್ರಕರ್ತ ಎನಿಸಿಕೊಂಡ ರವಿ ಉಪ್ಪಾರ ಅವರ ಮಗ ಈಗ ಸ್ಮಾರ್ಟ ಸಂಕಟ ಚಲನಚಿತ್ರದ ಹಿರೋ..!

ಈ ಸ್ಮಾರ್ಟ ಸಂಕಟ ಸಿನೇಮಾದಲ್ಲಿ ಪತ್ರಕರ್ತ ರವಿ ಉಪ್ಪಾರನ‌ ಮಗ, ಕಿರಣ‌ ಮತ್ತು ಮಗಳು ಖುಷಿ ಇಬ್ಬರೂ ಅಭಿನಯಿಸಿದ್ದಾರೆ

ಬೆಳಗಾವಿ ಪತ್ರಿಕೋದ್ಯಮದ ಈಗಿನ ಕಾಲಘಟ್ಟದಲ್ಲಿ ತನ್ನದೇ ಆದ ಘನತೆ ಗೌರವವನ್ನು ಉಳಿಸಿಕೊಂಡು ಬಂದ ಹೆಗ್ಗಳಿಕೆ ರವಿ ಉಪ್ಪಾರಗೆ ಇದೆ.

ಈಗ ಅಂತಹವರ ಮಗ ಕಿರಣ ಮತ್ತು ಮಗಳು ಖುಷಿ ಸಹ ಚಲನಚಿತ್ರದಲ್ಲಿ ಅದ್ಭುತ ಅಭಿನಯ ಮಾಡಿದ್ದಾಳೆ ಎಂದರೆ ಇದು ಬೆಳಗಾವಿ ಹೆಮ್ಮೆ

ಅಂದ ಹಾಗೆ ಕಿರಣ ಉಪ್ಪಾರ ಸಿನೇಮಾ ಬೆನ್ನತ್ತಿ ಓದಿನಲ್ಲಿ ಹಿಂದೆ ಬಿದ್ದಿಲ್ಲ.

ನಗರದ ಹೆಸರಾಂತ RL LAW COLLEGE. ನಲ್ಲಿ BBA LLB ಆಭ್ಯಾಸ ಮಾಡುತ್ತಿದ್ದಾನೆ. ಈ ಹಿಂದೆ ಕೂಡ ಕಿರಣ ಜೊತೆಯಾಗಿ, ಹಿತವಾಗಿ ಎನ್ನುವ ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದನು.‌ಈ ಚಿತ್ರ ಇನ್ನೂ ಬಿಡುಗಡೆ ಆಗಬೇಕಿದೆ.

ಇನ್ನು ಪುಟ್ಟ ಮಗಳು ಖುಷಿ ಸೆಂಟ್ ಜೋಸೆಫ್ ನಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ.

ಅದೇನೇ ಇರಲಿ. ಪತ್ರಕರ್ತನ ಮಗ, ಮಗಳು ಸಿನೇಮಾ ರಂಗದಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಹೆಮ್ಮೆನೇ. Good Luck…

Leave a Reply

Your email address will not be published. Required fields are marked *

error: Content is protected !!