ಔರಂಗಜೇಬನಿಗೆ ಹೆದರಿಲ್ಲ- ಶಿವೇಂದ್ರ. ಇದು ಶಿವಭಕ್ತರ ಶಕ್ತಿ- ಅಭಯ

ಇದು ಬೆಳಗಾವಿಅನಗೋಳ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಬೃಹತ್ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹದಿಮೂರನೇ ವಂಶಸ್ಥರಾದ ಛತ್ರಪತಿ ಶಿವೇಂದ್ರ ರಾಜೇಭೋಸಲೆಯವರು, ಈ ಭವ್ಯ ಹಾಗೂ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ತುಂಬ ಖುಷಿಯಾಗಿದೆ. ಇಂತಹ ವಿಶಿಷ್ಟವಾದ ಕಾರ್ಯಕ್ರಮಕ್ಕೆ ಇಲ್ಲಿ ಅಡೆತಡೆಯಾದ ಬಗ್ಗೆ ಕೇಳಿದೆ. ಶಾಸಕ ಅಭಯ ಪಾಟೀಲ ಹಾಗೂ ಧನಂಜಯ ಜಾಧವ ಅವರು ಈ ಬಗ್ಗೆ ನನ್ನ ಗಮನಕ್ಕೆ ತಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ವಂಶ ಔರಂಗಜೇಬನಿಗೇ ಹೆದರಿಲ್ಲ. ಇನ್ನು ಇದಕ್ಕೆಲ್ಲಾ…

Read More

ಅಭಯ ಚಾಣಾಕ್ಷ ನಡೆಗೆ ಜನ ಫುಲ್ ಫಿದಾ..!

ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ. ಸರ್ಕಾರ ಪ್ರತಿಮೆ ಅನಾವರಣಕ್ಕೆ ನೀಡಿರಲಿಲ್ಲ. ಆದರೆ ಜನರ ಭಾವನೆಗಳಿಗೆ ಮನ್ನಣೆ ನೀಡಿದ ಅಭಯ. ಒಂದೇ ತಾಸಿನಲ್ಲಿ ಪ್ರತಿಮೆ ಅನಾವರಣ ಅಲಂಕಾರ ರೆಡಿ. ಪೊಲೀಸ್, ಆಡಳಿತ ಮಧ್ಯೆಯೇ ಎಲ್ಲವನ್ನು ಸಿದ್ಧಮಾಡಿದ ಸಂಭಾಜಿಮಹಾರಾಜ ಭಕ್ತರು. ಬೆಳಗಾವಿ. ಮಾಡೇ ತೀರಬೇಕು ಎನ್ನುವ ಛಲವೊಂದಿದ್ದರೆ ಎಷ್ಟೇ ಅಡ್ಡಿಗಳು ಬಂದರೂ ಅದನ್ನು ಎದುರಿಸಿ ಗೆಲ್ಲಬಹುದು ಎನ್ನುವುದಕ್ಕೆ ನಿನ್ನೆ ಬೆಳಗಾವಿಯಲ್ಲಿ ನಡೆದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣವೇ ಸಾಕ್ಷಿ. ಈ ರೀತಿ ಅಂದಿದ್ದನ್ನು ಮಾಡಿ ತೋರಿಸಿ ಗೆಲುವಿನ‌ ನಗೆಬೀರಿದವರು…

Read More

ಧಿಕ್ಕಾರ ಅಂದವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸಿಪಿ ಶೇಖರ

ಬೆಳಗಾವಿ.ಛತ್ರಪತಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದರಿಗೆ ಧಿಕ್ಕಾರ ಘೋಷಣೆ ಕೂಗು್ತಿದ್ದವರಿಗೆ ಎಸಿಪಿ ಶೇಖರಪ್ಪ ಖಡಕ್ ಎಚ್ಚರಿಕೆ ಕೊಟ್ಡು ಕಳಿಸಿದರು. ಶಾಸಕ ಅಭಯ ಪಾಟೀಲರು ಸಿದ್ಧತೆ ಪರಿಶೀಲನೆಗೆ ಆಗಮಿಸಿ ವಾಪಸ್ಸು ಹೋಗುವ ಸಂದರ್ಭದಲ್ಲಿ ಭಜಂತ್ರಿ ಗಲ್ಲಿಯ ಬಳಿ ನಿಂತಿದ್ದ ಕೆಲವರು ಧಿಕ್ಕಾರ ಘೋಷಣೆ ಕೂಗಿದರು. ಅಷ್ಟೆ ಅಲ್ಲ ಕುಂಭ ತೆಗೆದುಕೊಂಡು ಹೋಗುತ್ತಿದ್ದವರಿಗೂ ಘೋಷಣೆ ಕೂಗುತ್ತಿದ್ದರು. ಇದನ್ನು ಗಮನಿಸಿದ ಎಸಿಪಿ ಶೇಖರಪ್ಪ ಅವರು ಘೋಷಣೆ ಕೂಗುತ್ತಿದ್ದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳಿಸಿದರು. ನಂತರ ಪೊಲೀಸ್ ಆಯುಕ್ತ ಇಡಾ…

Read More

ಸಂಭಾಜಿ ಮೂರ್ತಿ ಅನಾವರಣ-ಗೆದ್ದ ಶಾಸಕರ ತಂಡ

ಬೆಳಗಾವಿ.ಕೊನೆಗೂ ಅನಗೋಳ‌ ನಾಕಾ ಬಳಿ ಪ್ರತಿಷ್ಠಾಪುಸಲಾಗಿದ್ದ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣ ಪೊಲೀಸ್ ಬಂದೋಬಸ್ತಿ‌ ನಡುವೆಯೇ ನಡೆಯಿತು. ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ನಗರಸೇವಕರಾದ ವಾಣಿ ಜೋಶಿ, ಅಭಿಜಿತ್ ಜವಳಕರ, ನಿತಿನ್ ಜಾಧವ ಗಿರೀಶ ಧೋಂಗಡಿ ಮುಂತಾದವರ ಸಮ್ಮುಖದಲ್ಲಿ ಮೂರ್ತಿ ಮೇಲಿನ ಬಟ್ಟೆ ತೆರವು ಮಾಡಲಾಯಿತು. ಆರಂಭದಲ್ಲಿ ಮೇಯರ್ ಸೇರಿದಂತೆ ಮುಂತಾದವರು ಪಾಲಿಕೆ ಸಿಬ್ಬಂದಿ ಕಡೆಯಿಂದ ಮಧ್ಯದಲ್ಲಿ ಹಾಕಲಾಗಿದ್ದ ತಗಡು ಸೇರಿದಂತೆ ಸ್ವಚ್ಚತೆ ಮಾಡಬೇಕು ಎಂದು ಸೂಚನೆ ನೀಡಿದರು. ಆದರೆ ಅಲ್ಲಿ ಹಾಜರಿದ್ದ ಪಾಲಿಕೆ…

Read More

ಸಂಭಾಜಿ ಮಹಾರಾಜರ ಪ್ರತಿಮೆ ವಿವಾದ- ಪೂಜಾ+ ಬಂದೋಬಸ್ತ್

ಬೆಳಗಾವಿ. ಅನಗೋಳ ನಾಕಾದಲ್ಲಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣದ ಸಿದ್ಧತೆ ಒಂದು ಕಡೆ ನಡೆದಿದ್ದರೆ, ಮತ್ತೊಂದು ಕಡೆಗೆ ಪೊಲೀಸ್ ಬಂದೋಬಸ್ತ್ ಲೆಕ್ಕಾಚಾರಗಳು ಜೋರಾಗಿ‌ ನಡೆದಿವೆ ಹೀಗಾಗಿ ಅನಗೋಳ ಪರಿಸರದ ವಾರಾವರಣ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಮೂರ್ತಿ ಅನಾವರಣ ಮಾಡೇ ತೀರಬೇಕು ಎನ್ನುವ ಉದ್ದೇಶದಿಂದ ಅಲ್ಲಿ ಕೆಲವರು ಪೂಜಾ ಸಿದ್ಧತೆಯನ್ನು ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆಗೆ ಕ್ಷಣ ಕ್ಷಣಕ್ಕೂ ಪೊಲೀಸ್ ಬಂದೋಬಸ್ತಿಯ ಲೆಕ್ಕಾಚಾರಗಳು ಬದಲಾಗುತ್ತಿವೆ. ಈಗಾಗಲೇ ಸ್ಥಳದಲ್ಲಿ ನಾಲ್ಕೈದು ಜನ ಪೊಲೀಸ್ ಇನ್ಸಪೆಕ್ಟರಗಳು…

Read More
error: Content is protected !!