ಬೆಳಗಾವಿ.ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದರಿಗೆ ಧಿಕ್ಕಾರ ಘೋಷಣೆ ಕೂಗು್ತಿದ್ದವರಿಗೆ ಎಸಿಪಿ ಶೇಖರಪ್ಪ ಖಡಕ್ ಎಚ್ಚರಿಕೆ ಕೊಟ್ಡು ಕಳಿಸಿದರು.

ಶಾಸಕ ಅಭಯ ಪಾಟೀಲರು ಸಿದ್ಧತೆ ಪರಿಶೀಲನೆಗೆ ಆಗಮಿಸಿ ವಾಪಸ್ಸು ಹೋಗುವ ಸಂದರ್ಭದಲ್ಲಿ ಭಜಂತ್ರಿ ಗಲ್ಲಿಯ ಬಳಿ ನಿಂತಿದ್ದ ಕೆಲವರು ಧಿಕ್ಕಾರ ಘೋಷಣೆ ಕೂಗಿದರು. ಅಷ್ಟೆ ಅಲ್ಲ ಕುಂಭ ತೆಗೆದುಕೊಂಡು ಹೋಗುತ್ತಿದ್ದವರಿಗೂ ಘೋಷಣೆ ಕೂಗುತ್ತಿದ್ದರು.
ಇದನ್ನು ಗಮನಿಸಿದ ಎಸಿಪಿ ಶೇಖರಪ್ಪ ಅವರು ಘೋಷಣೆ ಕೂಗುತ್ತಿದ್ದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳಿಸಿದರು.
ನಂತರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್, ಡಿಸಿಪಿ ಜಗದೀಶ ರೋಹನ್ ಮುಂತಾದವರು ಸ್ಥಳಕ್ಕೆ ಭೆಟ್ಟಿ ನೀಡಿದರು.