ಸರ್ಕಾರ ಪ್ರತಿಮೆ ಅನಾವರಣಕ್ಕೆ ನೀಡಿರಲಿಲ್ಲ. ಆದರೆ ಜನರ ಭಾವನೆಗಳಿಗೆ ಮನ್ನಣೆ ನೀಡಿದ ಅಭಯ.
ಒಂದೇ ತಾಸಿನಲ್ಲಿ ಪ್ರತಿಮೆ ಅನಾವರಣ ಅಲಂಕಾರ ರೆಡಿ.
ಪೊಲೀಸ್, ಆಡಳಿತ ಮಧ್ಯೆಯೇ ಎಲ್ಲವನ್ನು ಸಿದ್ಧಮಾಡಿದ ಸಂಭಾಜಿಮಹಾರಾಜ ಭಕ್ತರು.
ಬೆಳಗಾವಿ.
ಮಾಡೇ ತೀರಬೇಕು ಎನ್ನುವ ಛಲವೊಂದಿದ್ದರೆ ಎಷ್ಟೇ ಅಡ್ಡಿಗಳು ಬಂದರೂ ಅದನ್ನು ಎದುರಿಸಿ ಗೆಲ್ಲಬಹುದು ಎನ್ನುವುದಕ್ಕೆ ನಿನ್ನೆ ಬೆಳಗಾವಿಯಲ್ಲಿ ನಡೆದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣವೇ ಸಾಕ್ಷಿ.
ಈ ರೀತಿ ಅಂದಿದ್ದನ್ನು ಮಾಡಿ ತೋರಿಸಿ ಗೆಲುವಿನ ನಗೆಬೀರಿದವರು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು.
ಈ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣವನ್ನು ಮುಂದೂಡಬೇಕು ಎಂದು ಪಾಲಿಕೆ ಆಯುಕ್ತರು ಮೇಯರ್ ಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಗಳೂ ಸಹ ಅನುಮತಿ ನೀಡಿಲ್ಲ ಎಂದಿದ್ದರು.
ಆದರೆ ಶಿವಭಕ್ತರು ಮಾತ್ರ ಇದ್ಯಾವುದಕ್ಕೂ ತುಟಿಪಿಟಕ್ಕೆನ್ನದೇ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಮೂರ್ತಿ ಅನಾವರಣವನ್ನು ಸಡಗರ ಸಂಭ್ರಮದಿಂದ ನೆರವೇರಿಸಿದರು. ಇದಕ್ಕೆ ಮಹಾರಾಷ್ಟ್ರ ದ ಸಚಿವರಾದ ಶಿಪೇಂದ್ರರಾಜಾ ಭೋಸಲೆ ಸಾಕ್ಷಿಯಾದರು.
ಟೆನ್ಸನ್ ಫ್ರೀ ವಾತಾವರಣ ಇಡೀ ರಾಜ್ಯದ ಜನರ ಕುತೂಹಲಕ್ಕೆ ಕಾರಣವಾಗಿರುವ ಬೆಳಗಾವಿ ಅನಗೋಳ ವೃತ್ತದಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣದಲ್ಲಿ ಕೊನೆ ಕ್ಷಣದವರೆಗೂ ಟೆನ್ಸನ್ ಟೆನ್ಸನ್ ಇತ್ತು. ಆದರೆ ಎಲ್ಲವೂ ಸುರಳುತವಾಗಿ ಮುಗಿದ ನಂತರ ಶಿವಭಕ್ತರು ಫುಲ್ ಖುಷ್ ಆದರು. ಸಮಾರಂಭ ಯಶಸ್ವಿಗೊಳಿಸಿದ್ದಕ್ಕಾಗಿ ಜನಸ್ತೋಮ ಶಾಸಕ ಅಭಯ ಪಾಟೀಲರಿಗೆ ಧನ್ಯವಾದ ಹೇಳಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಸಚಿವ ಶಿವಾಜಿ ರಾಜೆ ಭೋಸಲೆ ಅವರು ಮೂರ್ತಿ ಅನಾವರಣಗೊಳಿಸಿದರು. .
ಗೊಂದಲ ಸೃಷ್ಟಿ
ಮೂರ್ತಿಯ ಸುತ್ತಲೂ ಬಟ್ಟೆಯನ್ನು ಕಟ್ಟಿದ್ದರು. ಆದರೆ ರಮಾಕಾಂತ ಕೊಂಡುಸ್ಕರ ನೇತೃತ್ವದ ಗುಂಪು ಇವತ್ತು ಪೂಜೆಗೆ ಅವಕಾಶ ಕೊಡಬಾರದು ಎಂದು ಪಟ್ಟು ಹಿಡಿದಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು, ಅಷ್ಟೇ ಅಲ್ಲ ಇದು ವಾತಾವರಣ ಕಾವೇರುವಂತೆಯೂ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಮೂರ್ತಿಯ ಸುತ್ತಲು ಯಾವುದೇ ಸ್ವಚ್ಚತೆಯನ್ನು ಮಾಡಲು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
ಅಭಯ ಚಾಣಾಕ್ಷ ನಡೆ..! ಇದೆಲ್ಲವನ್ನು ಗಮನಿಸುತ್ತಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯ ಪಾಟೀಲರು ಚಾಣಾಕ್ಷ ನಡೆ ಅನುಸರಿಸಿದರು. ಅಲ್ಲಿ ಯಾವುದೇ ಮತ್ತು ಯಾರೊಂದಿಗೂ ವಾದವಿವಾದಕ್ಕೆ ಹೋಗದೇ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ತಮ್ಮ ತಂಡಕ್ಕೆ ಸೂಚಿಸಿದ್ದರು.
ಸಂಜೆ ನಾಲ್ಕು ಗಂಟೆಯವರೆಗೆ ಮೂರ್ತಿಯ ಸುತ್ತ ಯಾರೂ ಇರಲಿಲ್ಲ. ಅಲ್ಲಿ ಒಂದಿಷ್ಟು ಜನ ಮಹಿಳೆಯರು ಮತ್ತು ಇನ್ನೂ ಕೆಲವರು ಕುಳಿತು ಕೊಂಡಿದ್ದರು. ಇಲ್ಲ ಬಿಜೆಪಿ ನಗರಸೇವಕರಾದ ವಾಣಿ ವಿಲಾಸ ಜೋಶಿ, ನಿತಿನ್ ಜಾಧವ, ಅಭಿಜಿತ್ ಜವಳಕರ, ಶ್ರೀಶೈಲ್ ಕಾಂಬಳೆ ಅವರಿಗೆ ಸರಿಯಾಗಿ ನಾಲ್ಕು ಗಂಟೆಗೆ ಸಂಭಾಜಿ ಪ್ರತಿಮೆ ಬಳಿ ಇರುವಂತೆ ಸೂಚನೆ ಹೋಯಿತು.
ಮೇಯರ್ ಗರಂ..! ಪ್ರತಿಮೆ ಸ್ಥಳಕ್ಕೆ ಬಂದ ಮೇಯರ್ ಸವಿತಾ ಕಾಂಬಳೆ ಅವರು ಅಲ್ಲಿದ್ದ ತಗಡನ್ನು ಗಮನಿಸಿ ಗರಂ ಆದರು.ಈ ಸಂದರ್ಭದಲ್ಲಿ ಅಲ್ಲಿದ್ದ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಅವರನ್ನು ಕಂಡು ಗರಂ ಆದರು. ಈ ಸಂದರ್ಭದಲ್ಲಿ ಮೇಯರ್ ಅವರು ಪಾಲಿಕೆ ಸಿಬ್ಬಂದಿಯನ್ನು ಕರೆಯಿಸಿ ಬಟ್ಟೆ ತೆಗೆಸುವುದು ಸೇರಿದಂತೆ ಎಲ್ಲ ಸ್ವಚ್ಚತೆಯನ್ನು ಮಾಡಬೇಕೆಂದು ಸೂಚನೆ ನೀಡಿದರು.
ಇಲ್ಲಿ ಮೇಯರ್ ಒಂದಲ್ಲ. ಮೂರು ಬಾರಿ ಹೇಳಿದರೂ ಕೂಡ ನಿಪ್ಪಾಣಿಕರ ಅವರು ನಿಮ್ಮ ಸಿಬ್ಬಂದಿಯನ್ನು ಕರೆಯಿಸಿ ಪುತ್ಥಳಿಗೆ ಕಟ್ಟಿದ ಬಟ್ಟೆ ತೆರವುಗೊಳಿಸುವಂತೆ ಸೂಚಿಸಿದರು. ಆದರೆ ನಿಪ್ಪಾಣಿಕರ ಯಾವುದೇ ಉತ್ತರ ನೀಡಿದಾದಾಗ ನಾನು ಏನು ಹೇಳುತ್ತಿದ್ದೇನೆ ಮೊದಲು ಮಾಡಿ ಎಂದರು. ಆದರೂ ಕೂಡ ಪಾಲಿಕೆ ಅಧಿಕಾರಿ ಮೌನ ವಹಿಸಿದಾಗ ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಚಹ್ವಾಣ, ನಗರಸೇವಕರಾದ ವಾಣಿ ಜೋಶಿ, ಅಭಿಜಿತ ಜವಳಕರ ಮುಂತಾದವರು ಸ್ವತಃ ತಾವೇ ಮುಂದಾಗಿ ಅಡ್ಡಲಾಗಿ ಇಟ್ಟಿದ್ದ ತಗಡನ್ನು ತೆಗೆದು ಪುತ್ಥಳಿ ಬಳಿ ತೆರಳಿದರು. ಅಷ್ಟರಲ್ಲಿ ಅಲ್ಲಿ ಸೇರಿದ್ದ ಹತ್ತಕ್ಕೂ ಹೆಚ್ಚಿದ್ದ ಯುವಕರು ಪುತ್ಥಳಿಗೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಿ ಅಲಂಕಾರ ಮಾಡಲು ಪ್ರಾರಂಭಿಸಿದರು.
ನೋಡು ನೋಡುತ್ತಿದ್ದಂತೆ ಸಂಜೆ 6 ಗಂಟೆ ವೇಳೆಗೆ ಲೈಟಿಂಗ್, ಹೂವಿನ ಅಲಂಕಾರ ಮಾಡಿ ಮುಗಿಸಿದರು. ಮಹಿಳೆಯರು ಸಂಭಾಜಿ ಮಹಾರಾಜರ ಪ್ರತಿಮೆ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ ಅಲಂಕಾರ ಮಾಡಿದರು,
ಧಿಕ್ಕಾರ ಅಂದವರಿಗೆ ಬೆಂಡೆತ್ತಿದ ಪೊಲೀಸ್ ..!
ಒಂದು ಕಡೆಗೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲರು ಸಿದ್ಧತೆ ಪರಿಶೀಲಿಸಲು ಆಗಮಿಸಿ ವಾಪಸ್ಸು ಹೋಗುತ್ತಿದ್ದ ಸಂದರ್ಭದಲ್ಲಿ ಭಜಂತ್ರಿ ಗಲ್ಲಿಯ ಬಳಿ ನಿಂತಿದ್ದ ಕೆಲವರು ಧಿಕ್ಕಾರ ಘೋಷಣೆ ಕೂಗಿದರು, ಇಲ್ಲಿ ಶಾಸಕ ಅಭಯ ಪಾಟೀಲರಿಗೆ ಅಷ್ಟೇ ಅಲ್ಲ ಕುಂಭಹೊತ್ತು ಹೋಗುತ್ತಿರುವ ಮಹಿಳೆಯರಿಗೂ ಧಿಕ್ಕಾರ ಹಾಕತೊಡಗಿದರು.
ಅದ್ದೂರಿ ಮೆರವಣಿಗೆ ಇಲ್ಲಿ ಸರ್ಕಾರಕ್ಕೆ ಶೆಡ್ಡು ಹೊಡೆದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ನ ಭೂತೋ ನ ಭವಿಷ್ಯತಿ ಎನ್ನುವಂತೆ ಶೋಭಾ ಯಾತ್ರೆ ನಡೆಸಿದರು,
ಧಿಕ್ಕಾರ ಹಾಕಲು ಬಂದವರಿಗೆ ಎಚ್ಚರಿಕೆ ಕೊಟ್ಟ ಖಾಕಿ.
ಅನಗೋಳ ಕ್ರಾಸದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದರು, ಕುಂಭಮೇಳ ಹೊತ್ತ ಸಾವಿರಾರು ಮಹಿಳೆಯರು, ವಿವಿಧ ಕಲಾ ತಂಡಗಳ ಮೂಲಕ ಶೋಭಾಯಾತ್ರೆ ಆರಂಭಗೊಂಡಿತು, ಶೋಭಾ ಯಾತ್ರೆಯಲ್ಲಿ ಡೋಲ್ ತಾಷಾ, ಕುಂಭಮೇಳ, ಕುದುರೆ ಸವಾರಿ ಮೂಲಕ ಅದ್ಧೂರಿ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ಪಲ್ಲಕ್ಕಿ ಜೊತೆಗೆ ಬಾನೆತ್ತರದಲ್ಲಿ ಭಗವಾ ಧ್ವಜಗಳು ಹಾರಾಡುತ್ತಿದ್ದುದು ಕಂಡು ಬಂದಿತು. ಶಾಸಕ ಅಭಯ ಪಾಟೀಲ ಮತ್ತು ಮಹಾ ಸಚಿವ ಶಿವೇಂದ್ರ ರಾಜೆಭೋಸಲೆ ಅವರು ತೆರೆದ ವಾಹನದಲ್ಲಿ ಸಾಗಿದರು.