ಮಹಾರಾಜರ ಮೂರ್ತಿಗಳಿಗೆ ಡಬಲ್ ಪೂಜಾ ಧಮಾಕಾ

ಬೆಳಗಾವಿಯಲ್ಲಿ ಮಹಾರಾಜರ ಮೂರ್ತಿ ಅನಾವರಣ ರಾಜಕಾರಣ.

ಯಳ್ಳೂರಗಡದಲ್ಲಿ ಶಿವಾಜಿ ಪ್ರತಿಮೆ ಅನಾವರಣ ಎರಡು ಸಲ ನಡೆದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ನಂತರ ಕಾಂಗ್ರೆಸ್ ನಡೆಸಿತ್ತು.

ಆಗ ಓಕೆ ಅಂದವರು ಈಗ ವಿರೋಧ ಮಾಡುತ್ತಿದ್ದಾರೆ

ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲು ಬಿಜೆಪಿಯವರು ಅನಾವರಣ ಮಾಡಿದರು. ಇನ್ನು ಸರ್ಕಾರದ ಸರದಿ.

ಶಿಷ್ಟಾಚಾರ ಪಾಲಿಸಬೇಕಿದ್ದವರು ಯಾರು? ಮೇಯರ್ಗೆ ಕೊಟ್ಟ ಉತ್ತರದಿಂದ ಹೆಚ್ಚಿದ ಜಿದ್ದು.

ಬೆಳಗಾವಿ.

ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಏನೇ ರಾಜಕೀಯ ಜಿದ್ದು ಇದ್ದರೆ ಅದನ್ನು ಅವರೊಂದಿಗೆ ನೇರಾ ನೇರ ಮಾಡಬೇಕು.

ಆದರೆ ಕೆಲವರು ಅದನ್ನು ಬಿಟ್ಟು ಅಭಿವೃದ್ಧಿ ಅಥವಾ ಮಹಾತ್ಮರ ಪ್ರತಿಮೆ ಅನಾವರಣ ವಿಷಯದಲ್ಲಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ರಾಜಕಾರಣ ಬಲ್ಲವರಿಗೆ ಶಾಸಕ ಅಭಯ ಪಾಟೀಲ ಮತ್ತು ಹಿಂದುಸ್ತಾನ‌ ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ಅವರ ನಡುವೆ ವೈರತ್ವ ಯಾವ ಮಟ್ಟಕ್ಕೆ ಇದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಆದರೆ ಅಚ್ಚರಿಯ ಸಂಗತಿ ಎಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಆಗಿದ್ದ ರಮಾಕಾಂತ ಕೊಂಡುಸ್ಕರ ಅವರು ಅಭಯ ಪಾಟೀಲರನ್ನು ವಾಚಾಮಗೋಚರವಾಗಿ ನಿಂದಿಸಿದರು.

oplus_0

ಆದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಅಭಯ ಪಾಟೀಲರು ಮಾತ್ರ ಎಲ್ಲಿಯೂ ಯಾರನ್ನು ವೈಯಕ್ತಿಕವಾಗಿ ಟೀಕಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಅಭಯ ನಡೆ ಜನರನ್ನು ಆಕರ್ಷಿಸಿದರೆ, ರಮಾಕಾಂತ ಮಡೆ ಜನರನ್ನು ದೂರ ಮಾಡಿತು.

ಅದು ಬೇರೆ ಮಾತು

ಸಹಜವಾಗಿ ಏನೇ ಟೀಕೆ ಟಿಪ್ಪಣಿಗಳು ಇದ್ದರೂ ಅವು ಚುನಾವಣೆಗೆ ಮಾತ್ರ ಸಿಮೀತವಾಗಿರಬೇಕು. ಆದರೆ ಅದನ್ನು ಬದಿಗೊತ್ತಿ ರಮಾಕಾಂತ ಕೊಂಡುಸ್ಕರ ಅವರು ಅದನ್ನು ಮಹಾರಾಜರ ಪ್ರತಿಮೆ ಅನಾವರಣದವರೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಒಂದು ರೀತಿಯಲ್ಲಿ ಸರ್ಕಾರ ಅಂದರೆ ಜಿಲ್ಲಾಡಳಿತವನ್ನೇ ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇಲ್ಲಿ ಹೇಗಾಗಿದೆ ಎಂದರೆ, ಇಲ್ಲಿ ಸಂಭಾಜಿ‌ ಮಹಾರಾಜರ ಮೂರ್ತಿ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸುವ ರಮಾಕಾಂತ ಕೊಂಡುಸ್ಕರ ಅವರು ಅಲ್ಲಿ ಜೈ ಮಹಾರಾಷ್ಟ್ರ ಎಂದು ಕೂಗಿದ್ದನ್ನು ವಿರೋಧಿಸುವ ಗೋಜಿಗೆ ಹೋಗುತ್ತಿಲ್ಲ. ಆದರೆ ಛತ್ರಪತಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣದ ಬಗ್ಗೆ ತೀವೃ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದು ಯಾವ ನ್ಯಾಯ ಎನ್ನುವುದು ಜನರ ಪ್ರಶ್ನೆ.

ಪ್ರೋಟೊಕಾಲ್ ಯಾರ ಕೆಲಸ?

ಈ‌ ಮೂರ್ತಿ ಅನಾವರಣ ಸಂಬಂಧ ಜಿಲ್ಲಾಡಳಿತಕ್ಕೆ ಪ್ರೋಟೋಕಾಲ್ ವಿಷಯವೇ ಮುಖ್ಯವಾಗಿತ್ತು. ಅದೇ ಕಾರಣಕೊಟ್ಟು ಮುಂದಕ್ಕೆ ಹಾಕುವ ತೀರ್ಮಾನಕ್ಕೆ ಬರಲಾಗಿತ್ತು.

ಆದರೆ ಇಲ್ಲಿ ಪ್ರೊಟೋಕಾಲ್ ಪಾಲಿಸಬೇಕಾದವರು ಪಾಲಿಕೆಯವರು! .ಪಾಲಿಕೆ ಪರಿಷತ್ ಸಭಾಗ್ರಹದಲ್ಲಿ ತೀರ್ಮಾನವಾದಂತೆ ಮೇಯರ್ ಅವರು ದಿ.‌5 ರಂದೇ ಮೂರ್ತಿ ಅನಾವರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದರು.

ಆಗ ಪಾಲಿಕೆಯವರು ಶಿಷ್ಟಚಾರವನ್ನು ಪಾಲಿಸಬೇಕಿತ್ತು. ಅದರ ಪ್ರಕಾರವೇ ಆಮಂತ್ರಣ ಪತ್ರಿಕೆ ಮುದ್ರಣ ಮಾಡಬೇಕಿತ್ತು. ಆದರೆ ಅದ್ಯಾವುದನ್ನು ಪಾಲಿಕೆ ಮಾಡಲೇ ಇಲ್ಲ. ಇದು ಒಂದು ರೀತಿಯ ಗೊಂದಲಕ್ಕೂ ಕಾರಣವಾಯಿತು.

ಅದೆಲ್ಲಾ ಬಿಡಿ. ಇಷ್ಟು ದಿನ ಅದೇ ಛತ್ರಪತಿ ಶಿವಾಜಿ ಮತ್ತು ಸಂಭಾಜಿ ಮಹಾರಾಜರ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದವರು ಈಗ ಅದೇ ಮಹಾನ್ ಮೂರ್ತಿಗಳ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಆಗಲೂ ಅದೇ ರಾಗ
ಬೆಳಗಾವಿ ತಾಲೂಕಿನ ಯಳ್ಳೂರ ಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡುವ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು,

ಸಿಎಂ ಬೊಮ್ಮಾಯಿ ಅವರಿಂದ ಮೊದಲು ಲೋಕಾರ್ಪಣೆ. ಯಳ್ಳೂರಗಡ ಶಿವಾಜಿ ಮಹಾರಾಜರ ಪ್ರತಿಮೆ.

—–
ಆಗ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅಧಿಕೃತವಾಗಿ ಬಂದು ಯಳ್ಳುರಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿದ್ದರು,
ಆದರೆ ಅದರ ನಂತರ ಶುದ್ಧೀಕರಣ ನೆಪದಲ್ಲಿ ಕಾಂಗ್ರೆಸ್ನ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ ಮತ್ತೊಮ್ಮೆ ಪೂಜೆ ಕಾರ್ಯಕ್ರಮ ನಡೆಯಿತು,
ಆದರೆ ಆಗಿನ ಜಿಲ್ಲಾಧಿಕಾರಿಗಳು ಎರಡನೆಯ ಸಲ ಛತ್ರಪತಿ ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿದ್ದು ಅನಧೀಕೃತ ಎಂದು ಹೇಳಿರಲಿಲ್ಲ
.

ಆಗಿನ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಯಳ್ಳೂರಗಡ ಶಿವಾಜಿವ ಪ್ರತಿಮೆಗೆ ಪೂಜೆ ಸಲ್ಲಿಸಿದರು

ಈ ವಿರೋಧ‌ ಸರಿಯೇ?
ಪ್ರತಿ ಬಾರಿ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ   ಮುಹೂರ್ತ ಫಿಕ್ಸ ಆದರೆ ಅದಕ್ಕೆ ಕೆಲವರು ಅಡ್ಡಿ ಮಾಡುತ್ತಿದ್ದರು. ಈ ಕಾರಣದಿಂದ ಅದು ಮುಂದಕ್ಕೆ ಹೋಗುತ್ತಿತ್ತು.

ಹೀಗಾಗಿ ಕಳೆದ ಮಹಾನಗರ ಪಾಲಿಕೆ ಸಭೆಯಲ್ಲಿಯೇ ಮೂರ್ತಿ ಅನಾವರಣಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು, ಅದಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಪ್ರಕಾರ ಎಲ್ಲವನ್ನು ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮೇಯರ್ ಅವರು ಕೆಲ ದಿನಗಳ ಹಿಂದೆ ಆಯುಕ್ತರಿಗೆ ಪತ್ರವನ್ನು  ನೀಡಿದ್ದರು, ಆಗ ಆಯುಕ್ತರ ಗೈರು ಹಾಜರಾತಿಯಲ್ಲಿ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ಅವರು ಆ ಪತ್ರವನ್ನು ಸ್ವೀಕರಿಸಿದ್ದರು.
ಆದರೆ ಅವರು ಪಾಲಿಕೆಯ ಸುಪ್ರೀಂ ಎನಿಸಿಕೊಂಡ ಮೇಯರ್ ಪತ್ರ ಎಂದಾಕ್ಷಣ ಅದಕ್ಕೆ ಸಂಬಂಧಿಸಿದಂತೆ ಪೆಂಡಾಲ್ ಮತ್ತು ಲೈಟಿಂಗ್ ಡೆಕೊರೇಶನ್ಗೆ ಕ್ರಮ ತೆಗೆದುಕೊಂಡರು. ಅಷ್ಟೇ ತಡ ಮತ್ತೇ ರಮಾಕಾಂತ ಕೊಂಡುಸ್ಕರ ನೇತೃತ್ವದ ತಂಡ ಮತ್ತೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಮಂತ್ರಿಯವರಿಗೆ ದೂರು ನೀಡಿತು. ಇಲ್ಲಿ ಮೂರ್ತಿ ಸುತ್ತ ಕಾಮಗಾರಿ ಪೂರ್ಣಗೊಂಡಿಲ್ಲ ಎನ್ನುವುದು ಸೇರಿದಂತೆ ಪ್ರಕರಣ ಕೋರ್ಟನಲ್ಲಿದೆ ಎನ್ನುವ ತಪ್ಪು ಮಾಹಿತಿಯನ್ನು ಈ ಸಂದರ್ಭದಲ್ಲಿ ಸಚಿವರಿಗೆ ನೀಡಲಾಯಿತು, ಆದರೆ ಇಂತಹ ಸೂಕ್ಷ್ಮ ವಿಷಯದಲ್ಲಿ ಜಾಣ ನಡೆ ಅನುಸರಿಸುವ ಸಚಿವರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಿ ಎನ್ನುವ ಸೂಚನೆಯನ್ನು  ಅಧಿಕಾರಿಗಳಿಗೆ ನೀಡಿದರು.
ಆದರೆ ಇದೆಲ್ಲದರ ಮಧ್ಯೆ ಆಯುಕ್ತರು ಮೇಯರ್ ಅವರಿಗೆ ಕೊನೆ ಕ್ಷಣದಲ್ಲಿ ಪತ್ರವನ್ನು ಬರೆದು ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಆದ್ದರಿಂದ ಅನಾವರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಬೇಕು ಎಂದು ಮನವಿ ಮಾಡಿದ್ದರು
,

ಈ ಪತ್ರ ಮತ್ತಷ್ಟು ಸಂಘರ್ಷಕ್ಕೂ ಕಾರಣವಾಯಿತು.
ಇಲ್ಲಿ ಮೇಯರ್ ಅವರು ಆಯುಕ್ತರಿಗೆ ಪತ್ರ ಕೊಟ್ಟ ತಕ್ಷಣ, ಇನ್ನೂವರೆಗೂ ನಿರ್ಮಿತಿ ಕೇಂದ್ರದವರು ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಅದು ಮುಗಿದ ನಂತರ ಮೂರ್ತಿ ಅನಾವರಣ ಮಾಡುವುದು ಸೂಕ್ತ ಎಂದು ಮರು ಪತ್ರವನ್ನು ಮೇಯರ್ ಗೆ ಬರೆದಿದ್ದರೆ ಇದು ಇಷ್ಟು ದೊಡ್ಡ ಮಟ್ಟದ ಸುದ್ದಿಯೇ ಆಗುತ್ತಿರಲಿಲ್ಲ
.

ಅಭಯ ಫೇಲ್ ಅಂದಿದ್ದರು…!

ಇಷ್ಟೆಲ್ಲ ಪೊಲೀಸ್ ಬಂದೋಬಸ್ತಿ ಮತ್ತು ಪಾಲಿಕೆಯವರು ಮೂರ್ತಿ ಸುತ್ತ ಕಟ್ಟಿದ ಅರಿವೆಯನ್ನು ನೋಡಿ ವಿರೋಧಿಗಳು ಶಾಸಕ ಅಭಯ ಪಾಟೀಲರ ಪ್ರಯತ್ನ ಠುಸ್ ಆಯಿತು ಎಂದು ಹಿರಿಹಿರಿ ಹಿಗ್ಗಿದ್ದರು. ಆದರೆ ಅಂದು ಸಂಜೆ 4 ರ ನಂತರ ನಡೆದ ಕ್ಷಿಪ್ರ ಬೆಳವಣಿಗೆಗಳು ಇಡೀ ಚಿತ್ರಣವನ್ನು ಬದಲಿಸಿದವು.
ಪೊಲೀಸರ ಖಡಕ್ ಬಂದೋಬಸ್ತಿಯನ್ನು ಲೆಕ್ಕಿಸದೇ ಸಹಸ್ರ ಸಂಖ್ಯೆಯಲ್ಲಿ ಜನ ಹರಿದುಬಂದರು,

oplus_0

ಕುಂಭಮೇಳ,ಕುದರೆ ಸವಾರಿ, ಡೋಲ್ ತಾಶಾ ಎಲ್ಲವೂ ಅಲ್ಲಿ ಸಂಗಮವಾದವು, ಪೊಲೀಸರಿಗೆ ಈ ಜನರನ್ನು ನಿಭಾಯಿಸುವುದೇ ದುಸ್ತರವಾಯಿತು.

*ಒಂದೇ ತಾಸು..!*
ಅಂದು ಸಂಜೆ 4 ರವರೆಗೆ ಮೂರ್ತಿ ಸುತ್ತಲೂ ಯಾವುದೇ ಅಲಂಕಾರ ಇರಲಿಲ್ಲ. ಮೂರ್ತಿಯ ಸುತ್ತಲೂ ಕಟ್ಟಿದ್ದ ಬಟ್ಟೆ ಹಾಗೇಯೇ ಇತ್ತು,

ಶಾಸಕರ ಸೂಚನೆಯಂತೆ ನಗರಸೇವಕಿ ವಾಣಿ ಜೋಶಿ, ನಿತಿನ್ ಜಾಧವ, ಅಭಿಜಿತ್ ಜವಳಕರ ಮುಂತಾದವರು ಮೂರ್ತಿಯ ಹತ್ತಿರ ಬಂದು ನಿಂತರು, ನಂತರ ಕ್ಷಣಾರ್ಧದಲ್ಲಿ ಮೇಯರ್ ಬಂದು ಅಲ್ಲಿ ಅಡ್ಡಲಾಗಿ ಹಾಕಲಾಗಿದ್ದ ತಗಡು ಮತ್ತು ಬಟ್ಟೆಯನ್ನು ತೆರವು ಮಾಡುವಂತೆ ಸೂಚನೆ ನೀಡಿದರು, ಅದಕ್ಕೆ ಪಾಲಿಕೆಯವರು ಒಪ್ಪದ ಹಿನ್ನೆಲೆಯಲ್ಲಿ ಅವರೇ ಮುಂದಾಗಿ ತಗಡನ್ನು ಪಕ್ಕಕ್ಕೆ ಸರಿಸಿದರು,

ಅಷ್ಟೇ ಮುಂದೆ  ಅಲ್ಲಿ ಮೊದಲೇ ಸಿದ್ಧವಾಗಿ ನಿಂತಿದ್ದ ಯುವಕರು ನೇರವಾಗಿ ಮೇಲಕ್ಕೆ ಹೋಗಿ ಸುತ್ತಲು ಕಟ್ಟಿದ್ದ ಬಟ್ಟೆಯನ್ನು ತೆರವುಗೊಳಿಸಿದರು, ಅಲ್ಲಿ‌ಸೇರಿದ್ದ ಜನಸ್ತೋಮವನ್ನು ಕಂಡು ಯಾರು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮತ್ತೊಂದು ಕಡೆಗೆ ವಿದ್ಯುತ್ ಅಲಂಕಾರ, ಹೂವಿನ ಡೆಕೊರೇಶನ್ ಎಲ್ಲವೂ ಶುರುವಾಗಿ ಬಿಟ್ಟವು, ಕೇವಲ ಒಂದು ತಾಸಿನಲ್ಲಿ ಮೂರ್ತಿ ಸುತ್ತಲಿನ ಅಲಂಕಾರ ಎಲ್ಲರ ಕಣ್ಣು ಕುಕ್ಕುವಂತಾಯಿತು.

Leave a Reply

Your email address will not be published. Required fields are marked *

error: Content is protected !!