ಬೆಳಗಾವಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ- ಉದ್ವಿಗ್ನ

ಸಂತಿಬಸ್ತವಾಡದಲ್ಲಿ ಕಿಡಿಗೇಡಿಗಳ ಕೃತ್ಯ.

ಸಿಸಿಟಿವಿ ಇಲ್ಲದ್ದನ್ನು ಗಮನಿಸಿ‌ ಕೃತ್ಯವೆಸಗಿದ ಕಿಡಿಗೇಡಿಗಳು.

ಘಟನಾ ಸ್ಥಳಕ್ಕೆ ಜಮಾಯಿಸಿದ ಸಮಾಜ ಬಾಂಧವರು.

ಪೊಲೀಸ್ ಅಣದಿಕಾರಿಗಳ ದೌಡು

ಬೆಳಗಾವಿ. ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡುವಂತಹ ಗಂಭೀರ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕ ಮತ್ತು ಎರಡು ಹದೀಸ್ ಸಂಕಲನಗಳನ್ನು ಮಸೀದಿ ಪಕ್ಕದ ಜಮೀನಿಗೆ ಕೊಂಡೊಯ್ದು ಬೆಂಕಿ ಹಚ್ಚಲಾಗಿದೆ.

ಶನಿವಾರ ಬೆಳಗಿನ ಜಾವ ಪ್ರಾರ್ಥನೆಗಾಗಿ ಮಸೀದಿಗೆ ಬಂದ ನೂರಾರು ಮಂದಿ ವಾಖಾಣಿಸುವಾಗ, ಪ್ರತಿದಿನ ಓದಲಾಗುತ್ತಿದ್ದ ಕುರಾನ್ ಮತ್ತು ಹದೀಸ್ ಪುಸ್ತಕಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತು. ಪ್ರಾರ್ಥನೆಯ ಬಳಿಕ ಕಾರ್ಯಕರ್ತರು ಸುತ್ತಲಿನ ಜಮೀನುಗಳನ್ನು ಪರಿಶೀಲಿಸಿದಾಗ, ಮಸೀದಿ ಪಕ್ಕದ ಖಾಲಿ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಇದ್ದ ಪವಿತ್ರ ಗ್ರಂಥಗಳು ಪತ್ತೆಯಾಗಿವೆ.

ಘಟನೆಯ ವಿವರ ತಿಳಿದ ಕೂಡಲೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್‌ ಮಾರ್ಕ್‌ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!