ಬೆಂಗಳೂರು
ಕರ್ನಾಟಕದ ರಾಜಕೀಯ ಧುರೀಣರೆಲ್ಲರ ಗಮನ ಈಗ ಸಿದ್ದರಾಮಯ್ಯನರ ಮುಖ್ಯಮಂತ್ರಿ ಪದವಿ ಸುತ್ತ ತಿರುಗುತ್ತಿದೆ.
ಮಂತ್ರಿಮಂಡಲ ವಿಸ್ತರಣೆ, ಸ್ವಪಕ್ಷೀಯ ಶಾಸಕರ ಅಸಮಾಧಾನ ಮತ್ತು ಜಾತಿ ಆಧಾರಿತ ಲೆಕ್ಕಾಚಾರಗಳ ಮಧ್ಯೆ ಕಾಂಗ್ರೆಸ್ನ ಸ್ಥಿತಿಗತಿಗಳು ಭಾರೀ ತಿರುವ ಪಡೆಯುತ್ತಿವೆ.

ಇದು ಯಾಕೆ ಮಹತ್ವಪೂರ್ಣ ಅಂದರೆ, ಜಾತಿ ರಾಜಕಾರಣದ ನಂಟು, ನಾಯಕತ್ವದ ಬದಲಾವಣೆ, ಹಾಗೂ ಒಳರಾಜಕೀಯದ ಪರಿಪಕ್ಷಗಳನ್ನು ವಿಶ್ಲೇಷಿಸುವುದು ಅನಿವಾರ್ಯ.
ಜಾತಿ ರಾಜಕಾರಣ.
ಕಳೆದ ಮೂರು ದಶಕಗಳಿಂದ ಕನರ್ಾಟಕದ ಸಿದ್ದಾಂತ ರಾಜಕಾರಣ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸುತ್ತ ಸುತ್ತಿಕೊಂಡು ಬಂದಿದೆ.

ಈ ಎರಡು ಸಮುದಾಯಗಳು, ಪರಸ್ಪರ ವಿರೋಧಭಾವ ಇದ್ದರೂ, ತಮಗೆ ಹೊರಗಿನ ಸಮುದಾಯ ನಾಯಕರು ಮುನ್ನೆಲೆಗೆ ಬರುವಾಗ ಪರೋಕ್ಷವಾಗಿ ಒಂದಾಗುತ್ತಾರೆ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಗಮನಿಸಬೇಕಾದ ಸಂಗತಿ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಮೂಲಕ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರು) ಶಕ್ತಿಗೆ ವೇದಿಕೆ ಸಿದ್ಧವಾಯಿತು. ಇದರಿಂದ ಲಿಂಗಾಯತ-ಒಕ್ಕಲಿಗ ನಾಯಕರು ಸ್ವಲ್ಪ ಹಿಂದಕ್ಕೆ ಸರಿದು, ತಮ್ಮ ಶಕ್ತಿಯ ಪುನರ್ ಏರಿಕೆಗೆ ಹೊಸ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದರು.

ಖರ್ಗೆ – ಮೌನದ ರಾಜಕೀಯ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ನ ಶಕ್ತಿಶಾಲಿ ನಾಯಕರಾಗಿದ್ದರೂ ಸಿದ್ದರಾಮಯ್ಯ ಬದಲಾವಣೆಯ ವಿಷಯದಲ್ಲಿ `ಮೌನ‘ ವಹಿಸುವುದು ಕೇವಲ ತಾತ್ಕಾಲಿಕ ತಂತ್ರವಲ್ಲ ಎನ್ನುವುದು ಸ್ಪಷ್ಟ.
ಈ ಹಿಂದೆ ರಾಜ್ಯ ಮುಖ್ಯಮಂತ್ರಿಪದದ ಕನಸು ಕಂಡ ಖಗರ್ೆ, ಸಿದ್ದರಾಮಯ್ಯ ರಾಜಕೀಯ ಯಂತ್ರ ಚಾಲನೆಯಿಂದಲೇ ದೆಹಲಿಗೆ ತಿರುಗಿಬಿಟ್ಟಿದ್ದರು ಎಂಬುದು ಉಲ್ಲೇಖನೀಯ.

ಒಂದು ವೇಳೆ ಉಪಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಖಗರ್ೆತಯವರಿಗೆ ನೇರ ಲಾಭವಾಗದು.! ಆದರೆ ತಮ್ಮ ಪುತ್ರ ಪ್ರಿಯಾಂಕ್ ಖಗರ್ೆಗೆ ಡಿಸಿಎಂ ಹುದ್ದೆ ಸಾಧಿಸುವ ನಿಪುಣತೆ ಖಗರ್ೆಯ ಲೆಕ್ಕಾಚಾರವಾಗಿದೆ.
ಡಿಕೆಶಿ ಉಪಮುಖ್ಯಮಂತ್ರಿಯಾಗಿರುವುದು ಲಿಂಗಾಯತ-ಒಕ್ಕಲಿಗ ಸಮೀಕರಣದ ರಾಜಕೀಯ ಲೆಕ್ಕಾಚಾರಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ.
ಆದರೆ ಅವರು ಸಿಎಂ ಹುದ್ದೆಗೆ ಹೆಸರು ಬಂದ ತಕ್ಷಣ ಜಾತಿ ರಾಜಕಾರಣ ಮತ್ತೆ ಕ್ರಿಯಾಶೀಲವಾಗುವುದು ಖಚಿತ. ಲಿಂಗಾಯತ-ಒಕ್ಕಲಿಗ ಪರಂಪರಾತ್ಮಕ ಶಕ್ತಿಗಳು ತಮಗೆ ವಿರೋಧಿಯಾಗಿ ಹೋಗದಂತೆ ಡಿಕೆಶಿಗೆ ಮತ್ತೊಂದು ರಣ ತಂತ್ರ ಹೆಣೆಯಬೇಕಷ್ಟೆ
ಮಂತ್ರಿಮಂಡಲ ವಿಸ್ತರಣೆ- ಹಾವಿನ ಹುತ್ತಕ್ಕೆ ಕೈ ಹಾಕಿದಂತೆ
ಮಂತ್ರಿಮಂಡಲ ಪುನರಚನೆ ಅಥವಾ ವಿಸ್ತರಣೆ ವಿಚಾರ ಸಿದ್ದರಾಮಯ್ಯಗೆ ನಿದ್ದೆಗೆಡಿಸುವ ವಿಷಯವಾಗಿದೆ. ಪುನರಚನೆಗೆ ಹೋದರೆ ಹಾವಿನ ಹುತ್ತಕ್ಕೆ ಕೈ ಹಾಕಿದಂತೆೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಸಮಾಧಾನ ಸ್ಫೋಟ, ತಾತ್ಕಾಲಿಕ ಕುರ್ಚಿ ನುಗ್ಗಲುಗಳು ಖಚಿತ. ಪುನರಚನೆ ಇಲ್ಲದೇ ಹೋದರೆ ಶಾಸಕರ ಅಸಮಾಧಾನ ತೀವ್ರವಾಗಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿದೆ.

ಅದರಲ್ಲೂ ಮುಖ್ಯಮಂತ್ರಿಯನ್ನು ಕೆಳಗಿಳಿಸಿದರೆ ಸುಮಾರು 40 ಶಾಸಕರು ಪ್ರತ್ಯೇಕವಾಗಬಹುದು ಎಂಬ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿವೆ.
ಈಗಿರುವ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಬದಲಾವಣೆ ವಿಚಾರ ಅಥವಾ ಮಂತ್ರಿ ಮಂಡಲ ವಿಸ್ತರಣೆ ವಿಷಯ ಕನರ್ಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಹೈಕಮಾಂಡನ ತಪ್ಪು ಹೆಜ್ಜೆ ಸಕರ್ಾರವನ್ನು ಆಪತ್ತಿಗೆ ತಳ್ಳುವ ಸಂಭವವಿದೆ. ಜಾತಿ ರಾಜಕಾರಣದ ಸೂಕ್ಷ್ಮ ಲೆಕ್ಕಾಚಾರ, ನಾಯಕರ ವೈಯಕ್ತಿಕ ಲಾಭಾಸಕ್ತಿ ಮತ್ತು ಶಾಸಕರ ಅಸಮಾಧಾನ ಯಾವ ಹಂತಕ್ಕೆ ಹೋಗಿ ನಿಲ್ಲಬಹುದು ಎನ್ನುವುದನ್ನು ಕಾದು ನೋಡಬೇಕು.