ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಮರ ಕಡಿತ? ಕೇಳೊರು ಯಾರು?
ನಗರ ಮಧ್ಯದಲ್ಲಿ ಮರಗಳ ಮಾರಣಹೋಮಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಯಾಕಿಲ್ಲ ಕ್ರಮ?ಬೆಳಗಾವಿ: ಒಂದೆಡೆ ಪರಿಸರ ದಿನಾಚರಣೆಯ ಸಂಭ್ರಮದಲ್ಲಿ ಸಸಿ ನೆಡುವುದರಲ್ಲಿಜವಾಬ್ದಾರಿಯುತ ನಾಗರಿಕರು ಮುಂದಾಗಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆಯಸಿಬ್ಬಂದಿಯೊಬ್ಬರು ತಮ್ಮ ಇಲಾಖಾ ವಾಹನವನ್ನು ಮುಂದಿಟ್ಟುಕೊಂಡೇ ರಾಜಾರೋಷವಾಗಿಮರಗಳನ್ನು ಕಡಿದು ಹಾಕುತ್ತಿರುವ ದೃಶ್ಯವೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಿಂದತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು, ಬೆಳಗಾವಿಯ ಮಹಾಂತೇಶನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಸದ್ಯ ಈದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೋಡುಗರಿಂದಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಆ ವೀಡಿಯೋದಲ್ಲೇನಿದೆ ಎಂಬ ಕುತೂಹಲಮೂಡುವುದು ಸಹಜ ಹೇಳ್ತೀವಿ…