Headlines

14 ಆರೋಪಿಗಳ ಆಸ್ತಿ ಮುಟ್ಟುಗೋಲು:

ಗೋಕಾಕ ಮಹಾಲಕ್ಷ್ಮೀ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ14 ಆರೋಪಿಗಳ ಆಸ್ತಿ ಮುಟ್ಟುಗೋಲು: ಎಸ್ಪಿ ಗುಳೇದ್ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಮಹಾಲಕ್ಷ್ಮೀ ಕೋ ಆಪ್ ರೇಟಿವ್ ಬ್ಯಾಂಕ್ ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 14 ಜನ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನ್ ಈ ಅವ್ಯವಹಾರದದ 14 ಆರೋಪಿಗಳ ಪೈಕಿ ಐವರು ಬ್ಯಾಂಕ್ ಸಿಬ್ಬಂದಿಗಳೇ ಆಗಿದ್ದು,…

Read More

ಬೆಳಗಾವಿಯಲ್ಲಿ ಮೇಗಾ ಡೇರಿ ಸ್ಥಾಪನೆ- ಬಾಲಚಂದ್ರ ಜಾರಕಿಹೊಳಿ

ಬೆಳಗಾವಿಯಲ್ಲಿ ಮೇಗಾ ಡೇರಿ ಸ್ಥಾಪನೆ- ಬೆಮೂಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ:ಬೆಳಗಾವಿಯಲ್ಲಿ ಅತ್ಯುನ್ನತ ತಂತ್ರಜ್ಞಾನವುಳ್ಳ ಮೇಗಾ ಡೇರಿ ನಿರ್ಮಿಸುವ ಮೂಲಕ ಜಿಲ್ಲೆ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಕೆಪಿಟಿಸಿಎಲ್‌ ಸಭಾಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅ‍ವರು ಮಾತನಾಡಿದರು. ಬೆಳಗಾವಿ ಹಾಲು ಒಕ್ಕೂಟ ಸುಧಾರಣೆಗೆ ಸಂಕಲ್ಪ ಮಾಡಿದ್ದೇನೆ….

Read More

ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಭೆ: 3 ನಿರ್ಣಯ ಅಂಗೀಕಾರ

ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಭೆ:3 ನಿರ್ಣಯ ಅಂಗೀಕಾರ: ಬೆಳಗಾವಿ:ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಒತ್ತಾಯಿಸುವ ನಿಟ್ಟಿನಲ್ಲಿ ನಗರದಲ್ಲಿ ರವಿವಾರ ನಡೆದ ಲಿಂಗಾಯತ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಮಾವೇಶದಲ್ಲಿ ಮೂರು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್, ನ್ಯಾಯಪೀಠ ಕೂಡಲಸಂಗಮ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಈ ಸಮಾವೇಶದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ನಿರ್ಣಯ ಮಂಡಿಸಿದರು.ಹಿಂದುಳಿದ ವರ್ಗಗಳ ಆಯೋಗದಿಂದ ಪೂರ್ಣ…

Read More

ಪಂಚಮಸಾಲಿಗ 2 ಎ ಮೀಸಲಾತಿ ಕೊಡದಿದ್ದರೆ ಸೌಧದೊಳಗೆ ಸಿಎಂಗೆ ಪ್ರವೇಶ ನಿಷೇಧ

ಪಂಚಮಸಾಲಿಗ 2 ಎ ಮೀಸಲಾತಿ ಕೊಡದಿದ್ದರೆಸೌಧದೊಳಗೆ ಸಿಎಂಗೆ ಪ್ರವೇಶ ನಿಷೇಧಬೆಳಗಾವಿ.ಪಂಚಮಸಾಲಿಗೆ 2 ಎ ಮೀಸಲಾತಿ ಕೊಡದಿದ್ದರೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳನ್ನು ಸೌಧದೊಳಗೆ ಬಿಟ್ಟುಕೊಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿ ಪಂಚಮಸಾಲಿ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ಈ ಸಲದ ಹೋರಾಟ ಕೊನೆಯದಾಗಬೇಕು. ಬರುವ ಅಧಿವೇಶನದೊಳಗೆ ಮೀಸಲಾತಿ ಕೊಡದಿದ್ದರೆ ಉಗ್ರ ಸ್ವರೂಪಗ ಹೋರಾಟಕ್ಕೆ ಸಿದ್ಧರಾಗಬೇಕೆಂದು ಅವರು ಕರೆ ನೀಡಿದರು. ಈ ಸಲದ ಹೋರಾಟದಲ್ಲಿ ಯಾರೂ ಬರೀ ನಾಟಕ ಮಾಡುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರುಬರನ್ನು ಪರಿಶಿಷ್ಟ…

Read More

ದಾರಿ ತಪ್ಪಿದ ಪಾಲಿಕೆಯಲ್ಲಿ ಆನೆ ನಡೆದಿದ್ದೇ ದಾರಿ..!

ಅಧಿಕಾರಿಗಳ ಯಡವಟ್ಟು.ತಲೆಬಾಗಿದ ಮಹಾನಗರ ಪಾಲಿಕೆ. ಪಾಲಿಕೆ ಕೌನ್ಸಿಗಿಟ್ಟಿಲ್ಲ ಕಿಮ್ಮತ್ತು. ಆಡಳಿತ ಮತ್ತು ವಿರೋಧ ಪಕ್ಷದಲ್ಲಿಲ್ಲ ತಾಳಮೇಳ. ಆನೆ ನಡೆದಿದ್ದೇ ದಾರಿಯಂತಾಗುತ್ತಿದೆ ಪಾಲಿಕೆ ಆಡಳಿತ. ಆಡಳಿತಾತ್ಮಕ ಸಭೆ ಕರೆಯುವುದನ್ನೇ ಮರೆತವರು ಯಾರು? ಶಾಸಕರ ಮಾತು ಮೀರಿ ಹೊರಟ್ರಾ ನಗರಸೇವಕರು ಇ ಬೆಳಗಾವಿ ವಿಶೇಷಬೆಳಗಾವಿ.ಒಂದಾನೊಂದು ಕಾಲದಲ್ಲಿ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಎಂದರೆ ಇಡೀ ರಾಜ್ಯದ ಜನ ತಿರುಗಿ ನೋಡುತ್ತಿದ್ದರು, ಅಂದರೆ ಅದಕ್ಕೊಂದು ವರ್ಚಸ್ಸು ಇತ್ತು, ಘನತೆ ಗೌರವವೂ ಇತ್ತು,ವಿಜಯ ಮೋರೆ ಮೇಯರ್ ಆಗಿದ್ದ ಸಂದರ್ಭದಲ್ಲಿ ಪಾಲಿಕೆ ಸಭೆಯಲ್ಲಿ ಗಡಿ…

Read More

ಪ್ಯಾಲಿಸ್ಟೈನ್ ಧ್ವಜ ಮಾದರಿ ಪೆಂಡಾಲ್ ತೆರವು…!

ಪೊಲೀಸರ ಸಕಾಲಿಕ ಮಧ್ಯಪ್ರವೇಶ. ತಣ್ಣಗಾದ ವಿವಾದ ಬೆಳಗಾವಿ.ಬೆಳಗಾವಿಗೂ ಹಬ್ಬಿದ ಪ್ಯಾಲಿಸ್ಟೈನ್ ಧ್ವಜ ವಿವಾದವನ್ನು ಪೊಲೀಸರ ಸಕಾಲಿಕ‌ ಕ್ರಮದಿಂದ ತಣ್ಣಗಾದಂತೆ ಕಾಣುತ್ತಿದೆ. ನಾಳೆ ನಡೆಯುವ ಈದ್ ಮೆರವಣಿಗೆಯ ಹಿನ್ನೆಲೆಯಲ್ಲಿಬೆಳಗಾವಿಯಲ್ಲಿ ಪ್ಯಾಲಿಸ್ಟೈನ್ ಧ್ವಜದ ಮಾದರಿಯ ಪೆಂಡಾಲ್ ಅಳವಡಿಸಲಾಗಿತ್ತು.ಆದರೆ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಅದನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ.

Read More

ಭೂ ಮಾಲಿಕರಿಗೆ ಜಾಗೆ ಹಸ್ತಾಂತರ ಪ್ರಕ್ರಿಯೆ ಶುರು

ಈ ಬಿಜೆಪಿಯಲ್ಲಿ ಏನು ನಡೆದಿದೆ ಅನ್ನೊದು ಗೊತ್ತೆ? ಹಾಗಿದ್ದರೆ ಲಿಂಕ್ ಒತ್ತಿ https://nm-4.com/bjpmem/XFPHVH ——-ಭೂ ಮಾಲಿಕರಿಗೆ ಜಾಗೆ ಹಸ್ತಾಂತರ ಪ್ರಕ್ರಿಯೆ ಶುರು. ರಸ್ತೆ ನಿರ್ಮಿಸಿದ ಜಾಗೆಯಲ್ಲಿ ಸೇರಿದ ಅಧಿಕಾರಿಗಳು.ಪಾಲಿಕೆ ಆಯುಕ್ತರು , ಇನ್ನು‌ ಮತ್ತೇ ಸಂಚಾರ ದಟ್ಟಣೆ ಗ್ಯಾರಂಟಿ. ಈ ಅವ್ಯವಸ್ಥೆಗೆ ಯಾರು ಹೊಣೆ ಬೆಳಗಾವಿ.ಇದೇ ಸೋಮವಾರದೊಳಗೆ ಬೆಳಗಾವಿ ಮಹಾನಗರ ಪಾಲಿಕೆ ಭೂ ಮಾಲಿಕರಿಗೆ 20 ಕೋಟಿ ರೂ ಪರಿಹಾರ ಬದಲು ಜಾಗೆಯನ್ನು ಹಸ್ತಾಂತರ ಮಾಡಬೇಕಿದೆ, ಇಲ್ಲದಿದ್ದರೆ ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೇ ಅಪಾಯ ಕಟ್ಟಿಟ್ಟ ಬುತ್ತಿ..!ಆದರೆ…

Read More

ತುಷ್ಟಿಕರಣದ ನೀತಿಯೇ ಪ್ಯಾಲೆಸ್ಟೈನ್ ಧ್ವಜ ಹಾರಲು ಕಾರಣ

https://narendramodi.in/bjpsadasyata2024/XFPHVH ಬೆಳಗಾವಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದಾಗಿ ರಾಜ್ಯದಲ್ಲಿ ಕೋಮುಗಲಭೆಗಳು ಆಗುತ್ತಿವೆ ಎಂದು ಸಂಸದ ಜಗದೀಶ್ ಶೆಟ್ಟ‌ರ್ ವಾಗ್ದಾಳಿ ನಡೆಸಿದರು .ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಠಿಕರಣ ದಿಂದಲೇ ಪ್ಯಾಲೆಸ್ಟೇನ ಧ್ವಜ ಹಾಗೂ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಅಲ್ಪಸಂಖ್ಯಾತರ ತುಷ್ಟಿಕರಣದ ನೀತಿಯಿಂದಲೇ ಈ ರೀತಿಯ ಘಟನೆ ಆಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಣೇಶ ವಿಸರ್ಜನೆ ವೇಳೆ ದಾವಣಗೆರೆ ಹಾಗೂ ನಾಗಮಂಗಲದ ಗಲಭೆಗೆ ಪ್ರಚೋದನೆ…

Read More
error: Content is protected !!