ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ
ಬೆಳಗಾವಿ.
ಕೋರ್ಟನ ಆದೇಶ ಪ್ರತಿ ನೀಡಲು ಹೋಗಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ್ದ ಎಪಿಎಂಸಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ.ಬಿ ಸುಣಗಾರ ಅವರನ್ನು ಅಮಾನತ್ ಮಾಡಲಾಗಿದೆ.
ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜಿಲ್ಲಾ ವಕೀಲರ ಸಂಘದಿಂದ ಇಂದು ನಗರ ಪೊಲೀಸ್ ಕಮಿಷನರ್ ಯಡಾ ಮಾಟರ್ಿನ್ ಮಾರ್ಬನ್ಯಾಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪೊಲೀಸ್ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು.. ಮತ್ತು ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ವಕೀಲರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎಸ್. ಎಸ್. ಕಿವಡಸಣ್ಣನವರ ಮಾತನಾಡಿ, ನ್ಯಾಯವಾದಿ ಶ್ರೀಧರ್ ಕುಲಕಣರ್ಿ ಅವರು ಕೋರ್ಟ್ ಆದೇಶ ತೆಗೆದುಕೊಂಡು ಎಪಿಎಂಸಿ ಪೊಲೀಸ್ ಠಾಣೆಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪೊಲೀಸರು ಕೋರ್ಟ ಆದೇಶ ಪ್ರತಿ ಸ್ವೀಕರಿಸದೆ ಗಂಟೆಗಳ ಕಾಲ ವಕೀಲರನ್ನು ಕಾಯಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನ್ಯಾಯವಾದಿ ಶ್ರೀಧರ ಕುಲಕಣರ್ಿ ಜೊತೆ ವಾಗ್ವಾದ ನಡೆಸಿದ್ದಲ್ಲದೇ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.