ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ರಾಜಕೀಯ ಆಟ ಇದೀಗ ರಾಜ್ಯ ರಾಜಕೀಯ ವಲಯವನ್ನು ತಲುಪಿದೆ. ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಯ ವಿರುದ್ಧ ಹೈಕೋರ್ಟ್ ನೀಡಿದ ತಡೆಯಾಜ್ಞೆಯಿಂದ ಆಡಳಿತ ಯಂತ್ರದ ಕಾರ್ಯ ಪ್ರಶ್ನಾರ್ಥಕವಾಗಿದೆ.
ಆದರೆ ಈ ರಾಜಕೀಯ ಚತುರಂಗದಲ್ಲಿ ಯಶಸ್ವಿ ನಡೆಯಿಟ್ಟವರು ಯಾರು ಗೊತ್ತಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಕ್ತಿಶಾಲಿ ನಾಯಕ ಅಭಯ ಪಾಟೀಲ!
ಭವಿಷ್ಯ ನುಡಿದಿದ್ದ ಅಭಯ
ಇದು ಕಾನೂನು ಸಮರ. ತಡೆಯಾಜ್ಞೆ ನಮ್ಮದಾಗುತ್ತೆ. ಮಂಗಳವಾರ ಸತ್ಯ ಬೆಳಕಿಗೆ ಬೆಲಿದೆ ಎಬ್ನುವ.”ಪಾಟೀಲರ ಈ ಮಾತುಗಳು ಕೇವಲ ಆತ್ಮವಿಶ್ವಾಸದ ಪ್ರಕಟಣೆ ಅಲ್ಲ, ರಾಜಕೀಯ ಸಂಚಲನದ ಸುಳಿಯಲ್ಲೂ ಸ್ಪಷ್ಟ ದೃಷ್ಟಿಯ ಪ್ರತಿಬಿಂಬವಾಗಿವೆ. ಹೈಕೋರ್ಟ್ ತಡೆಯಾಜ್ಞೆ ಮೂಲಕ ಅವರು ತಮ್ಮ ರಾಜಕೀಯ ಶಕ್ತಿಯನ್ನ ಮತ್ತೊಮ್ಮೆ ರಾಜ್ಯದ ಮೇಲೆ ಪ್ರತಿಪಾದಿಸಿದ್ದಾರೆ.
“ಅಭಯ ಪಾಟೀಲ ಬೆಳಗಾವಿಯ ರಾಜಕೀಯದ ಶತ್ರುಗಳಿಗೆ ಶಕ್ತಿಯ ಸಂಕೇತ, ತಮ್ಮ ಶಾಂತ ಸಮರ ಯುದ್ಧತಂತ್ರದಿಂದ ಅವರು ಮತ್ತೆ ಶತಾಯುಧ ಸಾಧಿಸಿದರು.” ಇದೀಗ ಬೆಳಗಾವಿ ಪಾಲಿಕೆಯ ಈ ತಡೆಯಾಜ್ಞೆ ಬೆಳವಣಿಗೆಗಳು ರಾಜ್ಯ ರಾಜಕೀಯದ ಮುಂದಿನ ಸಾಗಿ ಹೋಗುವ ದಾರಿಗೆ ನಾಂದಿ ಹಾಡಿರುವಂತಾಗಿದೆ. ಪಾಟೀಲರ ರಾಜಕೀಯ ಕೌಶಲ್ಯಕ್ಕೆ ಇದೊಂದು ಮತ್ತಷ್ಟು ವಿಜಯದ ಮೆಟ್ಟಿಲು ಎನ್ನುವುದರಲ್ಲಿ ಯಾವ ಶಂಕೆಯೂ ಇಲ್ಲ.