ಕಣ್ಣು ಮುಚ್ಚಿದ ಕಾನೂನು — ಅಕ್ರಮ ರೆಸಾರ್ಟ್ , ಫಾರ್ಮಾಮಹೌಸ ಫಿಯಾಗೆ ಇಲ್ಲ ಕಡಿವಾಣ.
ಇವೆಲ್ಲ ತಾಸಿನ ಲೆಕ್ಕದಲ್ಲಿ ಬಾಡಿಗೆಗೆ..
ನಾಮಕಾವಾಸ್ತೆ ಗಸ್ತು ತಿರುಗುವ ಪೊಲೀಸ್ ವಾಹನಗಳು.
‘
ಬೆಳಗಾವಿ .
ಗಡಿನಾಡ ಬೆಳಗಾವಿಯಲ್ಲಿ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೊಲೀಸಿಂಗ್ ವ್ಯವಸ್ಥೆ ಎನ್ನುವುದು ಇದೆಯಾ? ಎನ್ನುವ ಅನುಮಾನ ಬಾರದೇ ಇರದು.
ಕುಂದಾನಗರಿ ಬೆಳಗಾವಿಯಲ್ಲಿ ಈ ದಿನ ಶಾಂತಿಯುತವಾಗಿ ಹೋಯಿತು ಎನ್ನುವುದು ಇಲ್ಲವೇ ಇಲ್ಲ. ಪ್ರತಿ ದಿನ ಒಂದೊಂದು ರೀತಿಯ ಅಪರಾಧಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದನ್ನೆಲ್ಲ ಗಮನಿಸಿದಾಗ ಬೆಳಗಾವಿಯಲ್ಲಿ ಪೊಲೀಸ್ ಆಡಳಿತ ವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವ ಮಾತುಗಳು ಸರ್ವೇಸಾಮಾನ್ಯವಾಗಿ ಕೇಳಿಬರುತ್ತವೆ.

ಬೆಳಗಾವಿ ವಾತಾವರಣವನ್ನು ಸರಿದಾರಿಗೆ ತರಬೇಕಾದರೆ ಪೊಲೀಸರು ಲಾಠಿಯನ್ನು ಬಿಗಿ ಹಿಡಿದುಕೊಂಡು ಕೆಲಸ ಮಾಡಬೇಕು. ಆದರೆ ಬೆಳಗಾವಿ ನಗರದಲ್ಲಿ ಆ ರೀತಿಯ ವಾತಾವರಣ ಇಲ್ಲವೇ ಇಲ್ಲ. ಬಹುತೇಕರು ಸಚಿವರ, ಶಾಸಕರ ಹೆಸರು ಹೇಳಿಕೊಂಡು ಕಾಲ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಈಗ ಅಪರಾಧಗಳ ತವರೂರು ಆಗಿ ಬಿಟ್ಟಿದೆ.

ಇದೆಲ್ಲದರ ನಡುವೆ ಕಾನೂನು ಉಲ್ಲಂಘನೆ, ಅನೈತಿಕ ಚಡುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಸಹ ಯಾವುದಕ್ಕೂ ಕಿವಿಗೊಡದೆ ಕಣ್ಣುಮುಚ್ಚಿಕೊಂಡು ಕುಳಿತಿರುವ ಪೊಲೀಸ್ ಇಲಾಖೆಯನ್ನು ಎಚ್ಚರಿಸಲು ಗೃಹ ಮಂತ್ರಿಗಳೇ ಬರಬೇಕಿದೆ.
ಅಕ್ರಮ ರೆಸಾರ್ಟ್, ಫಾರ್ಮಹೌಸ ಅನೈತಿಕ ದಂಧೆ : ಪೊಲೀಸ್ ಇಲಾಖೆ ಮೌನವೇಕೆ?
ಅಪ್ರಾಪ್ತೆಯೊಬ್ಬಳ
ಮೇಲೆ ಫಾರ್ಮಹೌಸನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರದ ಸುದ್ದಿ ಬೆಳಗಾವಿಯನ್ನು ತಲೆಕೆಳಗಾಗಿಸುವಂತೆ ಮಾಡಿದೆ.
ಇನ್ನು ಅದರಲ್ಲೂ, ಅಪರಾಧದಲ್ಲಿ ಪೊಲೀಸ್ ಅಧಿಕಾರಿ ಒಬ್ಬರ ಪುತ್ರನ ಹೆಸರು ಕೇಳಿಬಂದಿದ್ದು, ಇದು ಪೊಲೀಸ್ ಖಾತೆಯ ವಿಶ್ವಾಸಾರ್ಹತೆಗೆ ದಕ್ಕೆಯಾಗಿ ಪರಿಣಮಿಸಿದೆ.
ಆದರೆ, ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕಾದ ಸಂದರ್ಭದಲ್ಲೂ, ಪೊಲೀಸ್ ಇಲಾಖೆ ‘ತಪಾಸಣೆ ನಡೆಯುತ್ತಿದೆ’ ಎಂಬ ಹೇಳಿಕೆಯಲ್ಲಿ ಕಾಲಹರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
‘ ವಿನೋದ ಗೃಹ’ಗಳ ಹೆಸರಲ್ಲಿ ಮಾಫಿಯಾ ಆಟ: ಕಾನೂನು ಎಲ್ಲಿದೆ?

ನಗರದ ಹೊರವಲಯಗಳಲ್ಲಿರುವ ಹಿಂಡಲಗಾ, ಮಚ್ಛೆ, ಖಾನಾಪುರ ರಸ್ತೆ ಹಾಗೂ ಇತರ ಪ್ರದೇಶಗಳಲ್ಲಿ ಕೃಷಿ ಜಮೀನು ಎಂಬ ಹೆಸರಿನಲ್ಲಿ ರೆಸಾರ್ಟ್‌ಗಳು, ಫಾರ್ಮಹೌಸಗಳು ನಿರ್ಮಾಣವಾಗಿವೆ.’ ಇವೆಲ್ಲ ತಾಸಿನ ಮೇಲೆ ಬಾಡಿಗೆಗೆ ಎನ್ನುವುದನ್ನು ಕೇಳಿದರೆ ಅಲ್ಲಿ ಯಾವ ರೀತಿಯ ಕಳ್ಳಾಟಗಳು ನಡೆಯುತ್ತಿರಬಹುದು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತವೆ. ಇವುಗಳಲ್ಲಿ ಲೆಕ್ಕಪತ್ರ, ನೋಂದಣಿ ಅಥವಾ ಪಟ್ಟಿ ಇಲ್ಲದ ಕಾರ್ಯಾಚರಣೆ ನಡೆಯುತ್ತಿದ್ದು, ಪಾರದರ್ಶಕತೆ ಇಲ್ಲವೇ ಇಲ್ಲ.
– ಇದು ಅಪರಾಧದ ನಿದರ್ಶನ!
ಪೆಟ್ರೋಲಿಂಗ್ ಯಾಕೆ ಕಾಣುತ್ತಿಲ್ಲ ?
ಪೆಟ್ರೋಲಿಂಗ್ ಹೆಸರಿನಲ್ಲಿ ತಿರುಗುವ ವಾಹನಗಳಿಗೆ ಇಂಥ ಅಕ್ರಮ ತಾಣಗಳು ಹೇಗೆ ಕಾಣುವುದಿಲ್ಲ ಎನ್ನುವುದು ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ. ರಾತ್ರಿ ಸಮಯದಲ್ಲಿ ಇವುಗಳಲ್ಲಿ ನಡೆಯುವ ಗಾಂಜಾ ಸೇವನೆ, ಅಪ್ರಾಪ್ತರ ಮೇಲಿನ ದೌರ್ಜನ್ಯ, ಅಕ್ರಮ ಸಾರಾಯಿ ಸೇವನೆ ಪೊಲೀಸರ ಗಮನಕ್ಕೆ ಬಾರದೆಯೇ ಉಳಿಯುತ್ತಿವೆಯೆ?..ಊಹುಂ ಇಲ್ಲಿ ಪೊಲೀಸರು ಕಣ್ಣಿದ್ದು ಕುರುಡರಂತೆ ವರ್ತಿಸಿದ್ದಾರೆ ಎನ್ನುವುದು ಸ್ಪಷ್ಟ.
ಈಗ ಎಚ್ಚರವಾದ್ರು…!

ಸಾಂದರ್ಭಿಕ ಚಿತ್ರ
ಅತ್ಯಾಚಾರ ಪ್ರಕರಣದ ಬಳಿಕ ‘ಪರಿಶೀಲನೆ’ ಎಂಬ ನಾಟಕದ ಮೊದಲ ಅಧ್ಯಾಯಪೊಲೀಸ್ ಇಲಾಖೆಯಲ್ಲಿ ಆರಂಭವಾಗುತ್ತದೆ. ಆಯುಕ್ತರು ‘ತಕ್ಷಣದ ತನಿಖಾ ತಂಡ’ ಘೋಷಿಸುತ್ತಾರೆ. ಆದರೆ ಅದು ನಿಜವಾಗಿ ಎಷ್ಟು ದೂರ ಚಲಿಸುತ್ತದೆ? ವರದಿ ಹೊರಬರುತ್ತದೆಯೆ? ಇಲ್ಲವೇ ಅಂತ್ಯವೂ ಆಗದೆ ಮಾತುಕತೆಯೊಳಗೆ ಮುಕ್ತಾಯವಾಗುತ್ತದೆಯೇ?
ಈ ಅಕ್ರಮ ರೆಸಾರ್ಟ್‌ಗಳಿಗೆ ಅನುಮತಿ ಕೊಟ್ಟವರು ಯಾರು?
ಕೃಷಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣವಾಗುತತಹಶೀಲ್ದಾರ್ಸೇರಿದಂತೆ ಸಂಬಂಧಿಸಿದವರು ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ.
ಅಕ್ರಮ ರೆಸಾರ್ಟ್‌ಗಳ ಪಟ್ಟಿ ಸಿದ್ಧಪಡಿಸಿ ಮುಕ್ತ ತನಿಖೆ ನಡೆಸಬೇಕು.
ಬಂದವರು – ಹೋದವರು ಎಂದು ದಾಖಲೆ ಇಟ್ಟಿಲ್ಲದ ರೆಸಾರ್ಟ್‌ಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಬೇಕು.
ಅತ್ಯಾಚಾರದಂತಹ ಪ್ರಕರಣಗಳಿಗೆ ವಿಶೇಷ ತನಿಖಾ ಘಟಕ ರಚಿಸಿ ಸಾರ್ವಜನಿಕವಾಗಿ ವರದಿ ಬಹಿರಂಗ ಮಾಡಬೇಕು.
ಬೆಳಗಾವಿ ನಗರಕ್ಕೆ “ಅಕ್ರಮಗಳ ಕೇಂದ್ರ” ಎಂಬ ಅಪಖ್ಯಾತಿ ಬಂದರೂ ಅಚ್ಚರಿಪಡಬೇಕಿಲ್ಲ. ಈಗಲಾದರೂ ಕೂಡ ಪೊಲೀಸ್ ಇಲಾಖೆ ಮತ್ತು ಆಡಳಿತದ ಕಣ್ಣು ತೆರೆಯದಿದ್ದರೆ, ಈ ನಗರಕ್ಕೆ ಕತ್ತಲೆಯ ದಾರಿ ಮಾತ್ರ ಉಳಿಯುತ್ತದೆ.