ಮಳೆಗಾಲಕ್ಕೂ ಮುನ್ನ ಚರಂಡಿ, ನಾಲಾ ಶುದ್ಧೀಕರಣಕ್ಕೆ ನಿರ್ದೇಶನ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ನಿರ್ವಹಣಾ ಸಭೆ – ನಾಗರಿಕ ಸಮಸ್ಯೆಗಳ ನೆಲೆಯಲ್ಲಿ ತೀವ್ರ ಚರ್ಚೆ
ಬೆಳಗಾವಿ, ಮೇ 21:
ನಗರದಲ್ಲಿ ಮುಂಬರುವ ಮಳೆಗಾಲಕ್ಕೆ ಸಜ್ಜಾಗಲು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ವಿಶೇಷ ಮಳೆಗಾಲ ನಿರ್ವಹಣಾ ಸಭೆ ನಡೆಯಿತು. ಸಭೆಯಲ್ಲಿ ಮಹಾಪೌರ ಮಂಗೇಶ್ ಪವಾರ್ , ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ವಿಪಕ್ಷ ನಾಯಕ ಡೋಣಿ, ಆಯುಕ್ತೆ ಶುಭ ಬಿ ಉಪಸ್ಥಿತಿ ಯಲ್ಲಿ ಸಭೆ ನಡೆದು ಅಧಿಕಾರಿಗಳಿಗೆ ಚರಂಡಿಗಳು ಹಾಗೂ ನಾಲೆಗಳು) ಶುದ್ಧಗೊಳಿಸುವ ಕಾರ್ಯವನ್ನು ತ್ವರಿತಗೊಳಿಸಲು ಕಠಿಣ ಸೂಚನೆ ನೀಡಲಾಯಿತು.

ಸಭೆಯಲ್ಲಿ ಭಾಗವಹಿಸಿದ ಹಲವು ನಗರಸೇವಕರು ತಮ್ಮ ವಾರ್ಡ್‌ಗಳ ನೈಜ ಸಮಸ್ಯೆಗಳನ್ನು ಮಂಡಿಸಿದರು:
ಯಾವ ಯಾವ ನಗರಸೇವಕರು ಏನ್ ಹೇಳಿದ್ರು ನೋಡಿ.

ರೇಷ್ಮಾ ಭೈರಕದಾರ್ (ಛತ್ರಪತಿ ಶಿವಾಜಿ ನಗರ, ವೀರಭದ್ರನಗರ): ಕಳೆದ 2 ವರ್ಷಗಳಿಂದ ಚರಂಡಿ ಓವರ್ ಫ್ಲೋ ಸಮಸ್ಯೆ; ಪೈಪ್ ಅಳವಡಿಸಲು ಅನುದಾನ ಇದ್ದು ಸಹ ಉಪಯೋಗವಿಲ್ಲ.
ರಿಯಾಝ್ ಕಿಲ್ಲೇದಾರ: 150 ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿದೆ; ಶಾಶ್ವತ ಪರಿಹಾರ ಅವಶ್ಯಕ.
ವೀಣಾ ವಿಜಾಪೂರೆ: ಗಣೇಶನಗರ ಕಾಮಗಾರಿ ಟೆಂಡರ್ ಆದರೂ ಪ್ರಾರಂಭವಿಲ್ಲ.
ನಿತೀನ್ ಜಾಧವ್: ಮಿಲೇನಿಯಂ ಗಾರ್ಡನ್, ಆರ್.ಪಿ.ಡಿ ಕಾರ್ನರ್, ಹಿಂದವಾಡಿಯಲ್ಲಿ ಚರಂಡಿ ಸಮಸ್ಯೆ; ಹೊಸ ಮಷೀನ್ ಖರೀದಿ ಅಗತ್ಯ.
ಮುಸ್ತಾಕ್ ಮುಲ್ಲಾ: ಆಶ್ರಯ ಕಾಲನಿಯಲ್ಲಿ ಶೌಚಾಲಯಗಳ ಕೊರತೆ; ಬಯಲು ಶೌಚ ನಿತ್ಯದ ನೋವು.
ಗಿರೀಶ್ ಧೋಂಗಡಿ: ಅಧಿಕಾರಿಗಳ ಸ್ಪಂದನೆ ಇಲ್ಲ; ತಮ್ಮ ವಾರ್ಡಿನ ಸಮಸ್ಯೆಗಳಿಗೆ ತೀವ್ರ ಆಕ್ಷೇಪ.
ಶಾಹೀದ್ ಖಾನ್ ಪಠಾಣ್: ಕೊಲ್ಹಾಪುರ ವೃತ್ತದಲ್ಲಿ ಅನುಮತಿಯಿಲ್ಲದೆ ಆರಂಭವಾದ ಸಿಎನ್‌ಜಿ ಪಂಪ್ ಕುರಿತು ಪ್ರಶ್ನೆ.
ದಿನೇಶ್ ನಾಶಿಪುಡಿ: ಫುಟ್‌ಪಾತ್‌ಗಳಲ್ಲಿ ಬೃಹತ್ ಗುಂಡಿ, ರಸ್ತೆಗಳ ಅವಸ್ಥೆ ಬಗ್ಗೆ ಕಳವಳ; ಸ್ಮಾರ್ಟ್ ಸಿಟಿ ಕಂಪನಿಗೆ ಸ್ಪೆಷಲ್ ಮೀಟಿಂಗ್ ಬೇಡಿಕೆ.
ರಮೇಶ್ ಸೊಂಟಕ್ಕಿ: ಪ್ರತಿದಿನ ಸಭೆಗೂ ಮೀರಿ ವಾರ್ಡುಗಳಿಗೆ ಅಧಿಕಾರಿಗಳ ಭೇಟಿ ಅಗತ್ಯ.
ಮಹಾಪೌರರ ಸ್ಪಷ್ಟ ಸಂದೇಶ
ಸಭೆಯ ಉತ್ತರ ನೀಡಿದ ಮಹಾಪೌರ ಮಂಗೇಶ್ ಪವಾರ್, “ಪ್ರತಿ ವಾರ್ಡ್‌ನ ಸಮಸ್ಯೆಗೆ ಅಧಿಕಾರಿಗಳು ಸ್ಪಂದನೆ ನೀಡಲೇಬೇಕು. ಮಳೆಗಾಲಕ್ಕೂ ಮುನ್ನ ಚರಂಡಿಗಳು, ನಾಲೆಗಳಲ್ಲಿ ಹೂಳೆತ್ತಿ ಶುದ್ಧಗೊಳಿಸುವ ಕಾರ್ಯವನ್ನು ತಕ್ಷಣ ಪ್ರಾರಂಭಿಸಿ,” ಎಂದು ಕಠಿಣ ಸೂಚನೆ ನೀಡಿದರು.
ಸಮರ್ಪಕ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ
ನಗರದ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸೂಚಿಸಿದ ಮಹಾಪೌರರು, ಸಾರ್ವಜನಿಕ ಅಸಹನೆ ಹೆಚ್ಚಾದರೆ ಪ್ರಭಾವ ಸರ್ಕಾರಕ್ಕೂ ಹೋಗಲಿದೆ ಎಂದು ಎಚ್ಚರಿಸಿದರು.
ಸಮಗ್ರ ಮತ್ತು ತ್ವರಿತ ಕಾರ್ಯವೈಖರಿ ಆಗಸತಳದ ಮನವಿ
ಸಭೆಯ ಕೊನೆಗೆ, ಎಲ್ಲಾ ನಗರಸೇವಕರು ಒಂದೊಂದೇ ವಾರ್ಡಿನ ಸಮಸ್ಯೆಗಳನ್ನು ವಿಸ್ತೃತವಾಗಿ ಮಂಡಿಸಿ, ಅವಕ್ಕೆ ತ್ವರಿತ ಹಾಗೂ ಶಾಶ್ವತ ಪರಿಹಾರ ಒದಗಿಸುವಂತೆ ಪಾಲಿಕೆ ಆಡಳಿತವನ್ನು ಒತ್ತಾಯಿಸಿದರು.
(