ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ:

Oplus_16777216

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ: ತಳೇವಾಡಿಯಲ್ಲಿ ಸ್ವಯಂಪ್ರೇರಿತ ಸ್ಥಳಾಂತರ, ಶಿಕ್ಷಣ-ಆರೋಗ್ಯಕ್ಕೆ ಶಕ್ತಿಯುತ ಆದ್ಯತೆ

ಬೆಳಗಾವಿ: ‘‘ಅರಣ್ಯವಾಸಿಗಳ ಬದುಕಿಗೆ ಸಮಗ್ರ ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯ ಒದಗಿಸಬೇಕಾದ ಅಗತ್ಯವಿದೆ. ಈ ದೃಷ್ಟಿಯಿಂದ ಭೀಮಗಡ ಸಫಾರಿ ಯೋಜನೆ, ಸ್ವಯಂಪ್ರೇರಿತ ಸ್ಥಳಾಂತರ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ತಿಳಿಸಿದರು.

ಅವರು ಗುರುವಾರ ಬೆಳಗಾವಿ ಪತ್ರಕರ್ತರ ಸಂಘ ಆಯೋಜನೆ ಮಾಡಿದ ಮಾಧ್ಯಮ ಸಂವಾದದಲ್ಲಿ‌ ಮಾತನಾಡಿದರು., ‘

‘ತಳೇವಾಡಿಯ 27 ಕುಟುಂಬಗಳಿಗೆ ತಲಾ ₹15 ಲಕ್ಷ ಪರಿಹಾರ ಘೋಷಿಸಲಾಗಿದೆ. ಈಗಾಗಲೇ ಪ್ರತಿ ಕುಟುಂಬಕ್ಕೂ ಮೊದಲ ಹಂತವಾಗಿ ₹10 ಲಕ್ಷ ವಿತರಿಸಲಾಗಿದೆ. ಉಳಿದ ಹಣ ಕೂಡ ಶೀಘ್ರದಲ್ಲಿ ನೀಡಲಾಗುವುದು. ಯಾರದೂ ಒತ್ತಡವಿಲ್ಲದೇ, ತಮ್ಮ ಸ್ವಂತ ಇಚ್ಛೆಯಿಂದ ಜನರು ಕಾಡಿನಿಂದ ಹೊರಬರುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದು ಕೇವಲ ಅರಣ್ಯ ಉಳಿಸುವ ಉದ್ದೇಶವಲ್ಲ – ಈ ಸ್ಥಳಾಂತರ ಅವರ ಶ್ರೇಯಸ್ಸಿಗಾಗಿ, ಉತ್ತಮ ಜೀವನದ ಹಾದಿಗಾಗಿ’’ ಎಂದರು.

ಸ್ಥಳಾಂತರಿತ ಕುಟುಂಬಗಳಿಗೆ ಯೋಜನಾ ಮಾನ್ಯತೆ!
‘‘ಮಹಾರಾಷ್ಟ್ರ, ಆಂಧ್ರಪ್ರದೇಶ ಮಾದರಿಯಲ್ಲಿ, ಸ್ಥಳಾಂತರಗೊಂಡ ಅರಣ್ಯವಾಸಿಗಳಿಗೆ ‘ಯೋಜನಾ ನಿರಾಶ್ರಿತ ಪ್ರಮಾಣಪತ್ರ’ ನೀಡಲಾಗುವುದು. ಇದರೊಂದಿಗೆ ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಯ ಅವಕಾಶ ಸಿಗಲಿದೆ ಎಂದು ಡಿಸಿ ಹೇಳಿದರು.

ತಳೇವಾಡಿಯ ಜನತೆಯೂ ಇದನ್ನು ಕೇಳಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ’’ ಎಂದು ಅವರು ತಿಳಿಸಿದರು.

ಶಿಕ್ಷಣ ಹಾಗೂ ಆರೋಗ್ಯ ಕೇಂದ್ರಗಳು ಕಾಡಿನಲ್ಲಿ ಸಾಧ್ಯವಿಲ್ಲ!
‘‘ದಟ್ಟ ಕಾಡಿನಲ್ಲಿ ಶಾಲೆಗಳು, ಆಸ್ಪತ್ರೆಗಳ ಸ್ಥಾಪನೆ ಸವಾಲಿನ ವಿಚಾರ. ಆದ್ದರಿಂದ, ಉಚಿತವಾಗಿ ಸ್ಥಳಾಂತರಗೊಂಡು ಉತ್ತಮ ಸೇವೆಗಳನ್ನು ಪಡೆಯುವುದು, ಜೀವನಮಟ್ಟವನ್ನು ಸುಧಾರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗುತ್ತದೆ. ನಾವು ಈ ಯೋಜನೆಗಳನ್ನು ಜನರ ಹಿತದೃಷ್ಟಿಯಿಂದ ರಚಿಸುತ್ತಿದ್ದೇವೆ’’ ಎಂಬುದಾಗಿ ಮೊಹಮ್ಮದ್‌ ರೋಷನ್‌ ಪುನರುಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!