ಬೆಳಗಾವಿಯಲ್ಲಿ ಓಲಾ, ಊಬರ್ ಇಲ್ಲ..! ಆದ್ರೆ ಆಟೋಗೆ ಮೀಟರ್ ಪಕ್ಕಾ


ಬೆಳಗಾವಿಯಲ್ಲಿ ಓಲಾ, ಊಬರ್‌ಗೆ ‘ನೋ ಎಂಟ್ರಿ’ – ಆಟೋಗಳಿಗೆ ಮೀಟರ್ ಕಡ್ಡಾಯವೇ!

ಬೆಳಗಾವಿ: ‘‘ಬೆಳಗಾವಿಯಲ್ಲಿ ಓಲಾ, ಊಬರ್‌ ಸೇವೆಗಳಿಗೆ ಈವರೆಗೆ ಯಾವುದೇ ಅನುಮತಿ ನೀಡಿಲ್ಲ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಆಟೋ ಸಂಚಾರ ವ್ಯವಸ್ಥೆಗೆ ಶಿಸ್ತು ತರಲು ಮೀಟರ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಗುರುವಾರ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ‘‘ಆಟೋಗಳಿಗೆ ಮೀಟರ್‌ ಕಡ್ಡಾಯ ಮಾಡುವ ಕುರಿತು ನಾನು ಒಂದು ಸಭೆ ನಡೆಸಿದ್ದೇನೆ. ಅಲ್ಲದೆ, ಆರ್‌ಟಿಒ ಇಲಾಖೆಯವರು ಮೂಡು ಸಭೆಗಳನ್ನು ನಡೆಸಿದ್ದಾರೆ. ಆಟೋ ಚಾಲಕರ ಸಂಘದವರ ಜೊತೆಗಿನ ಮಾತುಕತೆಯೂ ನಡೆದು ಅವರು ಮೀಟರ್ ಹಾಕಲು ಸಮ್ಮತಿಸಿದ್ದಾರೆ’’ ಎಂದು ವಿವರಿಸಿದರು.

ಚಾಲಕರ ಬೇಡಿಕೆಗಳ ಪರಿಶೀಲನೆ
‘‘ಆಟೋಚಾಲಕರು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈಗ ನಾವು ಅವುಗಳ ಪರಿಶೀಲನೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುತ್ತದೆ. ಜನಸಾಮಾನ್ಯರಿಗೆ ನ್ಯಾಯವಾದ ದರದಲ್ಲಿ ಪ್ರಯಾಣದ ಅನುಭವ ಒದಗಿಸುವುದು ನಮ್ಮ ಉದ್ದೇಶ’’ ಎಂದೂ ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!