ಪಟ್ಟಣ ಕ್ಷಮೆಗೆ ರೆಡ್ಡಿ ಸಮಾಜ ಪಟ್ಟು

ಅಶೋಕ ಪಟ್ಟಣ ಕ್ಷಮೆ ಕೇಳಲೇಬೇಕು ಎಂದು ರೆಡ್ಡಿ ಸಮಾಜ ತೀವ್ರ ಎಚ್ಚರಿಕೆ

*ಬರಮನಿ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಉದ್ದೇಶ ಆರೋಪ ಸುಳ್ಳು; ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ*

ಬೆಳಗಾವಿ,

ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆಗೆ ಸಂಬಂಧಿಸಿದಂತೆ ರಾಮದುರ್ಗದ ಶಾಸಕ ಅಶೋಕ ಪಟ್ಟಣ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಬೆಳಗಾವಿಯಲ್ಲಿ ರೆಡ್ಡಿ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಮುಖಂಡ ನಿವೃತ್ತ ಎಸ್ಪಿ ಬಸವರಾಜ್ ಬಾವಲತ್ತಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಟ್ಟಣ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಕ್ಷಮೆ ಕೇಳದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದರು.

*ರಾಜೀನಾಮೆಗೆ ರಾಜಕೀಯ ಏನಿಲ್ಲ: ಮುಖಂಡರ ಸ್ಪಷ್ಟನೆ*

ಅಶೋಕ ಪಟ್ಟಣ ಅವರು, ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜಕೀಯ ಉದ್ದೇಶದಿಂದ ರಾಜೀನಾಮೆ ಕೊಟ್ಟಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಇದು ಹಸೀ ಸುಳ್ಳು ಹಾಗೂ ನಿಂದಾಜನಕ ಎಂದು ಬಸವರಾಜ್ ಬಾವಲತ್ತಿ ಹೇಳಿದರು..
“ಬರಮನಿ ವೈಯಕ್ತಿಕ ನೋವು, ನೈತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರು. ಇದರಲ್ಲಿ ರಾಜಕೀಯ ಉದ್ದೇಶ ಏನೂ ಇಲ್ಲ. ಪ್ರತಿಪಕ್ಷದವರು ಬರಮನಿ ರಾಜಕೀಯಕ್ಕೆ ಬರ್ತಾರೆ ಅಂತ ಊಹೆಗಳ ಆಧಾರದಲ್ಲಿ ಮಾತನಾಡಿರುವುದು ಅಶೋಕ ಪಟ್ಟಣ ಅವರ ಬುದ್ದಿಮಟ್ಟವನ್ನು ತೋರಿಸುತ್ತದೆ” ಎಂದರು.

*ಕ್ಷಮೆ ಕೇಳದೇ ಹೋದರೆ ರಾಜ್ಯಮಟ್ಟದಲ್ಲಿ ಹೋರಾಟ*

“ಅಶೋಕ ಪಟ್ಟಣ ಅವರ ಶ್ರೀಮತಿ ಕೂಡ ನಮ್ಮ ಸಮಾಜದ ಭಾಗ. ಅಂಥ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದು ಅಚ್ಚರಿ ತಂದಿದೆ. ಕೂಡಲೆ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಾಂತ ಉಗ್ರ ಹೋರಾಟ ಪ್ರಾರಂಭಿಸುತ್ತೇವೆ” ಎಂದು ಸಮಾಜ ಮುಖಂಡರು ಎಚ್ಚರಿಸಿದರು.

ಪರಮೇಶ್ವರ್ ಮುಳ್ಳೂರ್, ಬಿ ಎನ್ ನಾಡಗೌಡ, ಶ್ರೀನಿವಾಸ್ ಬಿಸನಕೊಪ್ಪ . ಬಸವನಗೌಡ ಕಾಮನಗೌಡರ್. ನಾರಾಯಣ ಕೆಂಚಿರೆಡ್ಡಿ. ರಾಮಣ್ಣ ಅರಕೆರಿ, ಎಸ್ ಎ ಅರಕೆರಿ ಮಂಜುನಾಥ್ ಎಚ್ ಪಾಟೀಲ್ ಕಿರಣ್ ನಾಯ್ಕ್ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!