ಕಿತ್ತೂರು – ಧಾರವಾಡ ರೈಲು ಮಾರ್ಗ
ಭೂ ಸಮೀಕ್ಷೆಗೆ ಸಂಸದೆ ಮನವಿ
ಬೆಳಗಾವಿ
ಕಿತ್ತೂರ-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿಮರ್ಾಣಕ್ಕೆ ಅವಶ್ಯವೆನಿಸಿರುವ ಕಿತ್ತೂರ-ಬೆಳಗಾವಿ ನಡುವಿನ ಮಾರ್ಗದಲ್ಲಿ ಭೂಸ್ವಾಧೀನ ಸಮೀಕ್ಷೆ ಕಾರ್ಯವನ್ನು ಕೂಡಲೆ ರೇಲ್ವೆ ಇಲಾಖೆ ಅಧಿಕಾರಿಗಳು ಪ್ರಾರಂಭಿಸುವಂತೆ ಬೆಳಗಾವಿ ಸಂಸದೆ ಶ್ರೀಮತಿ ಮಂಗಲ ಸುರೇಶ ಅಂಗಡಿ ಹುಬ್ಬಳ್ಳಿಯ ನೈರುತ್ಯ ವಲಯ ರೇಲ್ವೆ ಮಹಾ-ಪ್ರಬಂಧಕ ಸಂಜೀವ ಕಿಶೋರಿ ಅವರಿಗೆ ಮನವಿ ಮಾಡಿಕೊಂಡರು,
ಬೆಳಗಾವಿ-ಕಿತ್ತೂರ-ಧಾರವಾಡ ನಡುವಿನ ಸುಮಾರು 73 ಕಿ ಮೀ ಉದ್ದಕ್ಕೆರೈಲು ಮಾರ್ಗ ನಿರ್ಮಾಣ ಕ್ಕೆ ಕೇಂದ್ರ ಸರಕಾರವು ಸೆಪ್ಟೆಂಬರ್-2019 ರಲ್ಲಿ ಅನುಮೋದನೆ ನೀಡಿ 924 ಕೋಟಿ ಅನುಧಾನ ಸಹ ಮಂಜುರ ಮಾಡಿದೆ .

ಆದರೆ ನಾಲ್ಕು ವರ್ಷ ಕಳೆದರು ನಿಗಧಿತ ಮಟ್ಟಕ್ಕೆ ಕಾಮಗಾರಯಲ್ಲಿ ಪ್ರಗತಿಯಾಗುತ್ತಿಲ್ಲ .ಕಿತ್ತೂರ-ಬೆಳಗಾವಿ ನಡುವೆ ಆಯ್ದ ಮಾರ್ಗದಲ್ಲಿ ರೆಲ್ವೆ ಅದಿಕಾರಿಗಳು ಸಧ್ಯ ಭೂ-ಸ್ವಾಧೀನಕ್ಕೆ ಭೂಮಿಯನ್ನು ಸಮೀಕ್ಷೆ ನಡೆಸಿ ಗುರುತಿಸಬೇಕಿದೆ. ಈ ಕಾರ್ಯವನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಿ ಮುಕ್ತಾಯಗೊಳಿಸಿದ್ದಲ್ಲಿ ಮಾತ್ರ ಭೂಸ್ವಾಧೀನಕಾರ್ಯ ಕೈಕೊಳ್ಳ ಬಹುದಾಗಿದೆ. ಎಂದು ನೈರುತ್ಯ ನಲಯದ ಮಹಾ-ಪ್ರಬಂಧಕರಲ್ಲಿ ಸಂಸದರು ಶ್ರೀಮತಿ ಮಂಗಲ್ ಅಂಗಡಿಯವರು ಹೇಳಿದರು.

ಅದರಂತೆ ಬೆಳಗಾವಿ ನಗರ ತಿಳಕವಾಡಿ ಲೆವೆಲ್ ಕ್ರಾಸಿಂಗ್ ನಂ: 381 ಹತ್ತಿರ ನಿರ್ಮಸಲಾಗುತ್ತಿರುವ ರಸ್ತೆ ಮೇಲಸೇತುವೆ ಕಾಮಗಾರಿ ಸಧ್ಯ ಸ್ಥಗಿತಗೊಂಡಿದ್ದು, ಇದರಿಂದಾಗಿ ಸುಗುಮ ವಾಹನ ಸಂಛಾರಕ್ಕೆ ಅಡಚಣಿ ಉಟಾಂಗಿ ಸಾರ್ವಜನಿಕರಿ ಪರದಾಡುವಂತಾಗಿದೆ.
ಈ ಬಗ್ಗೆ ಸ್ಥಗಿತಗೊಂಡ ಕಾಮಗಾರಿಯನ್ನು ಬೇಗನೆ ಪುನಾರಂಭಿಸುವಂತೆ ಸಂಸದರು ಕೋರಿದರು.
, ಪಂಡರಪೂರಕ್ಕೆ ಶ್ರೀ ವಿಠೋಬನ ದೇವಸ್ಥಾನಕ್ಕೆ ಸಾವಿರಾರು ಜನ ಭಕ್ತಾಧಿಗಳು ಹೋಗಿ ಬರಲು ಅನಕೂಲವಾಗಲು, ಬೆಳಗಾವಿಯಿಂದ ಪಂಡರಪೂರಕ್ಕೆ ನೇರ ರೈಲು ಸಂಪರ್ಕ ಒದಗಿಸುವಂತೆ ಸಹ ಸಂಸದರು ಕೋರಿದ ಪ್ರಯುಕ್ತ ಶೀಘ್ರದಲ್ಲಿ ಈ ಭೇಡಿಕೆಗೆ ಸಕಾರಾತ್ನಕವಗಿ ಸ್ಪಂದಿಸುವುದಾಗಿ ರೇಲ್ವೆ ಮಹಾ-ಪ್ರಬಂಧಕರು ತಿಳಿಸಿದರು.

ಇದೆ ಸಮಯದಲ್ಲಿ, ಬೆಳಗಾವಿ ಪೂಣೆ-ಬೆಳಗಾವಿ ಮತ್ತು ಬೆಳಗಾವಿ -ಚನೈ ನಡುವೆ ರೈಲು ಸಂಪರ್ಕ ಒದಗಿಸಲು ಸಹ ಕೋರಿದ್ದು, ಈ ಬಗ್ಗೆ ವಿಷಯ ಸಹ ಅಗತ್ಯ ಪರಿಗಣನೆಗೆ ತೆಗೆದು ಕೊಳ್ಳಲಾಗುವುದೆಂದು ಎಂದು ಸಂಸದರು ಶ್ರೀಮತಿ ಮಂಗಲ ಅಂಗಡಿಯವರಿಗೆ ರೇಲ್ವೆ ಮಹಾ-ಪ್ರಬಂಧಕರು ಅಶ್ವಾಸನೆ ನೀಡಿದರು
ಈ ಚರ್ಚೆಯಲ್ಲಿ ನೈರುತ್ಯ ವಲಯದ ಮುಖ್ಯ ಇಂಜನಿಯರರು, ಹಾಗೂ ವಿವಿಧ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು