ಪೌರ ಕಾರ್ಮಿಕರು ಸಂಬಳಕ್ಕಾಗಿ ಪರದಾಟ

ಬೆಳಗಾವಿ.

ಸಹಜವಾಗಿ ಹಬ್ಬ‌ ಹರಿದಿನಗಳು ಬಂದರೆ ದುಡಿಯುವ ಕೈಗಳಿಗೆ ಸಂಬಳ‌ಬೇಕೇ ಬೇಕು. ಆದರೆ ಅಂತಹ ಕೈಗಳು ಈಗ ಸಂಬಳಕ್ಕಾಗಿ ಪರದಾಟ ನಡೆಸಿವೆ.

ಯಾರೋ ಮಾಡಿದ ತಪ್ಪಿಗಾಗಿ ಹಬ್ಬದ ಸಂದರ್ಭದಲ್ಲಿ ಸಂಬಳವಿಲ್ಲದೇ ತೊಂದರೆಯಲ್ಲಿ ಸಿಲುಕಿವೆ‌.‌ಇದು ಒಂದು ಕುಟುಂಬದ ಕಣ್ಣೀರ ಕಥೆಯಲ್ಲ. ಬರೊಬ್ವರಿ‌ 138 ಕುಟುಂಬಗಳು ಈಗ ಸಂಬಳವಿಲ್ಕದೇ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿಗೆ ಬಂದು ನಿಂತಿವೆ

.

ಅಚ್ಚರಿ ಮತ್ತು ಆಘಾತಕಾರಿ ಸಂಗತಿ ಎಂದರೆ , ಈ ಬಡಪಾಯಿ ಪೌರಕಾರ್ಮಿಕರ ಬಗ್ಗೆ ಕಾಳಜಿವಹಿಸಬೇಕಾದವರು ಮಾತ್ರ ಈಗ ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತಿದ್ದಾರೆ

.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 138 ಜನ ಪೌರ ಕಾರ್ಮಿಕರನ್ನು ನಿಯಮ ಉಲ್ಲಂಘಿಸಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಅವರಿಗೆ ಒಂದು ನೇಮಕಾತಿ ಆದೇಶ ಪತ್ರ ಕೂಡ ಕೊಡಿಸುವ ಕೆಲಸವನ್ಬು ಸಂಬಂಧಿಸಿದವರು ಮಾಡದೇ ಇರುವುದು ಈ ಸ್ಥಿತಿಗೆ ಕಾರಣ.

ಪಾಲಿಕೆಗೆ 138 ಭಯ.‌!

https://ebelagavi.com/index.php/2023/09/15/vk/

ಏನಾಗಿದೆ ಅಂದರೆ, ಇಲ್ಲಿ ಪಾಲಿಕೆಯಲ್ಲಿ ನೇಮಕಕ್ಕೆ ಸಮ್ಮತಿ ಸಿಗುವ ಮುನ್ನವೇ 138 ಜನರನ್ನು ಹೇಗೆ ಮತ್ತು ಯಾವ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊ ಳ್ಳಲಾಯಿತು ಎನ್ನುವ ಬಹುದೊಡ್ಡ ಪ್ರಶ್ನೆ ಉದ್ಭವವಾಗಿದೆ.

ಅಂದರೆ ಇಲ್ಲಿ ಕೂಸು ಹುಟ್ಟುವ ಮುನ್ನವೇ ನಾಮಕರಣ ಮಾಡಿದಂತಾಗಿದೆ. ಮೇಲಾಗಿ ಈ ಪಿಕೆಗಳ ನೇಮಕ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗಿದ್ದರಿಂದ ಆಯುಕ್ತರು ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದ್ದಾರೆ .

ಈ ಪೌರಕಾರ್ಮಿಕರು ಕೆಲಸ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ದಾಖಲೆಯಲ್ಲಿ ಎಲ್ಲಿಯೂ ನೇಮಕಾತಿ ಬಗ್ಗೆ ದಾಖಲೆಗಳಿಲ್ಲ. ಹೀಗಾಗಿ ಮಾನವೀಯತೆ ಹಿನ್ನೆಲೆಯಲ್ಲಿ ಸಂಬಳ ಕೊಟ್ಟರೂ ಕೂಡ ಪಾಲಿಕೆ ಆಯುಕ್ತರಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಬೆಳಗಾವಿಗೂ ಕೇಬಲ್ ಕಾರ್..

https://ebelagavi.com/index.php/2023/09/18/b-2/

ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಿಕೊಡದ ಆಯುಕ್ತರು, 138 ಪೌರಕಾರ್ಮಿಕರ ಸಂಬಳ ಮತ್ತು ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರವನ್ನು ರವಾನಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ನಗರಸೇವಕರು ಏನೇ ಹೇಳಿದರೂ ಕೂಡ ಅದನ್ನು ಕಾನೂನು ಚೌಕಟ್ಟಿನಲ್ಲಿ ತಂದು ನೇಮಕ ಮಾಡಬೇಕಾದ ಪಾಲಿಕೆ ಆರೋಗ್ಯ ಶಾಖೆಯ ಅಧಿಕಾರಿಗಳ ಕಾರ್ಯ ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಈಗ ತಪ್ಪಿನಲ್ಲಿ ಸಿಕ್ಕಾಕಿಕೊಂಡ ಸಂಬಂಧಿಸಿದವರು ಇದರಿಂದ ಹೊರಬಂದರೆ ಸಾಕು ಎನ್ನುವ ಸ್ಥಿತಿಗೆ ಬಂದು ತಲುಪಿದ್ದಾರೆ. ಆದರೆ ಅವರು ಈಗ ಆಯುಕ್ತರ ಬಿಗಿಹಿಡುತದಿಂದ ತಪ್ಪಿಸಿಕೊಖ್ಳುವುದು ಕಷ್ಟ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!