ಬೆಂಗಳೂರು.
ತಮಿಳುನಾಡಿಗೆ ಕಾವೇರಿ ನೀರುಹರಿಸುವುದನ್ನು ಬಿರೋಧಿಸಿ ಇದೇ ಮಂಗಳವಾರ ದಿ.26 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.
ಸರ್ವ ಸಂಘಟನೆಗಳ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.ಅಷ್ಟೇ ಅಲ್ಲ ಈ ಬಂದ್ ಗೆ ಎಲ್ಲರೂ ಬಬಲ ಸೂಚಿಸಿದ್ದಾರೆಂದು ರೈತ ಹೋರಾಟಗಾರ ಕಡಬೂರು ಶಾಂತಕುಮಾರ್ ಹೇಳಿದ್ದಾರೆ.


ಸುಮಾರು ೧೫೦ ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಈ ಬಂದ್ ರಾಜಕೀಯ ಪ್ರೇರಿತ ಅಲ್ಲ. ಸ್ವಯಂ ಪ್ರೇರಿತ ಜನರ ಚಳವಳಿಯಾಗಿದೆ.

ರಾಜ್ಯ ಸರ್ಕಾರ ಒಂದು ಹನಿ ನೀರನ್ನೂ ಸಹ ತಮಿಳುನಾಡಿಗೆ ಬಿಡಬಾರದು ಎಂದು ಅವರು ಹೇಳಿದ್ದಾರೆ.
