ಹೆಬ್ಬಾಳಕರಗೆ ಧಾರವಾಡ ಓಕೆ.
ಬೆಳಗಾವಿಗೆ ಶಿವರಾಜ ತಂಗಡಗಿ ಯಾಕೆ?
ಬೆಳಗಾವಿ.
ಲೋಕಸಭೆ ಚುನಾವಣೆಗೆ ಅಖಾಡಾ ಸಿದ್ಧಗೊಳಿಸಲು ಕಾಂಗ್ರೆಸ್ ಎಲ್ಲ ರೀತಿಯ ತಂತ್ರಗಾರಿಕೆ ನಡೆಸಿದೆ.
ಇದೆಲ್ಲದರ ಮಧ್ಯೆ ಕಾಂಗ್ರೆಸ್ ನವರು ಪ್ರಕಟಿಸಿದ ಉಸ್ತುವಾರಿಗಳ ನೇಮಕ ಪಕ್ಷದಲ್ಲಿ ಅಸಮಾಧಾನವ ಭುಗಿಲೇಳುವಂತೆ ಮಾಡಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚುವರನ್ನು ವಿಜಯಪುರಕ್ಕೆ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಈಗ ಲೋಕಸಭೆ ಅಖಾಡಾ ಗೆಲ್ಲಲು ರಣ ತಂತ್ರ ರೂಪಿಸತೊಡಗಿದೆ,

ಈ ಹಿನ್ನೆಲೆಯ;ಲ್ಲಿ ಆಯಾ ಜಿಲ್ಲೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದೆ. ಆದರೆ ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತೆ ಉಸ್ತುವಾರಿಗಳ ನೇಮಕದ ಬೆನ್ನ ಹಿಂದೆಯೇ ಅಸಮಾಧಾನದ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರತೊಡಗಿವೆ.

ಬೆಳಗಾವಿ ಜಿಲ್ಲೆಯ ಎರಡು ಲೋಕಸಭೆ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ, ಅಷ್ಟೇ ಅಲ್ಲ ಅಲ್ಲಲ್ಲಿ ಸಭೆಗಳನ್ನು ನಡೆಸಿ ಪಕ್ಷ ಸಂಘಟನೆಗೆ ಚಾಲನೆ ನೀಡಿದ್ದಾರೆ.

ಇದೆಲ್ಲದರ ನಡುವೆ ಈಗ ಕಾಂಗ್ರೆಸ್ ಬೆಳಗಾವಿಗೆ ಉಸ್ತುವಾರಿಯಾಗಿ ಶಿವರಾಜ ತಂಗಡಗಿ ಅವರನ್ನು ನೇಮಿಸಿದ್ದು ಅವರ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಒಂದು ರೀತಿಯ ಅಸಮಾಧಾನಕ್ಕೆ ಕಾರಣವಾಗಿದೆ,

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಹೆಸರು ಹಿಡಿದು ಕರೆದು ಮಾತನಾಡುವ ಸತೀಶ ಜಾರಕಿಹೊಳಿಗೆ ಉಸ್ತುವಾರಿ ಕೊಡಬೇಕಿತ್ತು,. ಅದನ್ನು ಬಿಟ್ಟು ಹೊರಗಿವರಿಗೆ ಉಸ್ತುವಾರಿ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿ ಕೇಳಿ ಬರುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆಗೆ ತಂಗಡಗಿ ಅವರಿಗೆ ಕಷ್ಟ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿವೆ.
ಇನ್ನು ಬೆಳಗಾವಿ ಜಿಲ್ಲೆಯ ಮತ್ತೊಬ್ಬ ಸಚಿವೆಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಅಭ್ಯರ್ಥಿ ಯಾರು?

ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಗಳು ಯಾರಾಗಬಹುದು ಎನ್ನುವ ಬಹುದೊಡ್ಡ ಕುತೂಹಲ ಮೂಡಿದೆ.

ಚಿಕ್ಕೋಡಿ ಕ್ಷೇತ್ರಕ್ಕೆ ಅಥಣಿಯ ಹಾಲಿ ಶಾಸಕ ಲಕ್ಷ್ಮಣ ಸವದಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ, ಇದರ ಜೊತೆಗೆ ಲಕ್ಷ್ಮಣರಾವ್ ಚಿಂಗಳೆ ಹೆಸರೂ ಕೂಡ ಚಾಲ್ತಿಯಲ್ಲಿದೆ.

ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಹತ್ತು ಹಲವು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಸಚಿವೆ ಹೆಬ್ಬಾಳಕರ ಅವರ ಪುತ್ರ ಮೃನಾಲ್ ಹೆಚ್ಚಾಳಕರ ಅವರನ್ನು ಕಣಕ್ಕಿಳಿಸಬೇಕು ಎನ್ನುವ ಚರ್ಚೆ ನಡೆದಿದೆ. .

.ಬೆಳಗಾವಿಯ ಹೆಸರಾಂತ ವೈದ್ಯ ಗಿರೀಶ ಸೋನವಾಲ್ಕರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎನ್ನುವ ತಂತ್ರಗಾರಿಕೆ ನಡೆಯುತ್ತಿದೆ.
ಈ ಕುರಿತಂತೆ ಡಾ, ಸೋನವಾಲ್ಕರ ಅವರೊಂದಿಗೆ ಎರಡು ಹಂತದ ಸಭೆ ಕೂಡ ನಡೆಸಿದ್ದಾರೆಂದು ಗೊತ್ತಾಗಿದೆ. ಆದರೆ ಯಾವುದರ ಬಗ್ಗೆ ಚರ್ಚೆ ನಡೆಸಲಾಯಿತು ಎನ್ನುವುದು ಗೊತ್ತಾಗಿಲ್ಲ.