Headlines

ಹುಬ್ಬಳ್ಳಿಯಲ್ಲಿ AKBMS ಸಾಮಾನ್ಯ ಸಭೆ

ದಾವಣಗೆರೆ,

ಅಖಿಲ ಕರ್ನಾಟಕ ಮಹಾಸಭೆಯ ಸಾನಾನ್ಯ ಸಭೆ ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಯಲ್ಲಿ ನಡೆಸಲು ಚಿಂತನೆ ನಡೆದಿದೆ ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

ಇಂದಿಲ್ಲಿ ನಡೆದ 2 ನೇ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಬೆಂಗಳೂರು ಹೊರತುಪಡಿಸಿ ಬೇರೆ ಬೇರೆ ಕಡೆಗೆ ಸಾಮಾನ್ಯ ಸಭೆ ನಡೆಸುವ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಮಾಡುವ ಮೂಲಕ ಈ ಐತಿಹಾಸಿಕ ನಿರ್ಧಾರ ಮಾಡಲಾಗಿದೆ ಎಂದರು.

ಈಗ ಹುಬ್ಬಳ್ಳಿ ಯಲ್ಲಿ ಸಭೆ ನಡೆಸು ಬಗ್ಗೆ ಚಿಂತನೆ ನಡೆದಿದೆ. ಈ ಮೂಲಕ ಸಂಘಟನೆಗೆ ಆಧ್ಯತೆ ನೀಡಿದಂತಾಗುತ್ತದೆ ಎಂದು‌ ಹೇಳಿದರು.

ರಾಮನ‌‌ ಮೆರವಣಿಗೆ

ಅಯೋಧ್ಯೆಯಲ್ಲಿ ಶ್ರೀರಾಮನ‌ ಪ್ರತಿಷ್ಠಾಪನೆ ‌ದಿನವೇ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ರಾಮನ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹಾರನಹಳ್ಳಿ ಹೇಳಿದರು.

ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಚಿಂತನೆ ನಡೆದಿದೆ ಎಂದರು.

ಮಹಿಳಾ ಸಮಾವೇಶ

ಜನೇವರಿ 6-7 ರಂದು ಬೆಙಗಳೂರಿನಲ್ಲಿ ಮಹಿಳಾ ಸಮಾವೇಶ ಮಾಡಲಾಗುವುದು ಎಂದು ಅಶೋಕ‌ ಹಾರನಹಳ್ಳಿ ಪ್ರಕಟಿಸಿದರು.

ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರತಿಭಾ ಪುರಸ್ತಾರ ಕಾರ್ಯಕ್ರಮ ನಡೆಸಲಾಗುವುದು ಎಂದರು.

AKBMS ವತಿಯಿಂದ ಅನೇಕ ಯೋಜನೆಗಳನ್ನು ಚಾಲನೆ ನೀಡಲಾಗಿದೆ. ವಧು ವರರ ವೇದಿಕೆಯನ್ನು ಅತ್ಯುತ್ತಮವಾಗಿ ನಡೆಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಎಕೆಬಿಎಂಎಸ್ ಅಧ್ಯಕ್ಷರನ್ನು ದಾವಣಗೆರೆ ಬ್ರಾಹ್ಮಣ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಕೆಬಿಎಂಎಸ್ ವತಿಯಿಂದಲೂ ಸಹ ದಾವಣಗೆರೆ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!