ದಾವಣಗೆರೆ. ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನಡೆದಿರುವ ಕಾವೇರಿ ಹೋರಾಟಕ್ಜೆ ಅಖಿಲ ಕರ್ನಾಟಕ ಬ್ರಾಹ್ಮಣ ನಹಾಸಭಾ ಬೆಂಬಲ ಸೂಚಿದಿದೆ.

ಇಂದಿಲ್ಲಿ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಬ್ರಾಹ್ಮಣ ಮಹಾಸಭಾದ ಎರಡನೇ ಕಾರ್ಯಕಾರಿಣಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಜ್ಯದ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಮೂಲಕ ಕಾವೇರಿ ನದಿ ನೀರಿನ ಹೋರಾಟಕ್ಕೆ ಬೆಂಬಲಿಸುವ ಮಹತ್ವದ ತೀರ್ಮಾನವನ್ನು ಅಖಿಲ.ಕರ್ನಾಟಕ ಬ್ರಾಹ್ಮಣ ಮಹಾಸಭಾ ತೆಗೆದುಕೊಂಡಿತು.
ಮಹಿಳಾ ಮೀಸಲಾತಿ ಸ್ವಾಗತ

.ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಮಹತ್ತರವಾದಂತಹ ಮಹಿಳಾ ಮೀಸಲಾತಿಯ ಕ್ರಮವನ್ನು ಸ್ವಾಗತಿಸುವ ಮತ್ತೊಂದು ಠರಾವನ್ನುಮಹಾಸಭೆ ತೆಗೆದುಕೊಂಡಿದೆ.
ಧರ್ಮದ ನಿಂದನೆ ಸರಿಯಲ್ಲ

.ಇತ್ತೀಚಿನ ದಿನಗಳಲ್ಲಿ ಸನಾತನ ಧರ್ಮದ ಖಂಡನೆ, ಅವಹೇಳನ ಮತ್ತು ಬ್ರಾಹ್ಮಣರ ವಿರುದ್ಧದ ಟೀಕೆಗಳು ಅವ್ಯಾಹತವಾಗಿ ನಡೆದಿರುವ ಬಗ್ಗೆ ಆತಂಕ ವ್ಯಕ್ತವಾಯಿತು.
ಸಮಾಜದ ಕೆಲವು ಅಸ್ವಾಸ್ಥ್ಯ ಮನಸ್ಸುಗಳಿಗೆ ದ್ಯೋತಕವಾಗಿದ್ದು ಈ ರೀತಿಯ ಮನಸ್ಥಿತಿಯನ್ನು ಮಹಾಸಭೆ ಖಂಡಿಸಿತು
ವಿಪ್ರ ಸಮುದಾಯದ ಮಹಿಳೆಯರನ್ನು ಸಂಘಟಿತಗೊಳಿಸುವ ದೃಷ್ಟಿಯಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ಬೆಂಗಳೂರಿನಲ್ಲಿ ಜನವರಿ 6 ಮತ್ತು 7ರಂದು ನಡೆಸಲು ತೀರ್ಮಾನಿಸಲಾಯಿತು. ಮತ್ತು ಈ ಸಮಾವೇಶದಲ್ಲಿ ರಾಜ್ಯದ ಎಲ್ಲ ವಿಪ್ರ ಮಹಿಳೆಯರು ಕ್ರಿಯಾಶೀಲವಾಗಿ ಭಾಗವಹಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು
ಮೀಸಲಾತಿ- ಕೋರ್ಟ್ ಮೊರೆ

https://ebelagavi.com/index.php/2023/09/24/w/