ಬೆಳಗಾವಿ.
ಕಿರಿಯರಲ್ಲಿ ಹಿರಿಯ ರಾಜಕಾರಣಿ ಎನಿಸಿಕೊಂಡು ವಿನೂತನ ಕಾರ್ಯಗಳ ಮೂಲಕ ಸೈ ಎನಿಸಿಕೊಂಡವರು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಒಬ್ಬರು,

ತಮ್ಮ ಅಧಿಕಾರಾವಧಿಯಲ್ಲಿ ಎಂದಿಗೂ ಹೈಟೆಕ್ ರಾಜಕಾರಣ ಮಾಡದೇ ಕ್ಷೇತ್ರದ ಜನರ ಮಧ್ಯದಲ್ಲಿದ್ದು ಮುನ್ನಡೆದವರಲ್ಲಿ ಇವರು ಮೊದಲಿಗರು ಎನ್ನಬಹುದು
,
ಈಗ ವಿಶೇಷವಾಗಿ ಬೆಳಗಾವಿ ಗಣೇಶ ದರ್ಶನಕ್ಕೆ ಅವರು ಕಾರ್ಯಕರ್ತನ ಬೈಕ್ ಏರಿ ಹೊರಟಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಛತ್ತೀಸಗಡ ಚುನಾವಣೆ ಉಸ್ತುವಾರಿ ಜವಾಬ್ದಾರಿ ಮಧ್ಯೆಯೇ ಬಿಡುವು ಮಾಡಿಕೊಂಡ ಅಭಯ ಪಾಟೀಲರು, ಗಣೇಶ ಹಬ್ಬದ ಸಂದರ್ಭದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ಮಂಡಳಗಳಿಗೆ ಭೆಟ್ಟಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ,


ಗಮನಿಸಬೇಕಾದ ಸಂಗತಿ ಎಂದರೆ, ಹಬ್ಬ ಹರಿದಿನಗಳು ಬಂದರೆ, ಸಹಜವಾಗಿ ಎಲ್ಲರೂ ಕುಟುಂಬ ಸಮೇತ ತಿರುಗಾಡುವುದು ಸ್ವಾಭಾವಿಕ. ಆದರೆ ಅಭಯ ಪಾಟೀಲರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ದ್ವಿಚಕ್ರ ವಾಹನ ಏರಿ ಹೊರಟಿದ್ದು ಅವರ ಕಾರ್ಯವೈಖರಿ ಹೇಗಿದೆ ಎನ್ನುವುದನ್ನು ತೋರಿಸಿಕೊಡುತ್ತದೆ.

ನಿತ್ಯವೂ ಒಂದೊಂದು ಪ್ರದೇಶಕ್ಕೆ ಬೈಕ್ ಮೇಲೆ ಹೋಗಿ ಗಣೇಶ ದರ್ಶನ ಮಾಡುವುದಲ್ಲದೇ ಅಲ್ಲಿನ ಮಂಡಳದವರನ್ನು ಭೆಟ್ಟಿಯಾಗಿ ಹುರುದುಂಬಿಸುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡುತ್ತಿದ್ದಾರೆ

ಭಯ ಬೇಡ..ನಾವಿದ್ದೇವೆ..

ಗಣೇಶ ವಿಸರ್ಜನೆ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದೆ.

ಬೆಳಗಾವಿಯ ಪ್ರಮುಖ ಬೀದಿಗಳಲ್ಲಿ ಪೊಲೀಸ್ ತಂಡವು ಅರೆಸೇನಾ ಪಡೆಯೊಂದಿಗೆ ತೆರಳಿ ಪಥ ಸಂಚಬನ ನಡೆಸಿತು.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಕರ್ೆಟ ಎಸಿಪಿ ನಾರಾಯಣ ಬರಮನಿ, ಖಡಬೇಜಾರ ಎಸಿಪಿ ಅರುಣಕುಮಾರ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು,