ಬೆಳಗಾವಿ. ನಗರದ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ನಾಯಿಗಳ ಕಣ್ಮರೆಗೆ ಚಿರತೆ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು.

ಈ ಬಗ್ಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಳಳಕ್ಕೆ ಹೋಗಿ ತಪಾಸಣೆ ಮಾಡಿ ಹೆಜ್ಜೆ ಗುರುತು ಪರಿಶೀಲಿಸಿದಾಗ ಅದು ಚಿರತೆಯದ್ದಲ್ಲ ಎನ್ನುವುದನ್ಬು ಸ್ಪಷ್ಟಪಡಿಸಿದ್ದಾರೆ.

ಅಲ್ಲಿನ ವ್ಯಕ್ತಿಯೊಬ್ಬರು ಇಲ್ಲಿ ನಿತ್ಯ ನಾಯುಗಳು ಇರುತ್ತಿದ್ದವು. ಆದರೆ ಇಂದು ಕಾಣದಾಗಿದ್ದವು. ಮೇಲಾಗಿ ಅಲ್ಲಿ ಕಂಡು ಬಂದ ಹೆಜ್ಜೆ ಗುರುತನ್ನು ಗಮನಿಸಿ ಇದು ಚಿರತೆಯದ್ದಿರಬಹುದು ಎಂದು ಭಾವಿಸಿದ್ದರು. ಇದು ಎಲ್ಕೆಡೆ ಹಬ್ಬಿತ್ತು. ಈಗ ಪೊಲೀಸ ಮತ್ತು ಅರಣ್ಯ ಇಲಾಖೆ ಯವರ ಸ್ಪಷ್ಟನೆಯಿಂದ ಜನ ನಿಟ್ಟುಸಿರು ಭಿಡುವಂತಾಗಿದೆ.