Headlines

ನಮಗೂ ಬದುಕಲು ಬಿಡಿ- ಗುತ್ತಿಗೆದಾರನ ಅಳಲು…!

ಡಿಸಿ, ಆರ್ಸಿ ಮತ್ತು ಆಯುಕ್ತರಿಗೆ ದೂರು
ಸ್ವಚ್ಚತಾ ಗುತ್ತಿಗೆದಾರನಿಗೆ ಕಿರುಕುಳ ಆರೋಪ
.ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಅಧಿಕಾರಿ ಕಲಾದಗಿ ವಿರುದ್ಧ ಗುರುತರ ಆರೋಪ.


ಬೆಳಗಾವಿ.

ನಮಗೆ ಮುಕ್ತವಾಗಿ ಕೆಲಸ ಮಾಡಲು ಬಿಡಿ. ಜೊತೆಗೆ ನೆಮ್ಮದಿಯ ಬದುಕು ಸಾಗಿಸಲು ಬಿಡಿ. ಈ ರೀತಿಯ ನಿಮ್ಮ ಅನಗತ್ಯ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ನಾನು ಸೋತು ಹೋಗಿದ್ದೇನೆ. ಇದರಿಂದ ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಅವರಿಬ್ಬರೇ ಹೊಣೆ!.

ಮಹಾನಗರ ಪಾಲಿಕೆಯ ಕಸ ವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ಎಂಬುವರು ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ಮಾಡಿಕೊಂಡ ಮನವಿ ಇದು.

ಬೆಳಗಾವಿ ಮಹಾನಗರ ಪಾಲಿಕೆ ಇತುಹಾಸದಲ್ಲಿಯೇ ಮೊಟ್ಟ ಮೊದಲ‌ಬಾರಿಗೆ ಸ್ವಚ್ಚತಾ ಗುತ್ತಿಗೆದಾರ ರೊಬ್ವರು ಬಹಿರಂಗವಾಗಿ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಯಾವುದೇ ಆದೇಶವಿಲ್ಲದೇ ಸ್ಥಾಯಿ ಸಮಿತಿಯವರು 138 ಪೌರ ಕಾರ್ಮಿಕರನ್ನು ತೆಗೆದುಕೊಂಡಿದ್ದು ಇದಕ್ಕೆ ಕಾರಣ.

ಈ ರೀತಿ ಕಾನೂನು ಬಾಹಿರವಾಗಿ ತೆಗೆದುಕೊಂಡ ಪಿಕೆಗಳಿಗೆ ಸಂಬಳ ಕೊಡಲು ಪಾಲಿಕೆ ಆಯುಕ್ತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹೀಗಾಗಿ ಬೀಸೋ ದೊಣ್ಣೆಯಿಂದ ಪಾರಾಗಲು ಆರೋಗ್ಯ ಸ್ಥಾಯಿ ಸಮಿತಿಯವರು ಇಙತಹ ಗುತ್ತಿಗೆದಾರರ ಮೇಲೆ ಒತ್ತಡ ಹೇರುವ ಕೆಲಸ ನಡೆಸಿದ್ದಾರೆಂದು ಹೇಳಲಾಗಿದೆ.

ಈ‌ಸಂದರ್ಭದಲ್ಲಿ ಸ್ಥಾಯಿ ಸಮಿತಿಯವರ ವಾದವನ್ನು ಒಪ್ಪದ ಗುತ್ತಿಗೆದಾರ ಗೊಲ್ಲರ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವ ಬೆದರಿಕೆ ಹಾಕುವ ಕೆಲಸವನ್ನು ಸ್ಥಾಯಿ‌ ಸಮಿತಿಯ ಕೆಲವರು ಮಾಡಿದ್ದಾರೆಂದು ಹೇಳಲಾಗಿದೆ.

ಅಷ್ಟೇ ಅಲ್ಲ ಇತ್ತೀಚೆಗೆ ನಡೆದ ಆರೋಗ್ಯ ಸ್ಥಾಯಿ‌‌ ಸಮಿತಿ ಸಭೆಯ ದಿನದಂದು ನಮ್ಮನ್ನು ಕರೆಯಿಸಿ ನಿಂದಿಸಿ ಅವಮಾನ ಮಾಡಿದರು ಎಂದು ಗುತ್ತಿಗೆದಾರ ಗೊಲ್ಲರ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಇಷ್ಟು ದಿನ ನಮಗೆ ಯಾವುದೇ ಸಮಸ್ಯೆ ಅಗಿರಲಿಲ್ಲ. ಆದರೆ ಈಗ ನಮಗೆ ಅನಗತ್ಯವಾಗಿ ಕಿರಕುಳವಾಗುತ್ತಿದೆ, ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಅಧಿಕಾರಿ ಹನುಮಂತ ಕಲಾದಗಿ ಅವರಿಂದ ಅನಗತ್ಯ ಕಿರಿಕಿರಿ ಆಗುತ್ತದೆ . ಇದರಿಂದ ನಮಗೆ ಬದುಕುವುದು ಕಷ್ಟವಾಗುತ್ತಿದೆ. ಹೀಗಾಗಿ ಒಂದು ರೀತಿಯಲ್ಲಿ ಉಸಿರು ಗಟ್ಟುವ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!