ಹೆದರೋ ಮಾತೇ ಇಲ್ಲ..!

ಬೆಳಗಾವಿ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಕರನ್ನು ಹೊಂದಿದ ಹೆಗ್ಗಳಿಕೆ ನಿಮ್ಮ E belagavi ಗೆ ಸಲ್ಲುತ್ತದೆ.

ನಿಮಗೆ ಗೊತ್ತಿರಬಹುದು.

ಕಳೆದ ಅಗಸ್ಟ್ 17.ಕ್ಕೆ ಇ ಬೆಳಗಾವಿ ಡಾಟ್ ಕಾಮ್ ನ್ನು ಸಾರ್ವಜನಿಕರ ಮಡಿಲಿಗೆ ಹಾಕಲಾಗಿತ್ತು. ಅಂದಿನಿಂದ ಆರಂಭಗೊಂಡ ಈ‌ ನಿಮ್ಮ ಡಾಟ್ ಕಾಮ್ ನಿರೀಕ್ಷೆಗೆ ಮೀರಿ ವೀಕ್ಷಕರನ್ನು ಹೊಂದಿದೆ. ನಿನ್ನೆಯವರೆಗೆ ಒಟ್ಟಾರೆ. 38001 ವೀಕ್ಷಕರನ್ನು ಹೊಂದಿದೆ ಎಂದು ತಿಳಿಸಲು ಖುಷಿಯಾಗುತ್ತದೆ. ಇದಕ್ಕೆ ಕಾರಣಿಕರ್ತರಾದ ತಮಗೆ ಕೃತಜ್ಞತೆಗಳು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಒಳ್ಳೆಯ ಕೆಲಸಗಳು ಆದಾಗ ಅದು ಒಳ್ಳೆಯದು ಮತ್ತು ತಪ್ಪು ಮಾಡಿ ಯಡವಟ್ಟುಗಳ ಮೇಲೆ ಯಡವಟ್ಟುಗಳನ್ನು ಮಾಡಿಕೊಂಡಾಗ ಅದರ ಬಗ್ಗೆ ಮುಲಾಜಿಲ್ಲದ ಬೆಂಡೆತ್ತುವ ಕೆಲಸವನ್ನ ನಿಮ್ಮ ಇ ಬೆಳಗಾವಿ ಮಾಡುತ್ತ ಬಂದಿದೆ. ಮುಂದೆಯೂ ಮಾಡುತ್ತದೆ ಎನ್ನುವ ಭರವಸೆಯನ್ನು ಈ ಮೂಲಕ ಕೊಡುತ್ತೇವೆ.

138 ಪಿಕೆ ವಿವಾದ..!

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಯಾವುದೇ ಆದೇಶವಿಲ್ಲದೇ ತೆಗೆದುಕೊಂಡ 138 ಪೌರ ಕಾರ್ಮಿಕರ ಬಗ್ಗೆ ಇ ಬೆಳಗಾವಿ ಧ್ವನಿ ಎತ್ತಿತ್ತು .

ಇಲ್ಲಿ ಪಾಲಿಕೆ ಆಯುಕ್ತರು ಈ ಪಿಕೆಗಳ ಸಂಬಳದ ಕಡತಕ್ಕೆ ಸಹಿ ಮಾಡದೇ ವಾಪಸ್ಸು ಕಳಿಸಿದ್ದರು. ನಿಯಮಾನುಸಾರ ನೋಡಿದರೆ ಆಯುಕ್ತರು ತೆಗೆದುಕೊಂಡ ಕ್ರಮ ಸರಿಯಾಗಿತ್ತು. ಅದರ ಬಗ್ಗೆ ಮಾತೇ ಇಲ್ಲ. ಮೇಲಾಗಿ ಅದರ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯುವುದಾಗಿ ಆಯುಕ್ತರು ಹೇಳಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.

ಈ ಬಗ್ಗೆ ಇ ಬೆಳಗಾವಿ ಡಾಟ್ ಕಾಂ ಸೇರಿದಂತೆ ಇನ್ನುಳಿದ ಮಾಧ್ಯಮಗಳಲ್ಲಿ ವರದಿ ಪ್ರಕಟವಾದಾಗ ಕೆಲವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಮೈಮೇಲೆ ಕೋರಿಹುಳ ಹೊಕ್ಕಂತೆ ಮಾಡಿದರು.

ಗಮನಿಸಬೇಕಾದ ಸಂಗತಿ ಎಂದರೆ, 138 ಪಿಕೆಗಳು ಎರಡು ತಿಂಗಳು ಸಂಬಳ ಬರಬಹುದು ಎನ್ನುವ ಆಸೆಯಿಂದ ದುಡಿದರು. ಆದರೆ ಅವರಿಗೂ ತಮ್ಮ ನೇಮಕವೇ ನಿಯಮಾನುಸಾರ ಆಗಿಲ್ಲ ಎಂದು ಗೊತ್ತಾದಾಗ ಕಸ ಎತ್ತುವುದನ್ನು ಬಂದ್ ಮಾಡಿ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಆ ಸಂದರ್ಭದಲ್ಲಿ ನಿಮ್ಮ ಹತ್ತಿರ ಕೆಲಸಕ್ಕೆ ಸೇರಿದ ಆದೇಶ ಇದ್ದರೆ ಕೊಡಿ.‌ಸಂಬಳ ತಕ್ಷಣ ಪಾವತಿಸುವೆ ಎಂದು‌ ಆಯುಕ್ತರು ಪ್ರಶ್ನೆ ಹೇಳಿದ್ದರು..‌ ಹೀಗಾಗಿ‌ ಈಗಲೂ ಕೂಡ ಬಡಪಾಯಿ ಪಿಕೆಗಳು ಸಂಬಳಕ್ಕಾಗಿ ಪರದಾಟ ನಡೆಸಿದ್ದಾರೆ.

ಈಗ ಅಂತಹವರ ನೋವನ್ನು ಬಿಚ್ಚಿಟ್ಟಾಗ ಕೆಲವರಿಗೆ ಸಿಕ್ಕಾಪಟ್ಟೆ ಉರಿ ಶುರುವಾಗಿದೆ ಅಂತೆ. ಅದೇ ಕಾರಣದಿಂದ ಪಾಲಿಕೆ ವಿರುದ್ಧ ವರದಿ ಮಾಡಿದ ಇ ಬೆಳಗಾವಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಠರಾವ್ ನ್ನು ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ತೆಗೆದುಕೊಳ್ಳಲಾಗಿದೆ ಅಂತೆ. ಅದು ಸ್ವಾಗತವೇ.,! ಅದು ಅವರ ಹಕ್ಕು.

ಒಂದು ಮಾತು ಸ್ಪಷ್ಟ.

ಇ ಬೆಳಗಾವಿ ಯಾವುದೇ ವರದಿ ಪ್ರಕಟಿಸಿದರೆ ಅದಕ್ಕೆ ಪೂರಕ ದಾಖಲೆಗಳು ಇವೆ ಎಂದೇ ಅರ್ಥ. ಸ್ಥಾಯಿ ಸಮಿತಿ ತೆಗೆದುಕೊಂಡ ನಿರ್ಧಾರಕ್ಕೆ ಗೌರವ ಕೊಡುತ್ತೇವೆ. ಆದರೆ ಕಾನೂನು ಸಮರಕ್ಕೆ ನಾವೂ ರೆಡಿ ಇದ್ದೇವೆ ಎನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಅಗತ್ಯಬಿದ್ದರೆ ಇ ಬೆಳಗಾವಿ ವತಿಯಿಂದಲೇ ಲೋಕಾಯುಕ್ತರಿಗೆ ತನಿಖೆಗೆ ಮನವಿ ಮಾಡಿ ಪತ್ರ ಕೊಡಲೂ ಸಹ ಹಿಂಜರಿಯಲ್ಲ.

ಇ ಬೆಳಗಾವಿ ಯಾವಾಗಲೂ ಯಾರದೇ ವಿಷಯದಲ್ಲಿ ಪೂರ್ವಾಗ್ರಹ ಪಿಡೀತವಾಗಿ ವರದಿ ಪ್ರಕಟಿಸಿಲ್ಲ. ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಬೆಳ್ಳಂ ಬೆಳಿಗ್ಗೆ ಸಿಟಿ ರೌಂಡ್ಸ್ ಮಾಡಿದಾಗ ಅದರ ಬಗ್ಗೆ ಭೇಷ್ ಎನ್ನುವ ರೀತಿಯಲ್ಲಿ ವರದಿ ಪ್ರಕಟಿಸಿದೆ.

ಸ್ಮಾರ್ಟ ಸಿಟಿಗೆ ಬೆಳಗಾವಿ ಪ್ರಶಸ್ತಿ ಪಡೆದಾಗ ಅದರ ಬಗ್ಗೆನೂ ಬೆಳಕು ಚೆಲ್ಲುವ ವರದಿ‌ಮಾಡಿದೆ. ಆದರೆ ಮಾಡಿದ ತಪ್ಪುಗಳನ್ನು, ಯಡವಟ್ಟುಗಳನ್ನು ಮರೆಮಾಚಿ ಒಳ್ಳೆಯ ವರದಿ‌ ಮಾತ್ರ ಬರಬೇಕು ಎನ್ನುವ ನಿರೀಕ್ಷೆ ಇ ಬೆಳಗಾವಿ ಕಡೆಯಿಂದ ಯಾರೂ ಮಾಡಬೇಡಿ

ಅಗತ್ಯ ಬಿದ್ದರೆ ಈ ಪಿಕೆಗಳ ವಿಷಯದಲ್ಲಿ ಇ ಬೆಳಗಾವಿ ಕಡೆಯಿರುವ ಆಡಿಯೊ ರಿಕಾರ್ಡ, ವಿಡಿಯೊ ಸೇರಿದಂತೆ ಎಂದು ಯಾರು ಯಾವಾಗ ಹೇಗೆ ನಗದಾಗಿ ಲಕ್ಷ ಲಕ್ಷ ಹಣ ಪಡೆದುಕೊಂಡರು ಅಷ್ಟೇ ಅಲ್ಲ ಗುತ್ತಿಗೆದಾರರು ಯಾವ ಬ್ಯಾಂಕಿನಿಂದ ಹಣ ತೆಗೆಸಿ ಯಾರಿಗೆ‌ ಎಲ್ಲಿಗೆ ಹೋಗಿ 4 ಲಕ್ಷ ಕೊಟ್ಟು ಬಂದರು ಎನ್ನುವುದರ ಬಗ್ಗೆ ಪೂರಕ . ದಾಖಲೆಗಳು ಇವೆ ಸಮಯ ಬಂದಾಗ ಅದನ್ನು ವಿಚಾರಣೆ ನಡೆದಾಗ ಬಹಿರಂಗಪಡಿಸುತ್ತೇವೆ. ಕೊನೆಯ ಮಾತು. ನಾವು ತಲೆಬಾಗುವುದು ಕಾನೂನಿಗೆ ಮಾತ್ರ

ನಮಸ್ಕಾರ.

Leave a Reply

Your email address will not be published. Required fields are marked *

error: Content is protected !!