ಸ್ಮಾರ್ಟ್ ಸಿಟಿ ಪ್ರಶಸ್ತಿ ಯಶಸ್ಸಿನ ಹಿಂದೆ…!

ಬೆಳಗಾವಿಗೆ ಸ್ಮಾರ್ಟ ಸಿಟಿಗೆ ಸಮಗ್ರ ಪ್ರಶಸ್ತಿ. ಅರ್ಥ ಕಳೆದುಕೊಂಡ ಕೆಲವರ ಆರೋಪಗಳು. ರಾಷ್ಟ್ರಪತಿ ಪ್ರಶಸ್ತಿ ನೀಡಿದರೂ ಸತ್ಯ ಒಪ್ಪಿಕೊಳ್ಳದವರ ಮನಸ್ಥಿತಿ ಎಂತಹುದು?. ವಿರೋಧಕ್ಕೆ ವಿರೋಧ ಯಾಕೆ? .ಅಭಿವೃದ್ಧಿ ವಿಷಯದಲ್ಲಿ ರಾಜೀ ಆಗದ ಅಭಯ. ಅನುದಾನ ತರುವಲ್ಲಿ ಜಗಳಗಂಟ ಎನಿಸಿಕೊಂಡ ಅಭಯ.ಆರೋಪಗಳಿಗೆ ಬಗ್ಗಲಿಲ್ಲ.‌ಅಭಿವೃದ್ಧಿ ಬಿಡಲಿಲ್ಲ. ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಕಾರಣ ಮಾಡುವ ಎಂಇಎಸ್ ಶಿವಚರಿತ್ರೆ ಬಗ್ಗೆ ತುಟಿಪಿಟಕ್ಕೆನ್ನಲಿಲ್ಲ. ಅದನ್ನು ಪೂರ್ಣಗೊಳಿಸಿದ ಅಭಯ ಪಾಟೀಲ ಬಗ್ಗೆ ಮಾತಾಡೊದು ಬಿಡಲಿಲ್ಲ

ಬೆಳಗಾವಿ.

ಗಡಿನಾಡ ಬೆಳಗಾವಿ ಸ್ಮಾರ್ಟ ಸಿಟಿಗೆ ಸಮಗ್ರ ಪ್ರಶಸ್ತಿ ಬಂದ ನಂತರ ಅನಗತ್ಯ ಆರೋಪ ಮಾಡುವವರ ಕೆಲವರ ಬಾಯಿ ಬಂದ್ ಆಗಿದೆ.

ಮಾತೆತ್ತಿದರೆ ಸ್ಮಾರ್ಟ ಸಿಟಿ ಕಾಮಗಾರಿಯಲ್ಲಿ ಲೋಪ ವಾಗಿದೆ. ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಎನ್ನುವವರು ಈಗ ತೆರೆಗೆ ಸರಿದಿದ್ದಾರೆ.

ಅದಕ್ಕೆ ಕಾರಣ ಮಧ್ಯಪ್ರದೇಶದ ಇಂದೋರನಲ್ಲಿ ಖುದ್ದು ರಾಷ್ಟ್ರಪತಿ ಮುರ್ಮು ಅವರೇ ಬೆಳಗಾವಿ ಸ್ಮಾರ್ಟ ಸಿಟಿಗೆ‌ ಸಮಗ್ರ ಅಭಿವೃದ್ಧಿ ಪ್ರಶಸ್ತಿ ನೀಡಿದ್ದು.!

ಇಲ್ಲಿ ಸ್ಮಾರ್ಟ ಸಿಟಿಗೆ ಇನ್ಯಾರೊ ಪ್ರಶಸ್ತಿ ನೀಡಿದ್ದರೆ ಆರೋಪ ಮಾಡಿದವರ ಮಾತುಗಳನ್ನು ಭಾಗಶಃ ಒಪ್ಪಬಹುದಿತ್ತು. ಆದರೆ ಪ್ರಶಸ್ತಿ ನೀಡಿದ್ದು ಘನತೆವೆತ್ತ ರಾಷ್ಟ್ರಪತಿ ಗಳಾಗಿದ್ದರಿಂದ ಪ್ರಶಸ್ತಿ ತೂಕ ಹೆಚ್ವಿದೆ. ಜೊತೆಗೆ ಬೆಳಗಾವಿಗೂ ಗೌರವ ತಂದು‌ಕೊಟ್ಜಿದೆ. ಇಲ್ಲಿ ಸ್ಮಾರ್ಟ ಸಿಟಿಗೆ ಪ್ರಶಸ್ತಿ ಬಂದ ಶ್ರೇಯಸ್ಸು ಅಧಿಕಾರಿಗಳಿಗೆ ಸಲ್ಲಬೇಕು‌ ಆದರೆ ಅದಕ್ಕೆ ಅನುದಾನ ತಂದು‌ಕೊಟ್ಟ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು.

ಆಗ ಸಂಸದರಾಗಿದ್ದ ಸುರೇಶ ಅಂಗಡಿ ಈ ನಿಟ್ಟಿನಲ್ಲಿ ಆಗ ಹೆಚ್ಚಿನ ಪ್ರಯತ್ನ ಮಾಡಿದರು.ನಂತರ ಅಭಯ ಪಾಟೀಲ, ಅನಿಲ ಬೆನಕೆ ಅವರು ರಾಜ್ಯದ ಮೂಲಕ ಒತ್ತಡ ಹೇರಿ ಅನುದಾನ ಸದ್ಬಳಕೆಗೆ ಹೆಚ್ವಿನ ಒತ್ತು ಕೊಟ್ಟರು. ಇದೆಲ್ಲದರ ಪರಿಣಾಮ ಬೆಳಗಾವಿ ಸ್ಮಾರ್ಟ ಆಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರದ್ದು ತೂಕದ ಮಾತು. ಯಾವಾಗಲೂ ಮಾತು ಕಡಿಮೆನೇ. ಮಂತ್ರಿಯಾಗಿ ಬಂದ ನಂತರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿದ್ದರು

ಆಗ ಪಾಲಿಕೆ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸಧ್ಯ ಕೆಲವರು ಆರೋಪಿಸುವಂತೆ ಸ್ಮಾರ್ಟ ಸಿಟಿ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಅದೇ ಪ್ರಮುಖ ವಿಷಯವಾಗಿ ಚರ್ಚೆ ನಡೆಯಬೇಕಿತ್ತು.

ಆದರೆ ಗಮನಿಸಬೇಕಾದ ಸಂಗತಿ ಎಂದರೆ, ಯಾವಾಗಲೂ ಬಿಜೆಪಿಯ ಹಾಲಿ ಶಾಸಕ ಅಭಯ ಪಾಟೀಲರನ್ನು ವಿರೋಧಿಸುತ್ತ ಬಂದಿರುವ ಬೆರಳೆಣಿಕೆಯಷ್ಟು ಜನರು ದಾಖಲೆ ಇಲ್ಲದೇ ರೂಢಿಯಾಗಿ ಸ್ಮಾರ್ಟ ಸಿಟಿ ಬಗ್ಗೆ ಪ್ರಶ್ನೆ ಮಾಡಿದರು. ಆದರೆ ಈ ಪ್ರಶ್ನೆಗಳ ಒಳಮರ್ಮವನ್ನು ಅರಿತ ಸಚಿವ ಸತೀಶ ಜಾರಕಿಹೊಳಿ, ಮುಂದಕ್ಕೆ ವಿಚಾರ ಮಾಡೋಣ ಎಂದು ಹೇಳಿ ಸುಮ್ಮನಾಗಿ ಬಿಟ್ಟರು.

ಇದೇ ವೇದಿಕಯಲ್ಲಿ ಆಗ ಅಭಯ ಪಾಟೀಲ ಕೂಡ ಹಾಜರಿದ್ದರು. ಅವರೂ ಕೂಡ ಯಾರು ಬೇಕಾದವರು ಬಂದು ನನ್ನ ಕ್ಷೇತ್ರದಲ್ಲಿ ಸ್ಮಾರ್ಟ ಸಿಟಿ ವರ್ಕ್ ಬಗ್ಗೆ ತಪಾಸಣೆ ಮಾಬಹುದು ಎಂದರು.

ರಾಜ್ಯದಲ್ಲಿ ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ತನಿಖೆಗೆ ಅಡ್ಡಿ ಮಾಡೋರು ಯಾರೂ ಇಲ್ಲ . ಇಷ್ಟಾದ ಮೇಲೂ ತನಿಖೆ ನಡೆದಿಲ್ಲ ಎಂದರೆ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಇಲ್ಲಿ ಇನ್ನೊಂದು ಮಾತು ಎಂದರೆ, ಟಿಳಕವಾಡಿ ಭಾಗದಲ್ಲಿ ರಸ್ತೆ ಕಾಮಗಾರಿ ನಡೆದಿತ್ತು.‌ಆಗ ಒಬ್ಬರು ಸಾಮಾಜಿಕ‌ ಜಾಲತಾಣದಲ್ಲಿ ಕಾಮಗಾರಿ ಸರಿಯಾಗಿಲ್ಲ ಎಂದು ಪೋಸ್ಟ್ ಮಾಡಿದ್ದರು. ಆಗ ಆ ಪೋಸ್ಟನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕ ಅಭಯ ಪಾಟೀಲರು ಸ್ಥಳಕ್ಕೆ ಭೆಟ್ಟಿ ನೀಡಿ ಅದನ್ನು ಪೂರ್ಣವಾಗಿ ಮತ್ತೊಮ್ಮೆ ಹಾಕಿಸಿದರು. ಇದರರ್ಥ ಕಾಮಗಾರಿ ಗುಣಮಟ್ಟ ವಿಷಯದಲ್ಲಿ ಅಭಯ ಪಾಟೀಲ ರಾಜೀ ಆಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟ..

ಇದನ್ನು ಹೊರತುಪಡಿಸಿ ಸತೀಶ ಜಾರಕಿಹೊಳಿ ಸಭೆಯಲ್ಲಿ ದಕ್ಷಿಣಕ್ಕೆ ಹೆಚ್ಚು ಅನುದಾನ ತೆಗೆದುಕೊಂಡಿದ್ದಾರೆ ಎನ್ನುವ ಮಾತನ್ನು ಓರ್ವರು ಹೇಳಿದರು. ಅಂದರೆ ಆ ಶಾಸಕರು .ಕ್ಷೇತ್ರದ ಬಗ್ಗೆ ಕಾಳಜಿವಹಿಸಿದ್ದಾರೆಂದೇ ಅರ್ಥ.

ಮೊದಲಿನಿಂದಲೂ ಅಭಯ ಪಾಟೀಲರು ಕ್ಷೇತ್ರದ ಅಭಿವೃದ್ಧಿ ವಿಷಯ ಬಂದಾಗ ಸ್ವಪಕ್ಷೀಯರ ಜೊತೆಗೆ ವಾದಕ್ಕಿಳಿದ ಉದಾಹರಣೆಗಳು ಸಾಕಷ್ಟಿವೆ. ಹಿಙದೆ ನೇಕಾರರ ಅನುದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಆಗಲೂ ಕೂಡ ನೇಕಾರರಿಗೆ ಸಂಬಂಧಿಸಿದಂತೆ ವಾದ ಮಾಡಿ ಅಭಯ ಪಾಟೀಲ ಎದ್ದು ಬಂದಿದ್ದರು.‌ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ಅವರನ್ನು ಜಗಳಗಂಟ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

error: Content is protected !!