ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಆಡಳಿತ ಪಕ್ಕಕ್ಕಿಂತ ವಿರೋಧ ಪಕ್ಷದವರು ಭಾರೀ ಅಲರ್ಟ್ ಆಗಿದ್ದಾರೆ.
ಅಭಿವೃದ್ದಿ ಕೆಲಸಗಳಲ್ಲಿ ವೇಗ ಕಾಣುತ್ತಿಲ್ಲ ಈ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಶೇಠ ಅವರು ವಿರೋಧ ಪಕ್ಷದ ನಗರಸೇವಕರು ಮತ್ತು ಅಧಿಕಾರಿಗಳ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ, ಕಂದಾಯ ಸೇರಿದಂತೆ ಎಲ್ಲ ವಿಭಾಗಗಳ ಅಧಿಕಾರಿಗಳು ಹಾಜರದ್ದರು.
ನಗರಸೇವಕರಿಗೆ ಗೌರವ ಕೊಡುವುದು ಸೇರಿದಂತೆ ಅವರು ಹೇಳಿದ ಕೆಲಸಗಳನ್ನು ಆಧ್ಯತೆ ಮೇರೆಗೆ ಮಾಡಬೇಕು. ಮತ್ತು ತೆಗೆದುಕೊಂಡ ಕ್ರಮದ ಬಗ್ಗೆ ಮೇಲಿಂದ ಮೇಲೆ ವರದಿ ನೀಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.