ಕಳೆದ ದಿ. 5 ರಂದೇ ವರದಿ ಪ್ರಕಟಿಸಿತ್ತು. ಸೂಪರ್ ಸೀಡ್ ನೋಟೀಸ್ ಉಲ್ಲೇಖ ಮಾಡಲಾಗಿತ್ತು.
ಕೊನೆಗೂ ಸೂಪರ್ ಸೀಡ್ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ ಕಾಂಗ್ರೆಸ್ ಸರ್ಕಾರ.
2021 ರದ್ದೂ ಬಿಜೆಪಿನೇ ಹೊಣೆ ಎಂದ ಕಾಂಗ್ರೆಸ್ ಸರ್ಕಾರ.
ಬೆಳಗಾವಿ ಪಾಲಿಕೆಗೆ ತಲೆನೋವು ತಂದ ಪಿಕೆ ವಿವಾದ.
ಆರೋಗ್ಯ ಸ್ಥಾಯಿ ಸಮಿತಿಯಿಂದಲೇ ಪಾಲಿಕೆ ಮಾನ ಹರಾಜು.
ಬಿಜೆಪಿ ವರ್ಚಸ್ಸಿಗೂ ಧಕ್ಕೆ ತಂದ ಆರೋಗ್ಯ ಸ್ಥಾಯಿ ಸಮಿತಿ ಈ ಕಮಿಟಿಗೆ ಲಗಾಮು ಹಾಕಲು ಹಿಂಜರಿಕೆ ಏಕೆ?
ಬೆಳಗಾವಿ. ಪಾಲಿಕೆ ವಿಷಯದಲ್ಲಿ ಇ ಬೆಳಗಾವಿ ಡಾಟ್ ಕಾಮ್.(e belagavi.com) ಕಳೆದ ದಿ. 6 ರಂದು ಪ್ರಕಟಿಸಿದ ವರದಿ ನಿಜವಾಗಿದೆ.
2005 ರಲ್ಲಿ ಕನ್ನಡ ಮರಾಠಿ ವಿವಾದ ನೆಪವಾಗಿಟ್ಟುಕೊಂಡು ಆಗಿನ ಧರ್ಮಸಿಂಗ್ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತ್ತು.

ಈಗ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ತಂತ್ರ ಹೆಣೆಯುತ್ತಿದೆ. ಇದಕ್ಕೆ 138 ಪಿಕೆಗಳ ವಿವಾದ ಅಸ್ತ್ರ ಸಿಕ್ಕಿದೆ.
ಈಗ 2023 ರಲ್ಲಿ 138 ಪೌರ ಕಾರ್ಮಿಕರ ಅಕ್ರಮ ನೇಮಕಾತಿ ವಿವಾದವನ್ನೇ ಮುಂದಿಟ್ಟುಕೊಂಡು ಬೇರೆ ನೆಪವೊಡ್ಡಿ ಸೂಪರ್ ಸೀಡ್ ನೋಟೀಸ್ ನೀಡಬಹುದು ಎಂದು ಇ ಬೆಳಗಾವಿ ವರದಿಮಾಡಿತ್ತು. ಸಧ್ಯ ಪಾಲಿಕೆಗೆ ನೀಡಿರುವ ನೋಟೀಸ್ ನಲ್ಲಿ ಬೇರೆ ಬೇರೆ ಕಾರಣ ನೀಡಿ ನೋಟೀಸ್ ನೀಡಲಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಆಡಳಿತಾಧಿಕಾರಿ ಅವಧಿಯಲ್ಲಿನ. ವಿಷಯ ಮುಂದಿಟ್ಟುಕೊಂಡು ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಗೆ ಕಾಂಗ್ರೆಸ್ ಸರ್ಕಾರ ನೋಟೀಸ್ ಕಳಿಸಿದೆ.
ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಯುಕ್ತರು ತೆರಿಗೆ ಹೆಚ್ಚಳ ವಿಷಯವನ್ನು ಪ್ರಸ್ತಾಪಿಸಿದ್ದರು. ಆಡಳಿತಾಧಿಕಾರಿ ಅವಧಿಯಲ್ಲಿಯೇ ಇದು ಹೆಚ್ಚಳ ಆಗಬೇಕಿತ್ತು. ಆದರೆ ಆಗಿಲ್ಲ. ಈಗ ಹೆಚ್ಚಳ ಮಾಡಿ ಅದನ್ನು ಪಾಸ್ ಮಾಡಬೇಕು ಎಙದು ಹೇಖಿದ್ದರು.

ಆದರೆ ಅದರ ಬಗ್ಗೆ ಚರ್ಚೆ ನಡೆದು ಬಿಜೆಪಿಯವರೇ ಅದಕ್ಕೆ ಸಮ್ಮತಿ ನೀಡಿದ್ದರು. ಆದರೂ ಕೂಡ ಪಾಲಿಕೆಗೆ ನ ಮನನ ಸೂಪರ್ ಸೀಡ್ ನೋಟೀಸ್ ಜಾರಿ ಆಗಿದೆ.
ಮೇಯರ್ ಸಹಿ ಯಡವಟ್ಟು?

ಪಾಲಿಕೆಯಲ್ಲಿ ಆಸ್ತಿ ತೆರಿಗೆ ವಿಷಯ ಹೆಚ್ಚಳ ವಿಷಯ ಬಂದಾಗ ಸರ್ಕಾರದ ನುರ್ದೇಶನದನ್ವಯ ಅದನ್ನು ಹೆಚ್ಚಳ ಮಾಡುವ ತೀರ್ಮಾನವನ್ನು ಮೇಯರ್ ಪ್ರಕಟಿಸಿದ್ದರು.
ಆದರೆ ಅದರ ಬಗ್ಗೆ ಅಧಿಕಾರಿಗಳು 2023-24 ರಿಂದ ಎಂದು ಠರಾವ್ ಬುಕ್ ನಲ್ಲಿ ಉದ್ದೇಶಪೂರ್ವಕವಾಗಿ ತಪ್ಪಾಗಿ ನಮೂದಿಸಿ ಮೇಯರ ಕಡೆಯಿಂದ ಸಹಿ ಮಾಡಿಸಿಕೊಂಡಿದ್ದಾರೆ. ಇಲ್ಲಿ ಠರಾವ್ ಬುಕ್ ಗೆ ಸಹಿ ಮಾಡುವ ಮುನ್ನ ಅದನ್ನು ಓದಿ ತಿಳಿದು ಕೊಳ್ಳಬೇಕಿತ್ತು. ಅದನ್ನು ಮಾಡದೇ ಠರಾವ್ ಗೆ ಸಹಿ ಮಾಡಿದ್ದು ದೊಡ್ಡ ತಪ್ಪಾಗಿದೆ ಎಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ಅಧಿಕಾರಿಗಳೇ ಉದ್ದೇಶಪೂರ್ವಕವಾಗಿಈ ರೀತಿ ತಪ್ಪು ಬರೆದು ಸಹಿ ಮಾಎಇಸಿಕೊಂಡರಾ ಹೇಗೆ ಎನ್ನುವುದು ಗೊತ್ತಾಗಬೇಕಿದೆ.