ಪಾಲಿಕೆಗೆ ವಿಸರ್ಜನೆ ನೋಟಿಸ್ೆ
`ಅಧಿಕಾರಿಗಳ ವಿಳಂಬ ನೀತಿಯೇ ಕಾರಣ?’
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ನೀಡಿದ ನೋಟೀಸ್ ತಪ್ಪಿಸಬಹುದಿತ್ತು. ಆದರೆ ಇದರಲ್ಲಿ ಲೋಪ ಆಗಿದ್ದು ಯಾರಿಂದ?
ಇಂತಹುದೊಂದು ಪ್ರಶ್ನೆ ಮುಂದಿಟ್ಟುಕೊಂಡು ವಿಚಾರಣೆ ಮಾಡುತ್ತ ಹೋದರೆ ಲೋಪ ಅಧಿಕಾರಿಗಳ ಸುತ್ತವೇ ಗಿರಕಿ ಹೊಡೆಯುತ್ತದೆ.
ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ, ಮಹಾನಗರ ಪಾಲಿಕೆಯ ಮೇಯರ್ ಹೆಸರಿನ ಮೇಲೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕಳೆದ ದಿ. 21 ರಂದು ನೋಟೀಸ್ ಕಳಿಸಿದ್ದಾರೆ.

ಆದರೆ ಇಲ್ಲಿ ಅದಕ್ಕಿಂತ ಪೂರ್ವ ಅಂದರೆ ದಿ. 16 ರಂದು ಪಾಲಿಕೆಯ ಕೌನ್ಸಿಲ್ ಸಭೆ ನಡೆದಿತ್ತು. ಅದೇ ಸಭೆಯಲ್ಲಿ ಮೊದಲ ಬಾರಿಗೆ ಸರ್ಕಾರದ ನಿರ್ದೇಶನ ಉಲ್ಲೇಖಿಸಿ ಪಾಲಿಕೆ ಆಯುಕ್ತರು ಆಸ್ತಿ ತೆರಿಗೆ ಪರಿಷ್ಕರಣೆ ವಿಷಯ ಪ್ರಸ್ತಾಪಿಸಿದರು. ಆದರೆ ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷದವರು ಯಾವುದೇ ರೀತಿಯ ಆಕ್ಷೇಪಣೆ ಕೂಡ ಮಾಡಲಿಲ್ಲ. ಹೀಗಾಗಿ ಮೇಯರ್ ಕೂಡ ಸರ್ಕಾರದ ನಿರ್ದೇಶನದಂತೆ ರೂಲಿಂಗ್ ಸಹ ನೀಡಿದರು. ವಿಷಯ ಅಲ್ಲಿಗೆ ಮುಗಿದಿತ್ತು.
ನಂತರ ಆ ಕೌನ್ಸಿಲ್ ಠರಾವನ್ನು ಸಿದ್ಧಪಡಿಸಿ ಆಯುಕ್ತರ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವ ಕೆಲಸವನ್ನು ಅಧಿಕಾರಿಗಳೇ ಮಾಡಬೇಕು.
ಇಲ್ಲಿ ಕೌನ್ಸಿಲ್ ಠರಾವನ್ನು ಸಿದ್ಧಪಡಿಸಿ ಆಯುಕ್ತರ ಮೂಲಕ ಸರ್ಕಾರಕ್ಕೆ ಕಳಿಸಲು ಅನಗತ್ಯ ವಿಳಂಬ ಮಾಡಿದವರು ಯಾರು? ಕೌನ್ಸಿಲ್ ವಿಭಾಗದವರು ಈ ರೀತಿಯ ಠರಾವನ್ನು ತಕ್ಷಣ ರೆಡಿ ಮಾಡಿ ಕಳಿಸಿದ್ದರೆ ಪೌರಾಡಳಿತ ನಿರ್ದೇಶಕರು ನೋಟೀಸ್ ಕಳಿಸುವ ಪರಿಸ್ಥಿತಿನೇ ಬರುತ್ತಿರಲಿಲ್ಲ.

ಇಲ್ಲಿ ಇದೊಂದೇ ಅಲ್ಲ ಸ್ಥಾಯಿ ಸಮಿತಿ ಠರಾವ್ ಗಳೂ ಸಹ ವಿಳಂಬವಾಗಿ ಕಮಿಡಿಗೆ ಸೇರುತ್ತಿವೆ. ಮೇಲಾಗಿ ಸಭೆಯಲ್ಲಿ ಚರ್ಚೆ ಮಾಡಿದ ಕೆಲ ಸಂಗತಿಗಳನ್ನು ಕಡಿತಗೊಳಿಸಲಾಗುತ್ತಿರುವುದು ಏಕೆ ಎನ್ನುವುದು ಗೊತ್ತಾಗುತ್ತಿಲ್ಲ.
ಈಗ ಆಯುಕ್ತರು ಠರಾವ್ ನಂತರ ಮುಂದಿನ ಪ್ರಕ್ರಿಯೇ ತಕ್ಷಣಕ್ಕೆ ಬರುವಂತೆ ಮಾಡಿದರೆ ಈ ರೀತಿಯ ಮುಜುಗುರ ತಪ್ಪಿಸಬಹುದು ಎನ್ನುವ ಮಾತಿದೆ.
ಅಧಿಕಾರಿಗಳ ಮೇಲೆ ಕ್ರಮ ಏನು?
2021-22 ನೇ ಸಾಲಿನಿಂದ ಇಲ್ಲಿಯವರೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಆಗಿಲ್ಲ ಎನ್ನುವುದನ್ನು ಉಲ್ಲೇಖಿಸಿ ಪೌರಾಡಳಿತ ನಿರ್ದೇಧನಾಲಯದ ನಿರ್ದೇಶಕರು ಪಾಲಿಕೆಗೆ ವಿಸರ್ಜನೆ ನೋಟೀಸ್ ನೀಡಿದ್ದಾರೆ.
ಆದರೆ ನೋಟೀಸದಲ್ಲಿ ಉಲ್ಲೇಖಿಸಿದ ವರ್ಷದಲ್ಲಿ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇರಲೇ ಇಲ್ಲ. ಆಗ ಆಡಳಿತಾಧಿಗಳ ಅಧಿಕಾರವಿತ್ತು. ಆಗ ಅವರು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಿತ್ತು. ಈಗ ಸರ್ಕಾರ ಆ ಲೋಪ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆ್ಉಕೊಳ್ಳುವ ಕೆಲಸ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಮಾಡದೇ ಬಿಜೆಪಿ ಹಿಡಿತವಿರುವ ಪಾಲಿಕೆ ಅಲ್ಲಾಡಿಸಲು ಹೊರಟಿದೆ.